ಪದವಿ ಓದಿದವರಿಗೆ ಸಿಹಿ ಸುದ್ದಿ.. 1500 ಅಪ್ರೆಂಟಿಸ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನ

author-image
Bheemappa
Updated On
​IT ಕಂಪನಿಗಳೂ ಒಂದೇ ಅಲ್ಲ.. ಬ್ಯಾಂಕ್​​ನಲ್ಲೂ ಕೆಲಸ ಸಿಗ್ತಿಲ್ಲ.. ಉದ್ಯೋಗಕ್ಕಾಗಿ ಕಾಯ್ತಿರೋರಿಗೆ ಶಾಕ್..!
Advertisment
  • ಈ ಕೆಲಸಗಳಿಗೆ ಆಯ್ಕೆ ಆದವರಿಗೆ ಸಂಬಳ ಎಷ್ಟು ನೀಡುತ್ತಾರೆ?
  • ನಿಮ್ಮ ವೃತ್ತಿ ಜೀವನಕ್ಕಾಗಿ ಇದೊಂದು ಸುವರ್ಣಾವಕಾಶ ಆಗಿದೆ
  • ಲೇಖನದಲ್ಲಿ ಹುದ್ದೆಗೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡಲಾಗಿದೆ

ಬ್ಯಾಂಕ್​ಗಳಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಈ ಹುದ್ದೆಗಳಿಗೆ ಪ್ರಯತ್ನ ಮಾಡಬಹುದು. ಇಂಡಿಯನ್ ಬ್ಯಾಂಕ್ ದೇಶದ್ಯಾಂತ ಇರುವ ಬ್ರ್ಯಾಂಚ್​​ಗಳಲ್ಲಿ ಉದ್ಯೋಗಗಳನ್ನ ಆಹ್ವಾನ ಮಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ನೋಟಿಫಿಕೇಶನ್ ಅನ್ನು ಬ್ಯಾಂಕ್ ರಿಲೀಸ್ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 42 ಉದ್ಯೋಗಗಳು ಮೀಸಲು ಇವೆ.

ಇಂಡಿಯನ್ ಬ್ಯಾಂಕ್ ಮುಖ್ಯ ಕಚೇರಿಯನ್ನು ಚೆನ್ನೈನಲ್ಲಿ ಹೊಂದಿದೆ. ಸದ್ಯ ಆನ್​ಲೈನ್​ ಅರ್ಜಿಗಳನ್ನು ಆಹ್ವಾನ ಮಾಡಿದ್ದು, ಅರ್ಹ ಹಾಗೂ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಅಪ್ರೆಂಟಿಸ್​ ಉದ್ಯೋಗಗಳಿಗೆ ಅಪ್ಲೇ ಮಾಡಬಹುದು. ಬ್ಯಾಂಕ್​​ನಿಂದ ತಮ್ಮ ವೃತ್ತಿ ಜೀವನ ರೂಪಿಸಿಕೊಳ್ಳುವವರಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಬಹುದು. ಇನ್ನು ಈ ಉದ್ಯೋಗಕ್ಕೆ ಸಂಬಂಧಿಸಿದ ಇತರೆ ಮಾಹಿತಿ ಈ ಲೇಖನ ಒಳಗೊಂಡಿದೆ.

ಒಟ್ಟು ಉದ್ಯೋಗಗಳು- 1500

ಉದ್ಯೋಗದ ಹೆಸರು- ಅಪ್ರೆಂಟಿಸ್

ಶೈಕ್ಷಣಿಕ ವಿದ್ಯಾರ್ಹತೆ- ಯಾವುದೇ ಪದವಿ

ವಯೋಮಿತಿ-

20 ರಿಂದ 28 ವರ್ಷಗಳು

ಇದನ್ನೂ ಓದಿ: IIIT ಬೆಂಗಳೂರು ವಿದ್ಯಾರ್ಥಿಗೆ ಲಕ್.. ಪ್ರತಿಷ್ಠಿತ ಕಂಪನಿಯಲ್ಲಿ 1.45 ಕೋಟಿ ರೂಪಾಯಿ ಸಂಬಳದ ಉದ್ಯೋಗ! ​

publive-image

ಆಯ್ಕೆ ಪ್ರಕ್ರಿಯೆ ಹೇಗೆ?

ಆನ್‌ಲೈನ್ ಲಿಖಿತ ಪರೀಕ್ಷೆ (100 ಅಂಕ)
ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ

ಅರ್ಜಿ ಶುಲ್ಕ ಎಷ್ಟು ಇದೆ?

ಸಾಮಾನ್ಯ, ಒಬಿಸಿ, ಇಡಬ್ಲುಎಸ್ ಅಭ್ಯರ್ಥಿಗಳು- 800 ರೂ.
ಎಸ್​​ಸಿ. ಎಸ್​ಟಿ, ಪಿಡಬ್ಲುಡಿ ಅಭ್ಯರ್ಥಿಗಳು- 175 ರೂಪಾಯಿಗಳು

ಬ್ಯಾಂಕ್​ ವೆಬ್​ಸೈಟ್​-http://www.indianbank.in

ಅಪ್ರೆಂಟಿಸ್ ಅವಧಿಯಲ್ಲಿ ಸಂಬಳ

ನಗರ ಹಾಗೂ ಮಹಾನಗರದ ಬ್ರ್ಯಾಂಚ್​​- 15,000 ರೂಪಾಯಿ
ಗ್ರಾಮೀಣ, ನಗರ ಗ್ರಾಮೀಣ ಬ್ರ್ಯಾಂಚ್​​- 12,000 ರೂಪಾಯಿ

ಹುದ್ದೆಯ ಮುಖ್ಯ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ ಯಾವುದು- 18 ಜುಲೈ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು- 07 ಆಗಸ್ಟ್​ 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment