/newsfirstlive-kannada/media/post_attachments/wp-content/uploads/2024/12/JOB_BANK-4.jpg)
ಉದ್ಯೋಗದಲ್ಲಿ ಸಾಕಷ್ಟು ಅನುಭವ ಇರುವ ಅಭ್ಯರ್ಥಿಗಳಿಂದ ಇಂಡಿಯನ್ ಬ್ಯಾಂಕ್ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಉದ್ಯೋಗಗಳಿಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಶುಲ್ಕ ಪಾವತಿ ಏನು ಇರುವುದಿಲ್ಲ. ಆದರೆ ಕೆಲಸದಲ್ಲಿ ಈಗಾಗಲೇ ಅನುಭವ ಇರುವಂತವರು ಮಾತ್ರ ಈ ಕೆಲಸಗಳಿಗೆ ಅಪ್ಲೇ ಮಾಡಬೇಕು ಎಂದು ಇಂಡಿಯನ್ ಬ್ಯಾಂಕ್ ತಿಳಿಸಿದೆ.
ವೈದ್ಯರು (Authorised Doctor) ಕೆಲಸಗಳಿಗೆ ಗುತ್ತಿಗೆ ಆಧಾರದ ಮೇಲೆ ಆಕಾಂಕ್ಷಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬ್ಯಾಂಕ್ ಈಗಾಗಲೇ ಅಧಿಕೃತವಾಗಿ ನೋಟಿಫಿಕೆಶನ್ ರಿಲೀಸ್ ಮಾಡಿದ್ದು ಅರ್ಜಿಗಳು ಆರಂಭವಾಗಿವೆ. ಅರ್ಜಿ ಸಲ್ಲಿಕೆ ಮಾಡಿದ ಆಕಾಂಕ್ಷಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿದ ಮೇಲೆ ಸಂದರ್ಶನದ ದಿನಾಂಕ, ಸಮಯ ಮತ್ತು ಸ್ಥಳವನ್ನು ತಿಳಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.
ಅಭ್ಯರ್ಥಿಗಳು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಅಲೋಪತಿ ವೈದ್ಯಕೀಯ ಪದ್ಧತಿಯಲ್ಲಿ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿರಬೇಕು. ಇದರ ಜೊತೆಗೆ ಸಂಬಂಧ ಪಟ್ಟ ಕೆಲಸದಲ್ಲಿ 10 ವರ್ಷಗಳ ಅನುಭವ ಪಡೆದಿರಬೇಕು. ಇನ್ನು ಈ ಉದ್ಯೋಗಕ್ಕೆ ಆಯ್ಕೆ ಆಗುವ ಅಭ್ಯರ್ಥಿಗಳನ್ನು ಕನಿಷ್ಠ 3 ವರ್ಷದವರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಸಂಸ್ಥೆ ನಿರ್ಧಾರದಂತೆ ಮುಂದೆ ಈ ಉದ್ಯೋಗವನ್ನು ಮುಂದುವರೆಸಬಹುದು.
ಇದನ್ನೂ ಓದಿ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಲ್ಲಿ ಖಾಲಿ ಹುದ್ದೆಗಳು
ಇಂಡಿಯನ್ ಬ್ಯಾಂಕ್ ನಿಯಮದಂತೆ ಉತ್ತಮ ಮಟ್ಟದ ಮಾಸಿಕ ವೇತನ ನೀಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಆರ್ಟಿಕಲ್ನ ಕೆಳಗೆ ನೀಡಿರುವ ವಿಳಾಸಕ್ಕೆ ಸಲ್ಲಿಸಬಹುದು. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಸಂದರ್ಶನದ ಮೂಲಕ ಕೆಲಸಕ್ಕೆ ನೇಮಕ ಮಾಡಲಾಗುತ್ತದೆ.
ಇದರಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳನ್ನು ವಿಶಾಖಪಟ್ಟಣಂನ ದ್ವಾರಕಾನಗರದ ಸಾಯಿ ಟ್ರೇಡ್ ಸೆಂಟರ್, 3 ನೇ ಮಹಡಿ, 2ನೇ ಲೇನ್ನಲ್ಲಿರುವ ಇಂಡಿಯನ್ ಬ್ಯಾಂಕ್ಗೆ ನೇಮಕ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆ ಮಾಡಬೇಕಾದ ವಿಳಾಸ ಕೆಳಗೆ ಇದೆ.
ವಿಳಾಸ
The Chief Manager,
VISAKHAPATNAM ZONE at Indian Bank,
ZONAL OFFICE VISAKHAPATNAM,
Sai Trade Centre, 3rd Floor, 2nd Lane Dwarakanagar, Visakhapatnam- 530016
ಅಪ್ಲೇ ಮಾಡಲು ಕೊನೆ ದಿನಾಂಕ- 23 ಡಿಸೆಂಬರ್ 2024
ಅರ್ಜಿ ಪ್ರತಿ ಈ ಲಿಂಕ್ನಲ್ಲಿದೆ-
https://static-cdn.publive.online/newsfirstlive-kannada/media/pdf_files/wp-content/uploads/2024/1220241202-authorised-doctor-advertisement.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ