ಟೀಮ್ ಇಂಡಿಯಾ ಸೋಲಿಗೆ ಇವರೇ ಕಾರಣ.. ಕೊಹ್ಲಿ, KL ರಾಹುಲ್ ಸೇರಿ ಲಿಸ್ಟ್​ಲ್ಲಿ ಯಾರ್ ಯಾರಿದ್ದಾರೆ?

author-image
Bheemappa
Updated On
ಟೀಮ್ ಇಂಡಿಯಾ ಸೋಲಿಗೆ ಇವರೇ ಕಾರಣ.. ಕೊಹ್ಲಿ, KL ರಾಹುಲ್ ಸೇರಿ ಲಿಸ್ಟ್​ಲ್ಲಿ ಯಾರ್ ಯಾರಿದ್ದಾರೆ?
Advertisment
  • ಎರಡು ಇನ್ನಿಂಗ್ಸ್​ನಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯ ಹೇಗಿತ್ತು..?
  • 6ನೇ ಸ್ಲಾಟ್​ನಲ್ಲೂ ಬಂದರೂ ಕೈಗೂಡದ ರೋಹಿತ್ ಬ್ಯಾಟಿಂಗ್
  • 3 ದಿನಕ್ಕೆ 2ನೇ ಟೆಸ್ಟ್ ಫಿನೀಶ್, ಭಾರತ ಸೋಲಿಗೆ ಕಾರಣಗಳು?

ಅಡಿಲೇಡ್​ ಟೆಸ್ಟ್​ ಪಂದ್ಯ ಮೂರೇ 3 ದಿನಕ್ಕೆ ಮುಕ್ತಾಯವಾಗಿದೆ. ಗೆದ್ದು ಬೀಗುವ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ ಟೀಮ್​ ಇಂಡಿಯಾ ಸೋಲಿನಿಂದ ಭಾರೀ ಮುಖಭಂಗ ಅನುಭವಿಸಿದೆ. ಪಿಂಕ್​ ಬಾಲ್​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ಸೋಲು ಅನುಭವಿಸಿದ್ದು ಎಲ್ಲಿ ಎನ್ನುವ ಮಾಹಿತಿ ಇಲ್ಲಿದೆ.

ಪರ್ತ್​​ ಟೆಸ್ಟ್​ನಲ್ಲಿ ಭರ್ಜರಿ ಗೆಲುವು ದಾಖಲಿಸಿ ಬಾರ್ಡರ್​​-ಗವಾಸ್ಕರ್​​ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ ಅದ್ಧೂರಿ ಆರಂಭ ಮಾಡಿತ್ತು. ಆದ್ರೆ, ಅದೇ ಆತ್ಮವಿಶ್ವಾಸದಲ್ಲಿ ಅಡಿಲೇಡ್​​ ಅಖಾಡದಲ್ಲಿ ಪಿಂಕ್​ ಬಾಲ್​ ಫೈಟ್​​ಗಿಳಿದ ರೋಹಿತ್​ ಪಡೆ ಇದೀಗ ಸೋಲುಂಡಿದೆ. ಮೂರೇ ದಿನಕ್ಕೆ ಡೇ ನೈಟ್​ ಟೆಸ್ಟ್​ ಖತಂ ಆಗಿದೆ. ಪರ್ತ್​​ನಲ್ಲಿ ಅಬ್ಬರಿಸಿದ್ದ ಟೀಮ್​ ಇಂಡಿಯಾ ಅಡಿಲೇಡ್​​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ಹೀನಾಯ ಸ್ಥಿತಿಗೆ ತಲುಪಿತು. ಇದಕ್ಕೆ ಕಾರಣ ಟಾಪ್​ ಆರ್ಡರ್​ ಬ್ಯಾಟರ್ಸ್​ ಮತ್ತ ಅವರ ಫ್ಲಾಪ್​ ಶೋ.

publive-image

ಯಶಸ್ವಿ ಜೈಸ್ವಾಲ್​

ಪರ್ತ್​ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಯಂಗ್​ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಅಡಿಲೇಡ್​ ಟೆಸ್ಟ್​ ಫಸ್ಟ್​ ಇನ್ನಿಂಗ್ಸ್​ ಡಕೌಟ್​ ಆದರು. 2ನೇ ಇನ್ನಿಂಗ್ಸ್​ನಲ್ಲಾದ್ರೂ ಬಿಗ್​ ಇನ್ನಿಂಗ್ಸ್​ ಕಟ್ತಾರೆ ಅಂದ್ರೆ, ಅಲ್ಲೂ ವೈಫಲ್ಯ ಕಂಡ್ರು. 24 ರನ್​ಗಳಿಸಿ ಡಗೌಟ್​ ಸೇರಿದರು. ಜೈಸ್ವಾಲ್​ ವೈಫಲ್ಯ ಟೀಮ್​ ಇಂಡಿಯಾ ಆರಂಭದಲ್ಲೇ ಹಿನ್ನಡೆಗೆ ಕಾರಣವಾಯಿತು.

ಕೆ.ಎಲ್​ ರಾಹುಲ್​

ಫಸ್ಟ್​ ಟೆಸ್ಟ್​ನಲ್ಲಿ ಇಂಪ್ರೆಸ್ಸಿವ್​ ಆಟವಾಡಿ ನಾಯಕನ ಸ್ಥಾನವನ್ನೇ ಕಬ್ಜ ಮಾಡಿದ ಕೆ.ಎಲ್​ ರಾಹುಲ್​​, ಸಿಕ್ಕ ಅವಕಾಶವನ್ನ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಮೊದಲ ಇನ್ನಿಂಗ್ಸ್​​​ನಲ್ಲಿ​ 2 ಜೀವದಾನ ಸಿಕ್ಕರೂ 37 ರನ್​ ಗಳಿಸುವಷ್ಟರಲ್ಲಿ ರಾಹುಲ್​ ಸುಸ್ತು ಆದರು. ಇನ್ನು, 2ನೇ ಇನ್ನಿಂಗ್ಸ್​​ನಲ್ಲಿ 7 ರನ್​ ಗಳಿಸಿ ಪೆವಿಲಿಯನ್​ಗೆ ನಡೆದರು. ಎರಡೂ ಇನ್ನಿಂಗ್ಸ್​ ಟೀಮ್​ ಇಂಡಿಯಾಗೆ ಒಳ್ಳೇ ಸ್ಟಾರ್ಟೇ ಸಿಗಲಿಲ್ಲ.

ಶುಭ್​ಮನ್​ ಗಿಲ್​

ಪ್ರಿನ್ಸ್​​ ಶುಭ್​ಮನ್​ ಗಿಲ್​ ಕೂಡ ಅಡಿಲೇಡ್​ ಅಖಾಡದಲ್ಲಿ ಬಿಗ್​ ಸ್ಕೋರ್​ ಕಲೆ ಹಾಕುವಲ್ಲಿ ಫೇಲ್​ ಆದರು. 31 ರನ್​ಗಳಿಸಿ ಮೊದಲ ಇನ್ನಿಂಗ್ಸ್​ನಲ್ಲಿ ಔಟಾಗಿದ್ದ ಗಿಲ್​, 2ನೇ ಇನ್ನಿಂಗ್ಸ್​​ನಲ್ಲಿ​ 28 ರನ್​ಗಳಿಸಿ ನಿರ್ಗಮಿಸಿದ್ರು. ಎರಡೂ ಇನ್ನಿಂಗ್ಸ್​ನಲ್ಲಿ 3ನೇ ಕ್ರಮಾಂಕದ ಗಿಲ್​​ ಫೇಲ್ಯೂರ್​​ ತಂಡಕ್ಕೆ ಹೊರೆಯಾಯ್ತು.

ವಿರಾಟ್​ ಕೊಹ್ಲಿ

ಕೊಹ್ಲಿಯದ್ದು ಅದೇ ರಾಗ, ಅದೇ ಹಾಡು. ಫಸ್ಟ್​ ಟೆಸ್ಟ್​​ನಲ್ಲಿ ಶತಕ ಸಿಡಿಸಿದ ಅತಿಯಾದ ಆತ್ಮವಿಶ್ವಾಸದಲ್ಲಿ ಅಭ್ಯಾಸ ಪಂದ್ಯವನ್ನೂ ಆಡದೇ ನೇರವಾಗಿ ಅಖಾಡಕ್ಕಿಳಿದ ವಿರಾಟ್​ ಕೊಹ್ಲಿ ಅಡಿಲೇಡ್​​ನಲ್ಲಿ ಮಕಾಡೆ ಮಲಗಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ 7, 2ನೇ ಇನ್ನಿಂಗ್ಸ್​ನಲ್ಲಿ 11. ಟೋಟಲ್​ ಆಗಿ 18 ರನ್​​.. ಇಷ್ಟಕ್ಕೇ ಕೊಹ್ಲಿ ಕಥೆ ಕೆಲಸ ಖತಂ.

ಇದನ್ನೂ ಓದಿ: IND vs AUS; ರೋಹಿತ್ ಪಡೆಗೆ ಭಾರೀ ಮುಖಭಂಗ.. ಬ್ಯಾಟಿಂಗ್ ವೈಫಲ್ಯ, ಟೆಸ್ಟ್​ ಸೋತ ಟೀಮ್ ಇಂಡಿಯಾ

publive-image

ಕ್ಯಾಪ್ಟನ್ ರೋಹಿತ್​ ಶರ್ಮಾ

ತಂಡಕ್ಕಾಗಿ ಓಪನರ್​ ಸ್ಲಾಟ್​ ತ್ಯಾಗ ಮಾಡಿದ ಕ್ಯಾಪ್ಟನ್​ ರೋಹಿತ್​ ಲೋವರ್​​ ಆರ್ಡರ್​ ತಂಡಕ್ಕಾಗಿ ರನ್​ ಕೊಡುಗೆ ನೀಡುವಲ್ಲಿ ಫೇಲ್​ ಆದರು. ಫಸ್ಟ್​​ ಇನ್ನಿಂಗ್ಸ್​ನಲ್ಲಿ 3 ರನ್​ಗಳಿಸಿ ಆಟ ಮುಗಿಸಿದ ರೋಹಿತ್​ ಶರ್ಮಾ, 2ನೇ ಇನ್ನಿಂಗ್ಸ್​ನಲ್ಲಿ 6 ರನ್​ಗಳಿಗೆ ಡಗೌಟ್​​ ಸೇರಿದರು. ಇಡೀ ಪಂದ್ಯದಲ್ಲಿ ತಂಡಕ್ಕೆ ನಾಯಕನ ಕಾಣಿಕೆ ಕೇವಲ 9 ರನ್​ ಮಾತ್ರ.

ಟೀಮ್​ ಇಂಡಿಯಾದ ಟಾಪ್​ 5 ಬ್ಯಾಟರ್​​ಗಳ ವೈಫಲ್ಯವೇ ಸದ್ಯ ತಂಡವನ್ನ ಸೋಲಿಗೆ ತಳ್ಳಿತು. ರಿಷಬ್​ ಪಂತ್​, ನಿತೀಶ್ ರೆಡ್ಡಿ​ ಕೂಡ 3ನೇ ದಿನ ಜಾಸ್ತಿ ಸಮಯ ಇರಲಿಲ್ಲ. ಬೇಗನೇ ಆಟ ಮುಗಿಸಿದರು. ಇವರ ನಂತರ ಬಂದ ಆರ್​ ಅಶ್ವಿನ್, ಹರ್ಷಿತ್ ರಾಣಾ, ಬೂಮ್ರಾ ಹಾಗೂ ಸಿರಾಜ್ 10 ರನ್​ಗಳ ಗಡಿ ದಾಟಲಿಲ್ಲ. ಇದರಿಂದ ಕೇವಲ 19 ರನ್​ ಮಾತ್ರ ಟಾರ್ಗೆಟ್ ನೀಡಿದಂತೆ ಆಯಿತು. ಈ ಅತ್ಯಂತ ಸುಲಭದ ಗುರಿಯನ್ನು ಆಸಿಸ್​ ಪಡೆ ಕೆಲವೇ ನಿಮಿಷಗಳಲ್ಲಿ ಮುಗಿಸಿ ವಿಜಯ ಸಾಧಿಸಿತು. ಈ 2ನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದಿದ್ದರಿಂದ ಸರಣಿಯಲ್ಲಿ 1-1 ರಿಂದ ಮುನ್ನಡೆ ಪಡೆದುಕೊಂಡಿವೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment