Advertisment

ಭಾರತದಲ್ಲಿವೆ 8 ವಿಶೇಷ ತಳಿಯ ಹಸುಗಳು.. ಇವುಗಳನ್ನು ಸಾಕುವ ರೈತನ ಬಾಳು ಬಂಗಾರ ಆಗುವುದು ಖಚಿತ!

author-image
Gopal Kulkarni
Updated On
ಭಾರತದಲ್ಲಿವೆ 8 ವಿಶೇಷ ತಳಿಯ ಹಸುಗಳು.. ಇವುಗಳನ್ನು ಸಾಕುವ ರೈತನ ಬಾಳು ಬಂಗಾರ ಆಗುವುದು ಖಚಿತ!
Advertisment
  • ಹೈನುಗಾರಿಕೆಗೆ ಹೇಳಿ ಮಾಡಿಸಿದ ದೇಸಿ ತಳಿ ಹಸುಗಳು ಇವು
  • ಈ 8 ಹಸುಗಳು ನೀಡುತ್ತವೆ ನಿತ್ಯ ಹತ್ತಾರು ಲೀಟರ್ ಹಾಲು
  • ರೈತನಿಗೆ ಉಳುಮೆಯ ಜೊತೆಗೆ ಹಾಲು ಉತ್ಪಾದನೆಗೂ ಸಾಥ್

ಭಾರತದಲ್ಲಿ ಹೈನುಗಾರಿಕೆಯನ್ನು ನೆಚ್ಚಿಕೊಂಡು ಅನೇಕ ರೈತರು ಇದ್ದಾರೆ. ಹೈನುಗಾರಿಕೆಯೇ ಅವರ ಮೂಲ ಉದ್ಯೋಗ. ಎಮ್ಮೆ, ಆಕಳು, ಮೇಕೆ, ಕುರಿ ಹೀಗೆ ಹೆಚ್ಚು ಬೇಡಿಕೆಯಿರುವ ಜಾನುವಾರುಗಳ ಹಾಲುಗಳನ್ನು ಮಾರಿ ಜೀವನವನ್ನು ನಡೆಸುತ್ತಾರೆ. ಆದ್ರೆ ಅನೇಕ ರೈತರಿಗೆ ಯಾವ ತಳಿಯ ಎಮ್ಮೆ ಅಥವಾ ಹಸುವನ್ನು ಸಾಕಬೇಕು ಅತಿಹೆಚ್ಚು ಹಾಲು ಕೊಡುವ ಹಸು ಯಾವುದು ಎಂಬುದರ ಬಗ್ಗೆ ಅಷ್ಟೊಂದು ತಿಳುವಳಿಕೆ ಇರೋದಿಲ್ಲ. ಭಾರತದಲ್ಲಿ ಎಮ್ಮೆ ಹಾಲಿಗಿಂತ ಹಸುವಿನ ಹಾಲಿಗೆ ಬೇಡಿಕೆ ಜಾಸ್ತಿ ಇದೆ.

Advertisment

ನಿಮಗೆ ಗೊತ್ತಿರಲಿ ಭಾರತದಲ್ಲಿ ಕೆಲವು ತಳಿಗಳ ಹಸುಗಳು ಅತಿಹೆಚ್ಚು ಹಾಲು ಕೊಡುವುದರಲ್ಲಿ ಪ್ರಸಿದ್ಧಿ ಪಡೆದಿವೆ. ಆದರೆ ಭಾರತದ ರೈತರು ಅತಿಹೆಚ್ಚು ಪ್ರಧಾನ್ಯತೆ ನೀಡುವುದು ವಿದೇಶಿ ತಳಿ ಹಸುಗಳಿಗೆ, ಇಲ್ಲವೇ ಕಡಿಮೆ ಹಾಲು ಕೊಡುವ ಹಸುವನ್ನು. ಭಾರತದಲ್ಲಿ ಹೆಚ್ಚು ರೈತರು ಸಾಕುವುದು ವಿದೇಶಿ ತಳಿಗಳಾದ ಜರ್ಸಿ ಹೋಲ್‌ಸ್ಟೈನ್ ಫ್ರೀಸಿಯನ್ ನಂತಹ ತಳಿಗಳನ್ನು

ಇದನ್ನೂ ಓದಿ:City Of Knives: ಇದು ದೇಶದ ಚಾಕು ನಗರಿ! ಯಾವ ರಾಜ್ಯದಲ್ಲಿದೆ? ಈ ಸಿಟಿಗೆ ಈ ಹೆಸರು ಬರಲು ಕಾರಣವೇನು?

ಆದರೆ ನೆನಪಿರಲಿ ಇವುಗಳನ್ನು ಮೀರಿ ಹಾಲು ಕೊಡುವ ಪ್ರಮುಖ ಹಸುಗಳು ನಮ್ಮ ದೇಶದಲ್ಲಿಯೇ ಇವೆ. ಇನ್ನು ಇವುಗಳ ಹಾಲು ಮತ್ತು ಸಗಣಿ ಮತ್ತು ಮೂತ್ರಗಳು ಕೂಡ ರೈತರ ಸಹಾಯಕ್ಕೆ ಬರುತ್ತವೆ ಅಂತಹ ವಿಶೇಷ ತಳಿಗಳ ಬಗ್ಗೆ ನಾವು ಇಲ್ಲಿ ನಿಮಗೆ ಪರಿಚಯ ಮಾಡಿಕೊಡುತ್ತೇವೆ.

Advertisment

publive-image

1. ಗಿರ್ ಹಸು: ಗುಜರಾತ್ ಮೂಲದ ಈ ಹಸು ಭಾರತದಲ್ಲಿಯೇ ಅತ್ಯಂತ ಪ್ರಸಿದ್ಧವಾದ ಹಸುಗಳ ತಳಿಗಳಲ್ಲಿ ಒಂದು. ಇದು ದೇಶದ ಯಾವ ಭಾಗದಲ್ಲಿಯಾದರು ಸಾಕಬಹುದಾದ ಮತ್ತು ಎಲ್ಲಾ ವಾತಾವರಣಗಳಿಗೆ ಹೊಂದಿಕೊಳ್ಳಬಲ್ಲ ರೈತ ಸ್ನೇಹಿ ಹಸು. ಇದು ಪ್ರತಿ ದಿನ ಕನಿಷ್ಠವೆಂದರೂ 6 ರಿಂದ 10 ಲೀಟರ್ ಹಾಲನ್ನು ಕೊಡುತ್ತದೆ.

publive-image

2. ಸಹಿವಾಲಾ ಹಸು: ಇದು ಕೂಡಾ ಭಾರತದ ಅತ್ಯಂತ ಅಪರೂಪದ ಹಾಗೂ ವಿಶೇಷವಾದ ದೇಶಿ ಹಸು. ಮೂಲತಃ ಪಂಜಾಬ್​ನ ತಳಿಯಾದ ಇದು, ಉತ್ಕೃಷ್ಟವಾದ ಹಾಲನ್ನು ನೀಡುವುದರಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ನೋಡಲು ಕೊಂಚ ಗುಜರಾತ್​ನ ಗಿರ್ ಹಸುವಿನ ರೀತಿಯೇ ಇದ್ದರು ಸಹ. ಇದು ಬೇರೆಯದ್ದೇ ತಳಿ. ಈ ಹಸು ನಿತ್ಯ ಕನಿಷ್ಠವೆಂದರೂ 10 ಲೀಟರ್ ಹಾಲು ನೀಡುತ್ತದೆ.

publive-image

3. ಥಾರಪಾರಕರ್ ಹಸು: ಥಾರಪಾರಕ ಹಸು ಕೂಡ ಅತ್ಯಂತ ಹೆಚ್ಚು ಹಾಲು ಕೊಡುವ ದೇಶಿ ತಳಿಯ ಹಸುಗಳಲ್ಲಿ ಒಂದು. ಎಂತಹ ಕಠಿಣ ವಾತಾವರಣಕ್ಕೂ ಹೊಂದಿಕೊಳ್ಳಬಲ್ಲ ಅಪರೂಪದ ಹಸು. ಇದು ಮೂಲತಃ ರೇಗಿಸ್ತಾನದ ಹಸು ಎಂದು ಹೇಳಲಾಗುತ್ತದೆಯಾದರು. ಈ ತಳಿ ಅತಿಹೆಚ್ಚು ಅಭಿವೃದ್ಧಿ ಹೊಂದಿದ್ದು ಭಾರತದಲ್ಲಿ. ಇದು ನಿತ್ಯ 6 ರಿಂದ 8 ಲೀಟರ್ ಹಾಲು ನೀಡುತ್ತದೆ.

Advertisment

publive-image

4. ಸಿಂಧಿ ಹಸು: ಈ ಹಸು ಮೂಲತಃ ಭಾರತದ್ದೇ ಭಾಗವಾಗಿದ್ದ ಹಾಗೂ ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯದ್ದು. ಅತ್ಯಂತ ಬಿಸಿಲಿರುವ ವಾತಾವರಣದಲ್ಲಿಯೂ ಆರಾಮವಾಗಿ ಬದುಕಬಲ್ಲ ವಿಶಿಷ್ಟ ತಳಿಗಳಲ್ಲಿ ಇದು ಒಂದು. ಗುಜರಾತ್ ಸೇರಿ ಭಾರತದ ಹಲವು ರಾಜ್ಯಗಳಲ್ಲಿ ಈ ಹಸುಗಳನ್ನು ಸಾಕಲಾಗುತ್ತದೆ. ಇದು ನಿತ್ಯ ಕನಿಷ್ಠವೆಂದರೂ 11 ರಿಂದ 15 ಲೀಟರ್ ಹಾಲನ್ನು ಕೊಡುತ್ತದೆ. ಕೈಯಿಂದ ಕಾಲನ್ನು ಕರೆಯಲು ಮನುಷ್ಯರು ಸುಸ್ತಾಗಬೇಕು ಅಷ್ಟು ಹಾಲನ್ನು ಈ ಹಸು ನೀಡುತ್ತದೆ.

publive-image

5. ಅಂಗೋಲೆ ಹಸು: ಭಾರತದಲ್ಲಿ ಅತ್ಯಧಿಕ ಹಾಲು ನೀಡುವ ಹಸು ಅಂದ್ರೆ ಅದು ಅಂಗೋಲೆ ಹಸು. ಅದೆ ರೀತಿ ಉಳುಮೆಗೂ ಕೂಡ ಅತ್ಯಂತ ಹೇಳ ಮಾಡಿಸಿದ ಹಸು. ಎತ್ತಗಳನ್ನು ಪ್ರಧಾನ್ಯವಾಗಿಟ್ಟುಕೊಂಡು ಕೃಷಿ ಮಾಡುವ ರೈತರಿಗೆ ಇವು ಹೇಳಿ ಮಾಡಿಸಿದ ತಳಿ. ಇವುಗಳ ಶಕ್ತಿ ಹಾಗೂ ದುಡಿಯುವ ಸಾಮರ್ಥ್ಯ ಉಳಿದ ಹಸುಗಳ ತಳಿಗಳಿಗೆ ಇಲ್ಲ. ಈ ಹಸು ನಿತ್ಯ 15 ರಿಂದ 17 ಲೀಟರ್ ಹಾಲು ನೀಡುತ್ತದೆ.

publive-image

6. ಕಾಂಕರೇಜ್ ಹಸು: ಗುಜರಾತ್​ ಮೂಲದ ಮತ್ತೊಂದು ಅದ್ಭುತ ದೇಸಿ ಹಸು ಅಂದ್ರೆ ಅದು ಕಾಂಕ್​ರೇಜ್ ಹಸು. ಭಾರತೀಯ ಹಸುಗಳಲ್ಲಿ ಕಾಂಕ್​ರೆಜ್​ ಹಸು ವಿಶೇಷ ತಳಿಯಾಗಿದೆ. ಇದು ಹೊಲದಲ್ಲಿ ಉಳುಮೆ ಮಾಡಲು ಹಾಗೂ ಹಾಲು ನೀಡಲು ಎರಡಕ್ಕೂ ಸಹಾಯವಾಗುವ ರೈತ ಸ್ನೇಹಿ ಹಸು. ಇವುಗಳ ಪ್ರಾಮಾಣಿಕತೆಯು ಕೂಡ ಅಷ್ಟೇ ಪ್ರಸಿದ್ಧಿಯನ್ನು ಪಡೆದಿವೆ. ಇವು 5 ರಿಂದ 8 ಲೀಟರ್ ಹಾಲನ್ನು ಪ್ರತಿನಿತ್ಯ ಕೊಡುತ್ತವೆ.

Advertisment

publive-image

7. ರಾಠಿ ಹಸು: ರಾಜಸ್ಥಾನ ಮೂಲದ ರಾಠಿ ಹಸುಗಳು ಕೂಡ ಹೆಚ್ಚು ಹಾಲು ಕೊಡುವ ದೇಶಿ ಹಸುಗಳಲ್ಲಿ ಒಂದು. ಈ ಹಸುಗಳು ಹಾಲು ಉತ್ಪಾದನೆಗೆ ತುಂಬಾ ಪ್ರಸಿದ್ಧಿಯ್ನು ಪಡೆದಿವೆ. ನಿತ್ಯ 4 ರಿಂದ 5 ಲೀಟರ್ ಹಾಲು ನೀಡುತ್ತವೆ.

publive-image

8. ದೇವನಿ ಹಸು: ಕೊನೆ ಮತ್ತು ಕೃಷಿಗಾರಿಕೆಯಲ್ಲಿ ಅತ್ಯಂತ ಮಹತ್ವ ಪಡೆದ ಹಸು ಅಂದರೆ ಅದು ದೇವನಿ ಹಸು. ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಹೆಚ್ಚು ಕಂಡು ಬರುವ ಹಸು ಇದು. ನಿತ್ಯ 3 ರಿಂದ 5 ಲೀಟರ್ ಹಾಲು ಕೊಡುತ್ತದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment