ಬಾಹ್ಯಾಕಾಶ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾಗೆ ಸ್ವಾಗತಿಸಿದ ಕ್ಷಣ ಹೇಗಿತ್ತು..? VIDEO

author-image
Ganesh
Updated On
ಬಾಹ್ಯಾಕಾಶ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾಗೆ ಸ್ವಾಗತಿಸಿದ ಕ್ಷಣ ಹೇಗಿತ್ತು..? VIDEO
Advertisment
  • ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ
  • ISS ತಲುಪುತ್ತಿದ್ದಂತೆಯೇ ನಾಲ್ವರು ಗಗನಯಾತ್ರಿಗಳಿಗೆ ಸ್ವಾಗತ
  • ನಿನ್ನೆ ಸಂಜೆ 4:15ಕ್ಕೆ ಡಾಕಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ

ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಪ್ರವೇಶ ಮಾಡಿದ್ದಾರೆ. ಬೆನ್ನಲ್ಲೇ ಅಲ್ಲಿನ ಸಿಬ್ಬಂದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ISS ತಲುಪುತ್ತಿದ್ದಂತೆಯೇ ನಾಲ್ವರು ಗಗನಯಾತ್ರಿಗಳು ಹೂಸ್ಟನ್‌ನಲ್ಲಿ ಮಿಷನ್ ಕಂಟ್ರೋಲ್‌ಗೆ ಕೈಬೀಸಿದ್ದಾರೆ. ಅದರ ವಿಡಿಯೋವನ್ನು ನಾಸಾ ಹಂಚಿಕೊಂಡಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಸ್ವಾಗತ ವೀಡಿಯೊ..

ನಿನ್ನೆ ಸಂಜೆ 5:44 ಕ್ಕೆ ಆಕ್ಸಿಯಮ್-4 ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ಬಂದಿಳಿದ ನಂತರ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿ ಸ್ವಾಗತಿಸಿದರು. ಮಿಷನ್ ಪೈಲಟ್ ಸುಭಾಂಶು ಶುಕ್ಲಾ, ವಿಟ್ಸನ್ ಹಿಂದೆಯೇ ಇದ್ದರು. ಭಾರತೀಯ ಗಗನಯಾತ್ರಿಯೊಬ್ಬರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಬಾಹ್ಯಾಕಾಶ ನೌಕೆಯು ಬಾಹ್ಯಾಕಾಶ ನಿಲ್ದಾಣವನ್ನು ಸಮೀಪಿಸುತ್ತಿರುವುದನ್ನು ಲೈವ್ ವೀಡಿಯೊವನ್ನು NASA ತೋರಿಸಿದೆ. ನಿನ್ನೆ ಸಂಜೆ 4:15ಕ್ಕೆ ಡಾಕಿಂಗ್ ಪ್ರಕ್ರಿಯೆ ಪೂರ್ಣಗೊಂಡಿತು. ಬಾಹ್ಯಾಕಾಶ ನೌಕೆ ಮತ್ತು ISS ನಡುವೆ ಸಂವಹನ ಮತ್ತು ವಿದ್ಯುತ್ ಸಂಪರ್ಕ ಸ್ಥಾಪಿಸಿದ ತಕ್ಷಣ ‘ಡಾಕಿಂಗ್’ ಪ್ರಕ್ರಿಯೆ ಪೂರ್ಣಗೊಂಡಿದೆ.

ಇದನ್ನೂ ಓದಿ: ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಬಿಗ್​ ಶಾಕ್​.. ಇಂಟರ್ವ್ಯೂಗೂ ಎಂಟ್ರಿ ಕೊಟ್ಟ AI ತಂತ್ರಜ್ಞಾನ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment