/newsfirstlive-kannada/media/post_attachments/wp-content/uploads/2024/12/SHUBHAMSHU-SHUKLA-GAGANAYAAN.jpg)
ಮಂಗಳಯಾನ, ಚಂದ್ರಯಾನ, ಸೂರ್ಯಯಾನ.. ಒಂದಾ ಎರಡಾ.. ಯಾರೂ ಇಳಿಯದ ಚಂದಿರನ ದಕ್ಷಿಣ ದಿಕ್ಕಿನಲ್ಲಿ ಇಳಿದು ಕೂಡ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿತ್ತು. ಈಗ ಮತ್ತೊಂದು ರೀತಿಯಲ್ಲಿ ಭಾರತ ಸಾಧನೆಗೆ ಸಜ್ಜಾಗಿದೆ. ಸುನಿತಾ ವಿಲಿಯಮ್ಸ್, ಕಲ್ಪನಾ ಚಾವ್ಲಾರಂತೆ ಮತ್ತೊಬ್ಬ ಭಾರತದ ಗಗನಯಾತ್ರಿ ಆಗಸದಲ್ಲಿ ಹೊಸ ದಾಖಲೆ ಬರೆಯಲು ಸಿದ್ಧವಾಗಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಹೊಸ ದಾಖಲೆ
ಇಸ್ರೋ ಪಾಲಿಗೆ ಇವತ್ತು ಅತ್ಯಂತ ಮಹತ್ವದ ದಿನ. ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾರೂ ಮಾಡಿರದ ಹಲವು ದಾಖಲೆಗಳನ್ನ ಭಾರತ ತನ್ನ ಹೆಸರಲ್ಲಿ ಬರೆಸಿದೆ. ದೊಡ್ಡ ದೊಡ್ಡ ಯೋಜನೆಯನ್ನ ಕಡಿಮೆ ವೆಚ್ಚದಲ್ಲಿ ಮಾಡಿ ವಿಶ್ವವನ್ನೇ ನಿಬ್ಬೆರಗುಗೊಳಿಸಿದೆ. ಹೀಗಿರುವಾಗ ಭಾರತ ಇಂದು ಮತ್ತೊಂದು ಇತಿಹಾಸ ನಿರ್ಮಿಸಲಿದೆ. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭಾರತೀಯ ಕಾಲಮಾನ ಸಂಜೆ 5.22ಕ್ಕೆ ಅಮೆರಿಕದ ಆ್ಯಕ್ಸಿಯಾಮ್ ನೌಕೆಯಲ್ಲಿ ಪ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ತೆರಳಲಿದ್ದಾರೆ.
ಇದನ್ನೂ ಓದಿ: ಚೆನಾಬ್ ಬ್ರಿಡ್ಜ್ ಯಶಸ್ಸಿನ ಹಿಂದೆ ಬೆಂಗಳೂರು ಪ್ರಾಧ್ಯಾಪಕಿಯ ಶ್ರಮ.. ಯಾರು ಈ ಮಾಧವಿ ಲತಾ..?
ಭಾರತವು ಆಕ್ಸಿಯಂ-4 ಮಿಷನ್‌ಗೆ 548 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ, ಇದರಲ್ಲಿ ಶುಭಾಂಶು ಅವರ ಪ್ರಯಾಣ, ತರಬೇತಿ ಮತ್ತು ಮಿಷನ್‌ನ ಇತರ ವೆಚ್ಚಗಳು ಸೇರಿವೆ.
ಇಂದು ನಭಕ್ಕೆ ಶುಭಾಂಶು ಶುಕ್ಲಾ
- ಅಮೆರಿಕದ ಆ್ಯಕ್ಸಿಯಾಮ್ ನೌಕೆಯಲ್ಲಿ ನಾಲ್ವರು ಯಾತ್ರಿಗಳು ಪ್ರಯಾಣ
- ಭಾರತದ ಶುಭಾಂಶು ಶುಕ್ಲಾ ಹಾಗೂ ಅಮೆರಿಕದ ಪೆಗ್ಗಿ ವಿಟ್ಸನ್ ಪೈಲಟ್
- ಪೋಲೆಂಡ್‌ನ ವಿಜ್ಞಾನಿ ಹಾಗೂ ಇಂಜಿನಿಯರ್ ಸ್ಲವೋಝ್ ಉಝ್‌ನಾಸ್ಕಿ
- ಹಂಗೇರಿಯ ಇಂಜಿನಿಯರ್ ಟಿಬರ್ ಕಪು ಐಎಸ್‌ಎಸ್‌ಗೆ ಪಯಣ
- ಹೆಸರುಬೇಳೆ ಹಲ್ವಾ, ಕ್ಯಾರೆಟ್ ಹಲ್ವಾ, ಮಾವು, ಅನ್ನ ಕೊಂಡೊಯ್ಯುವ ಶುಕ್ಲಾ
- ನೌಕೆ ಹೊತ್ತು ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಸಂಜೆ 5.22ಕ್ಕೆ ಬಾಹ್ಯಾಕಾಶಕ್ಕೆ
- ನೌಕೆ ಸಂಜೆ ಹೊರಟರೂ ಅದು ಐಎಸ್‌ಎಸ್ ತಲುಪಲು 28 ಗಂಟೆ ಬೇಕು
- ಭೂಮಿಯ ವಿವಿಧ ಕಕ್ಷೆಯಲ್ಲಿ ಸುತ್ತಿದ ಬಳಿಕ ಐಎಸ್‌ಎಸ್ ತಲುಪುವ ನೌಕೆ
ಇದನ್ನೂ ಓದಿ:ಕೊನೆಗೂ ಭಾರತದಲ್ಲಿ ಲೈಸೆನ್ಸ್ ದಕ್ಕಿಸಿಕೊಂಡ ಸ್ಟಾರ್ ಲಿಂಕ್; ಇದರ ಹೈ-ಸ್ಪೀಡ್ ಎಷ್ಟು? ರೇಟ್ ದುಬಾರಿನಾ?
ಅಮೆರಿಕದ ಆ್ಯಕ್ಸಿಯಾಮ್ ನೌಕೆಯಲ್ಲಿ ನಾಲ್ವರು ಯಾತ್ರಿಗಳು ಪ್ರಯಾಣ ಕೈಗೊಳ್ಳಲಿದ್ದಾರೆ. ಭಾರತದ ಶುಭಾಂಶು ಶುಕ್ಲಾ ಹಾಗೂ ಅಮೆರಿಕದ ಪೆಗ್ಗಿ ವಿಟ್ಸನ್ ಪೈಲಟ್ ಆಗಿರಲಿದ್ದಾರೆ. ಪೋಲೆಂಡ್‌ನ ವಿಜ್ಞಾನಿ ಹಾಗೂ ಇಂಜಿನಿಯರ್ ಸ್ಲವೋಝ್ ಉಝ್‌ನಾಸ್ಕಿ, ಹಂಗೇರಿಯ ಇಂಜಿನಿಯರ್ ಟಿಬರ್ ಕಪು ಐಎಸ್‌ಎಸ್‌ಗೆ ತೆರಳುತ್ತಿದ್ದಾರೆ. ಶುಕ್ಲಾ ತಮ್ಮೊಂದಿಗೆ ಐಎಸ್‌ಎಸ್‌ಗೆ ಹೆಸರುಬೇಳೆ ಹಲ್ವಾ, ಕ್ಯಾರೆಟ್ ಹಲ್ವಾ, ಮಾವಿನ ಹಣ್ಣು ಮತ್ತು ಅನ್ನವನ್ನು ಕೊಂಡೊಯ್ಯಲಿದ್ದಾರೆ. ಈ ನೌಕೆಯನ್ನು ಹೊತ್ತು ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಇಂದು ಸಂಜೆ 5.22ಕ್ಕೆ ಬಾಹ್ಯಾಕಾಶಕ್ಕೆ ಜಿಗಿಯಲಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ನೌಕೆ ಸಂಜೆ ಹೊರಟರೂ ಅದು ಐಎಸ್‌ಎಸ್ ತಲುಪಲು 28 ಗಂಟೆ ಬೇಕು. ಭೂಮಿಯ ವಿವಿಧ ಕಕ್ಷೆಯಲ್ಲಿ ಸುತ್ತಿದ ಬಳಿಕ ನೌಕೆ ಐಎಸ್‌ಎಸ್ ತಲುಪಲಿದೆ.
ಇದನ್ನೂ ಓದಿ: ಐಫೋನ್ಗೆ ಈಗ iOS 26 ಸಪೋರ್ಟ್, ಲಿಕ್ವಿಡ್ ಗ್ಲಾಸ್ನಿಂದ ಇಂಟಲಿಜೆನ್ಸ್ವರೆಗೆ.. ಅಪ್ಡೇಟ್ಸ್ ಕೊಟ್ಟ ಆ್ಯಪಲ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ