/newsfirstlive-kannada/media/post_attachments/wp-content/uploads/2025/06/Shubhanshu-Shukhla-2.jpg)
ಮಂಗಳಯಾನ, ಚಂದ್ರಯಾನ, ಸೂರ್ಯಯಾನ.. ಒಂದಾ ಎರಡಾ.. ಯಾರೂ ಇಳಿಯದ ಚಂದಿರನ ದಕ್ಷಿಣ ದಿಕ್ಕಿನಲ್ಲಿ ಇಳಿದು ಕೂಡ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿತ್ತು. ಈಗ ಮತ್ತೊಂದು ರೀತಿಯಲ್ಲಿ ಭಾರತ ಸಾಧನೆಗೆ ಸಜ್ಜಾಗಿದೆ. ಸುನಿತಾ ವಿಲಿಯಮ್ಸ್, ಕಲ್ಪನಾ ಚಾವ್ಲಾರಂತೆ ಮತ್ತೊಬ್ಬ ಭಾರತದ ಗಗನಯಾತ್ರಿ ಆಗಸದಲ್ಲಿ ಹೊಸ ದಾಖಲೆ ಬರೆಯಲು ಇಂದು ಮಧ್ಯಾಹ್ನ ನಭಕ್ಕೆ ಚಿಮ್ಮಿದ್ದಾರೆ.
ಯಾರು ಅವರು..?
ಅವರ ಹೆಸರು ಶುಭಾಂಶು ಶುಕ್ಲಾ. ಗ್ರೂಪ್ ಕ್ಯಾಪ್ಟನ್ ಆಗಿರುವ ಶುಭಾಂಶು ಶುಕ್ಲಾ, ಇಂಡಿಯನ್ ಏರ್ಫೋರ್ಸ್ನ ಟೆಸ್ಟ್ ಪೈಲಟ್ ಕೂಡ ಹೌದು. ಜೊತೆಗೆ ಇಸ್ರೋ ISRO ಗಗನಯಾನಿ. ಉತ್ತರ ಪ್ರದೇಶದ ಲಖನೌನ ಸಾಮಾನ್ಯ ಕುಟುಂಬದಿಂದ ಬಂದಿರುವ ಶುಭಾಂಶು ಶುಕ್ಲಾ, ಲಖನೌನ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ಶಿಕ್ಷಣ ಪಡೆದರು. ಕಾರ್ಗಿಲ್ ಯುದ್ಧದ ನಂತರ ಕುಟುಂಬಕ್ಕೆ ತಿಳಿಸದೆ NDA ಪರೀಕ್ಷೆ ಬರೆದರು.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಭಾರತ.. ಶುಭಾಂಶು ಶುಕ್ಲಾರಿದ್ದ ನೌಕೆ ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದ ಫಾಲ್ಕನ್ ರಾಕೆಟ್
2005ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ B.Sc ಪದವಿ ಪಡೆದ ಶುಕ್ಲಾ, ಬೆಂಗಳೂರಿನ IIScನಿಂದ M.Tech ಪದವಿ ಪಡೆದುಕೊಂಡರು. ನಂತರ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ M.Tech ಪದವಿ ಮುಗಿಸಿ, 2006ರಲ್ಲಿ IAFನಲ್ಲಿ ಫೈಟರ್ ಪೈಲಟ್ ತರಬೇತಿ ಪಡೆದುಕೊಂಡರು. Su-30 MKI, MiG-21, ಜಾಗ್ವಾರ್ ಹಲವು ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ. ಸುಮಾರು 2000 ಗಂಟೆಗಳಿಗೂ ಹೆಚ್ಚು ಕಾಲ ಆಕಾಶದಲ್ಲಿ ಹಾರಾಟ ನಡೆಸಿದ್ದಾರೆ. 2024 ರಲ್ಲಿ ಬಡ್ತಿ ನೀಡಿ ಅವರನ್ನು ಗ್ರೂಪ್ ಕ್ಯಾಪ್ಟನ್ ಆಗಿ ನೇಮಿಸಲಾಯಿತು. ರಷ್ಯಾ ಮತ್ತು ಭಾರತದಲ್ಲಿ ಬಾಹ್ಯಾಕಾಶ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ಭಾರತವು ಆಕ್ಸಿಯಂ-4 ಮಿಷನ್‌ಗೆ 548 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದರಲ್ಲಿ ಶುಭಾಂಶು ಅವರ ಪ್ರಯಾಣ, ತರಬೇತಿ ಮತ್ತು ಮಿಷನ್‌ನ ಇತರ ವೆಚ್ಚಗಳು ಸೇರಿವೆ. ಇನ್ನು ಅಮೆರಿಕದ ಆ್ಯಕ್ಸಿಯಾಮ್ ನೌಕೆಯಲ್ಲಿ ನಾಲ್ವರು ಯಾತ್ರಿಗಳು ಪ್ರಯಾಣ ಕೈಗೊಂಡಿದ್ದಾರೆ. ಅಮೆರಿಕದ ಪೆಗ್ಗಿ ವಿಟ್ಸನ್ ಪೈಲಟ್ ಆಗಿರಲಿದ್ದಾರೆ. ಪೋಲೆಂಡ್‌ನ ವಿಜ್ಞಾನಿ ಹಾಗೂ ಇಂಜಿನಿಯರ್ ಸ್ಲವೋಝ್ ಉಝ್‌ನಾಸ್ಕಿ, ಹಂಗೇರಿಯ ಇಂಜಿನಿಯರ್ ಟಿಬರ್ ಕಪು ಐಎಸ್‌ಎಸ್‌ಗೆ ತೆರಳಿದ್ದಾರೆ.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹಾರಿದ ಶುಭಾಂಶು ಶುಕ್ಲಾ ಯಾರು..? ಅವರು ಏನು ಓದಿದ್ದಾರೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ