/newsfirstlive-kannada/media/post_attachments/wp-content/uploads/2025/04/ALL-PARTY-1.jpg)
ಪಹಲ್ಗಾಮ್ನಲ್ಲಿ ರಕ್ತದೋಕುಳಿ ಹರಿಸಿರೋ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳೋದಕ್ಕೆ ಭಾರತೀಯ ಸೇನೆ ಮುಂದಾಗಿದೆ. ಉಗ್ರರನ್ನ ಸದೆಬಡೆಯೋದಕ್ಕೆ ಕೇಂದ್ರ ಸರ್ಕಾರ ತಂತ್ರ ರೂಪಿಸ್ತಿದೆ. ಇನ್ನು ಉಗ್ರರಿಗೆ ಬಿಸಿ ಮುಟ್ಟಿಸೋದಕ್ಕೆ ಭಾರತೀಯ ಸೇನೆ ಮುಂದೆ ಹಲವು ಆಯ್ಕೆಗಳಿವೆ.
ಪಾಕ್ ಭಾಗದಲ್ಲಿ ಎಲ್‌ಓಸಿ ಬಳಿ 42 ಉಗ್ರರ ಶಿಬಿರಗಳಿವೆ. ಇವುಗಳನ್ನ ಭಾರತದ ಸೇನೆ ಟಾರ್ಗೆಟ್ ಮಾಡಬಹುದು. ಉಗ್ರರು, ಉಗ್ರರ ನಾಯಕರನ್ನೇ ಗುರಿಯಾಗಿಸಿ ಟಾರ್ಗೆಟ್ ಹತ್ಯೆಗಳನ್ನು ಮಾಡಬಹುದಾಗಿದೆ. ಪಾಕ್‌ನ ಉಗ್ರರು, ಉಗ್ರರ ಶಿಬಿರ ಗುರಿಯಾಗಿಸಿ ಮಿಸೈಲ್ ದಾಳಿ ನಡೆಸಬಹುದು. ಪೃಥ್ವಿ, ಅಗ್ನಿ, ಬ್ರಹ್ಮೋಸ್ ಮಿಸೈಲ್ ಬಳಸಿ ಉಗ್ರರನ್ನ ನಾಶ ಮಾಡಬಹುದಾಗಿದೆ.
ಭಾರತದ ಟಾರ್ಗೆಟ್ ಏನು?
ಟೆರರಿಸ್ಟ್ ಕ್ಯಾಂಪ್ ಟಾರ್ಗೆಟ್
- ಪಾಕ್ ಭಾಗದ LOC ಬಳಿ 42 ಉಗ್ರರ ಶಿಬಿರಗಳ ಟಾರ್ಗೆಟ್ ಮಾಡಬಹುದು
ಟಾರ್ಗೆಟ್ ಕಿಲ್ಲಿಂಗ್
- ಉಗ್ರರು, ಉಗ್ರರ ನಾಯಕರನ್ನೇ ಗುರಿಯಾಗಿಸಿ ಟಾರ್ಗೆಟ್ ಹತ್ಯೆ ಮಾಡಬಹುದು
- ಇಸ್ರೇಲ್ ಈ ರೀತಿಯಾಗಿಯೇ ಟಾರ್ಗೆಟ್ ಮಾಡಿ ಉಗ್ರರನ್ನ ಹತ್ಯೆ ಮಾಡಿದೆ
- ಜೈಷ್ ಏ ಮೊಹಮ್ಮದ್, ಲಷ್ಕರ್ ಏ ತೊಯ್ಬಾ, ದಿ ರೆಸಿಸ್ಟೆನ್ಸ್ ಫೋರ್ಸ್ ಟಾರ್ಗೆಟ್
ಮಿಸೈಲ್ ದಾಳಿ
- ಪಾಕ್‌ನ ಉಗ್ರರು, ಉಗ್ರರ ಶಿಬಿರ ಗುರಿಯಾಗಿಸಿ ಮಿಸೈಲ್ ದಾಳಿ ನಡೆಸಬಹುದು
- ಪೃಥ್ವಿ, ಅಗ್ನಿ, ಬ್ರಹ್ಮೋಸ್ ಮಿಸೈಲ್ ಬಳಸಿ ಉಗ್ರ ಶಿಬಿರಗಳನ್ನ ನಾಶಪಡಿಸಬಹುದು
ನೋ ಫಸ್ಟ್ ಪಾಲಿಸಿ ಬದಲಾವಣೆ
- ಭಾರತ ತಾನೇ ಮೊದಲಾಗಿ ಅಣ್ವಸ್ತ್ರ ಬಳಸಲ್ಲ ಎಂಬ ನೀತಿ ಅಳವಡಿಸಿಕೊಂಡಿದೆ
- ಇದನ್ನು ಬದಲಾಯಿಸಿ ತಾನೇ ಮುಂದಾಗಿ ನ್ಯೂಕ್ಲಿಯರ್ ಸೇರಿ ಇತರೆ ಅಸ್ತ್ರ ಬಳಕೆ
ನೌಕಾಪಡೆಯಿಂದ ಪಾಕ್ ನೌಕೆಗಳು ಬ್ಲಾಕ್
- ಕೆಂಪು ಸಮುದ್ರದಲ್ಲಿ ಹೌತಿ ಉಗ್ರರು ನೌಕೆಗಳ ಸಂಚಾರವನ್ನ ಬ್ಲಾಕ್ ಮಾಡಿದ್ದರು
- ಈಗ ಭಾರತದ ನೌಕಾಪಡೆ ಸಮುದ್ರದಲ್ಲಿ ಪಾಕ್ ನೌಕೆಗಳನ್ನು ಬ್ಲಾಕ್ ಮಾಡಬಹುದು
ಮಿಲಿಟರಿ ಅಪರೇಷನ್
- ಎರಡೂ ಅಣ್ವಸ್ತ್ರ ರಾಷ್ಟ್ರಗಳಾಗಿದ್ದು, ಪಾಕ್, ಉಗ್ರರ ವಿರುದ್ಧ ಮಿನಿ ಯುದ್ಧದ ಸಾಧ್ಯತೆ
- ಯುದ್ಧದ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ಮರುವಶಕ್ಕೆ ಭಾರತ ಯತ್ನಿಸಬಹುದು
ಭಾರತದ ರಕ್ಷಣೆಗೆ ಆಯ್ಕೆ
- ಎಸ್-400 ಟ್ರಯಂಫ್ ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ರಕ್ಷಣೆ
- ಪಾಕಿಸ್ತಾನದ ಮಿಸೈಲ್, ವಿಮಾನ ಹೊಡೆದುರುಳಿಸುವ ಶಕ್ತಿ ಇದೆ
- ರಷ್ಯಾದಿಂದ 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಖರೀದಿ ಮಾಡಲಾಗಿದೆ
- ಇಸ್ರೇಲ್ ಬಳಿ ಇರುವ ಐರನ್ ಡೋಮ್ ರೀತಿ ಇದು ಕೂಡ ಕೆಲಸ
- ವೈರಿಗಳ ಮಿಸೈಲ್ ಭಾರತದ ಭೂ ಭಾಗಕ್ಕೆ ಬರದಂತೆ ಹೊಡೆದುರುಳಿಸುತ್ತೆ
- ರಫೇಲ್ ಫೈಟರ್ ಜೆಟ್ ಮೂಲಕ ವಾಯುಪ್ರದೇಶದ ರಕ್ಷಣೆ
- ರಫೇಲ್ ಮೂಲಕ ಪಾಕ್ ಯುದ್ಧ ವಿಮಾನಗಳನ್ನ ಹೊಡೆದುರುಳಿಸಬಹುದು
- ಸದ್ಯ ಪಾಕಿಸ್ತಾನದ ಬಳಿ ಎಫ್- 16 ಯುದ್ಧ ವಿಮಾನಗಳು ಇವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ