ನವೆಂಬರ್​​ನಲ್ಲಿ ಬರೋಬ್ಬರಿ 14 ದಿನ ರಜೆ; ಏನಾದ್ರೂ ಬ್ಯಾಂಕ್​​ ಕೆಲಸ ಇದ್ರೆ ಕೂಡಲೇ ಮುಗಿಸಿಕೊಳ್ಳಿ!

author-image
Ganesh Nachikethu
Updated On
ನವೆಂಬರ್​​ನಲ್ಲಿ ಬರೋಬ್ಬರಿ 14 ದಿನ ರಜೆ; ಏನಾದ್ರೂ ಬ್ಯಾಂಕ್​​ ಕೆಲಸ ಇದ್ರೆ ಕೂಡಲೇ ಮುಗಿಸಿಕೊಳ್ಳಿ!
Advertisment
  • ನಿಮಗೆ ಈ ತಿಂಗಳಲ್ಲಿ ಯಾವುದಾದ್ರೂ ಬ್ಯಾಂಕ್​ ಕೆಲಸ ಇದ್ಯಾ?
  • ಹಣ ಡೆಪಾಸಿಟ್​ ಮಾಡಬೇಕಾ? ದುಡ್ಡು ಡ್ರಾ ಮಾಡಬೇಕಾ..?
  • ಏನಾದ್ರೂ ಚೆಕ್​​ ಕೆಲಸ ಇದ್ಯಾ? ಆದಷ್ಟು ಬೇಗ ಮುಗಿಸಿಕೊಳ್ಳಿ

ನಿಮಗೆ ಈ ತಿಂಗಳಲ್ಲಿ ಯಾವುದಾದ್ರೂ ಬ್ಯಾಂಕ್​ ಕೆಲಸ ಇದ್ಯಾ? ಹಣ ಡೆಪಾಸಿಟ್​ ಮಾಡಬೇಕಾ? ದುಡ್ಡು ಡ್ರಾ ಮಾಡಬೇಕಾ? ಏನಾದ್ರೂ ಚೆಕ್​​ ಕೆಲಸ ಇದ್ಯಾ? ಆದಷ್ಟು ಬೇಗ ಮುಗಿಸಿಕೊಳ್ಳಿ. ಕಾರಣ ನವೆಂಬರ್​ ತಿಂಗಳಲ್ಲಿ ಬರೋಬ್ಬರಿ 14 ದಿನಗಳು ರಜೆ ಇದೆ. ಹಾಗಾಗಿ ಅರ್ಧ ತಿಂಗಳು ಬ್ಯಾಂಕ್​​ಗಳು ಬಂದ್​ ಆಗಿರಲಿವೆ.

ಹಬ್ಬಗಳ ಮೇಲೆ ಹಬ್ಬಗಳು

ಇದು ನವೆಂಬರ್ ತಿಂಗಳು. ಕನ್ನಡ ರಾಜ್ಯೋತ್ಸವ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳಿವೆ. ಇಷ್ಟೇ ಅಲ್ಲ 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರ ಸೇರಿ ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕ ರಜಾ ದಿನಗಳು ಇವೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆ ನೀಡಲಾಗಿದೆ.

ಬ್ಯಾಂಕ್​ ಕೆಲಸ ಬೇಗ ಮುಗಿಸಿಕೊಳ್ಳಿ

ಇನ್ನು, ಬ್ಯಾಂಕ್​ ರಜೆ ಇದ್ರೂ ನೀವು ಆನ್ಲೈನ್​​ ಟ್ರಾನ್ಸ್​ಫರ್​​ ಮಾಡಿಕೊಳ್ಳಬಹುದು. ಆನ್ಲೈನ್​​ ವಹಿವಾಟುಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಬ್ಯಾಂಕಿಗೆ ಭೇಟಿ ನೀಡೋ ಕೆಲಸ ಇದ್ರೆ ಬೇಗ ಮುಗಿಸಿಕೊಳ್ಳಿ. ಕಾರಣ ಇಡೀ ಅರ್ಧ ತಿಂಗಳು ಬ್ಯಾಂಕ್​​ಗಳು ಬಂದ್​ ಆಗಿರಲಿವೆ. ಹಾಗಾಗಿ ನೀವು ಬೇಗ ಬ್ಯಾಂಕ್​​ಗೆ ಹೋಗಿ ಕೆಲಸ ಮುಗಿಸಿಕೊಳ್ಳುವುದು ಉತ್ತಮ.

ಯಾವ್ಯಾವ ದಿನ ಬ್ಯಾಂಕ್​​ ರಜೆ?

ನವೆಂಬರ್ 1: ಕನ್ನಡ ರಾಜ್ಯೋತ್ಸವ
ನವೆಂಬರ್ 2: ದೀಪಾವಳಿ
ನವೆಂಬರ್ 3: ಭಾನುವಾರ
ನವೆಂಬರ್ 7: ಛತ್ ಪೂಜೆ
ನವೆಂಬರ್ 8: ವಂಗಲ ಹಬ್ಬ
ನವೆಂಬರ್ 9: 2ನೇ ಶನಿವಾರ
ನವೆಂಬರ್ 10: ಭಾನುವಾರ
ನವೆಂಬರ್ 12: ಎಗಾಸ್ ಬಾಗ್ವಾಲ್ ಹಬ್ಬ
ನವೆಂಬರ್ 15: ಗುರುನಾನಕ್ ಜಯಂತಿ
ನವೆಂಬರ್ 17: ಭಾನುವಾರ
ನವೆಂಬರ್ 18: ಕನಕದಾಸರ ಜಯಂತಿ
ನವೆಂಬರ್ 22: ಲಬಾಬ್ ಡುಚೆನೆ ಹಬ್ಬ
ನವೆಂಬರ್ 23: 4ನೇ ಶನಿವಾರ
ನವೆಂಬರ್ 24: ಭಾನುವಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment