/newsfirstlive-kannada/media/post_attachments/wp-content/uploads/2025/06/India-Astronaut-Shubanshu-Shukla.jpg)
ನವದೆಹಲಿ: 41 ವರ್ಷದ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಯಾನ ಮುಂದೂಡಿಕೆಯಾಗಿದೆ. ಜೂನ್ 10ರ ಬದಲು ಜೂನ್ 11ರ ಸಂಜೆ 5.30ಕ್ಕೆ ನಿಗಧಿಯಾಗಿದೆ. ಈ ಬಗ್ಗೆ ಇಸ್ರೋದಿಂದ ಅಧಿಕೃತ ಮಾಹಿತಿ ಬಿಡುಗಡೆ ಆಗಿದೆ.
ನಾಳೆ ಅಂದ್ರೆ ಜೂನ್ 10ರಂದು ಅಮೆರಿಕಾದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಮ್-4 ರಾಕೆಟ್ ಉಡಾವಣೆ ಆಗಬೇಕಿತ್ತು. ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ಯಾತ್ರೆ ಆರಂಭಿಸಲು ಸಜ್ಜಾಗಿದ್ದರು. ಆದರೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಾರಣದಿಂದ ಮುಂದೂಡಿಕೆ ಆಗಿದೆ.
ಭಾರತೀಯ ಕಾಲಮಾನ ಬುಧವಾರ ಸಂಜೆ 5.30ಕ್ಕೆ ಆಕ್ಸಿಮ್-4 ರಾಕೆಟ್ ಉಡಾವಣೆ ಆಗುತ್ತಿದೆ. ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಈಗಾಗಲೇ ಸ್ಪೇಸ್ X ಫ್ಲೈಟ್ ಸೂಟ್‌ನಲ್ಲಿ ಫೈನಲ್ ಡ್ರೆಸ್ ರಿಹರ್ಸಲ್ ನಡೆಸಿದ್ದಾರೆ. ಪಾಲ್ಕನ್ 9ನಲ್ಲಿ ಡ್ರ್ಯಾಗನ್ ಸ್ಪೇಸ್ ಕ್ರಾಪ್ಟ್ ಉಡಾವಣೆಗೆ ತಯಾರಿ ನಡೆಸಲಾಗುತ್ತಿದೆ.
ಅಮೆರಿಕಾ, ಭಾರತ, ಪೋಲೆಂಡ್, ಹಂಗೇರಿ ದೇಶದ ನಾಲ್ವರು ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸುತ್ತಿದ್ದಾರೆ. ಈ ನಾಲ್ವರು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 60 ವೈಜ್ಞಾನಿಕ ಪ್ರಯೋಗ ನಡೆಸಲಿದ್ದಾರೆ. ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ಕೈಗೊಳ್ಳಲಿದ್ದಾರೆ.
ಲಕ್ನೋದಲ್ಲಿ ಹುಟ್ಟಿ ಬೆಳೆದು ಶುಭಾಂಶು ಶುಕ್ಲಾ ಅವರು ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದರು. ಅದಾದ ಬಳಿಕ ಬಾಹ್ಯಾಕಾಶ ಯಾನಕ್ಕೆ ಆಯ್ಕೆ ಆಗಿದ್ದಾರೆ. ಅಕ್ಸಿಮ್-4 ಮಿಷನ್ ಬಗ್ಗೆ ಅದ್ಭುತ ಅನುಭವ ಹೊಂದಿರುವ ಶುಭಾಂಶು ಶುಕ್ಲಾ ಅವರು ಅಮೆರಿಕಾದ ನಾಸಾದ ಜೊತೆಗೂಡಿ ಬಾಹ್ಯಾಕಾಶ ಯಾನ ಕೈಗೊಳ್ಳುತ್ತಿದ್ದಾರೆ. ಬಾಹ್ಯಾಕಾಶಕ್ಕೆ ಹೋಗುವ ಅವಕಾಶ ಸಿಕ್ಕಿದ್ದು ನನಗೆ ಅತಿ ದೊಡ್ಡ ಅದೃಷ್ಟ ಎಂದ ಶುಭಾಂಶು ಶುಕ್ಲಾ ಹೇಳಿದ್ದಾರೆ.
ಇದನ್ನೂ ಓದಿ: ಕೊನೆಗೂ ಭಾರತದಲ್ಲಿ ಲೈಸೆನ್ಸ್ ದಕ್ಕಿಸಿಕೊಂಡ ಸ್ಟಾರ್ ಲಿಂಕ್; ಇದರ ಹೈ-ಸ್ಪೀಡ್ ಎಷ್ಟು? ರೇಟ್ ದುಬಾರಿನಾ?
ಇಂದಿರಾಗಾಂಧಿ ಟು ನರೇಂದ್ರ ಮೋದಿ!
1984ರಲ್ಲಿ ರಷ್ಯಾದ ಸುಯೇಜ್ ಸ್ಪೇಸ್ ಕ್ರಾಫ್ಟ್‌ನಿಂದ ಭಾರತದ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಅದಾದ ಬಳಿಕ 41 ವರ್ಷಗಳ ಬಲಿಕ ಶುಭಾಂಶು ಶುಕ್ಲಾ ಅವರು ಭಾರತದಿಂದ ಬಾಹ್ಯಾಕಾಶ ಯಾತ್ರೆ ಹೋಗುವ ಅವಕಾಶ ಸಿಕ್ಕಿದೆ.
1984ರಲ್ಲಿ 8 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ರಾಕೇಶ್ ಶರ್ಮಾ ಅವರು ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಜೊತೆ ಬಾಹ್ಯಾಕಾಶದಿಂದಲೇ ಮಾತನಾಡಿದ್ದರು. ಆಗ ಇಂದಿರಾಗಾಂಧಿ ಅವರು ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ ಎಂದು ಕೇಳಿದ್ದರು. ಅದಕ್ಕೆ ರಾಕೇಶ್ ಶರ್ಮಾ ಅವರು ಸಾರೇ ಜಹಂಸೇ ಅಚ್ಚಾ ಎಂದಿದ್ದರು. ಈಗ ಅದೇ ರೀತಿ ಶುಭಾಂಶು ಶುಕ್ಲಾ ಕೂಡ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆಗೆ ಪ್ಲ್ಯಾನ್ ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ