newsfirstkannada.com

ಗಲ್ಫ್​​ ಜೈಲಿನಲ್ಲಿರುವ 900 ಕೈದಿಗಳನ್ನು ಬಿಡುಗಡೆ ಮಾಡಲು 2.5 ಕೋಟಿ ದೇಣಿಗೆ ನೀಡಿದ ಭಾರತದ ಉದ್ಯಮಿ! ಯಾರಿವರು?

Share :

Published February 28, 2024 at 12:11pm

Update February 28, 2024 at 12:38pm

    900 ಕೈದಿಗಳನ್ನು ಬಿಡುಗಡೆಗೊಳಿಸಲು ಮುಂದಾದ ಉದ್ಯಮಿ

    ಈ ವರ್ಷ 3 ಸಾವಿರ ಕೈದಿಗಳನ್ನು ಬಿಡುಗಡೆ ಮಾಡಿಸಲು ಪ್ಲಾನ್​

    ಭಾರತೀಯ ಮೂಲದ ಈ ಉದ್ಯಮಿ ಯಾರು ಗೊತ್ತಾ?

ಗಲ್ಫ್​ ರಾಷ್ಟ್ರದ ಜೈಲುಗಳಲ್ಲಿರುವ 900 ಕೈದಿಗಳನ್ನು ಬಿಡುಗಡೆ ಮಾಡಲು ಭಾರತೀಯ ಮೂಲದ ಉದ್ಯಮಿ ಫಿರೋಜ್​ ಮರ್ಚೆಂಟ್​​ 2.5 ಕೋಟಿ ರೂಪಾಯಿಯನ್ನು ದೇಣಿಯನ್ನು ನೀಡಿದ್ದಾರೆ. ಇವರು ಫ್ಯೂರ್​ ಗೋಲ್ಡ್​ ಜ್ಯುವೆಲರ್ಸ್​ನ ಮಾಲೀಕರಾಗಿದ್ದು, ಈ ವರ್ಷ 3 ಸಾವಿರ ಕೈದಿಗಳನ್ನು ಬಿಡುಗಡೆ ಮಾಡಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಫಿರೋಜ್​ ಮರ್ಚೆಂಟ್ ಯುನೈಟೆಡ್​​ ಅರಬ್​ ಎಮಿರೇಟ್ಸ್​​ ಅಧಿಕಾರಿಗಳಿಗೆ 1 ಮಿಲಿಯನ್​ ದಿರ್ಹಮ್​ ದೇಣಿಗೆಯಾಗಿ ನೀಡಿದ್ದಾರೆ. ರಂಜಾನ್​ ಹಬ್ಬದ ಸಮಯದಲ್ಲಿ ಮಾನವೀಯತೆ, ಕ್ಷಮೆ ಸಂದೇಶ ಸಾರಲು ಫಿರೋಜ್​ ಮರ್ಚೆಂಟ್ ಕೈದಿಗಳನ್ನು ಜೈಲಿನಿಂದ ರಿಲೀಸ್​ ಮಾಡಲು ದೇಣಿಗೆ ನೀಡಿದ್ದಾರೆ.

ಮಾಹಿತಿಯಂತೆ, ಅಜ್ಮಾನ್​ನಿಂದ 495 ಕೈದಿಗಳು, ಫುಜೈರಾದಿಮದ 170, ದುಬೈನಿಂದ 121, ಉಮ್​ ಅಲ್​ ಕ್ವೈನ್​ನಿಂದ 69 ಮತ್ತು 28 ರಾಸ್ ಅಲ್​ ಖೈಮಾ ಕೈದಿಗಳನ್ನು ಬಿಡುಗಡೆ ಮಾಡಿಸುತ್ತಿದ್ದಾರೆ.​

ಫಿರೋಜ್​ ಮರ್ಚೆಂಟ್ ಯಾರು?

ಫಿರೋಜ್​ ಮರ್ಚೆಂಟ್ 1958ರಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದರು. ಇವರು ಒಂಭತ್ತು ಮಕ್ಕಳಲ್ಲಿ ಒಬ್ಬರಾಗಿದ್ದರು. ಅವರ ತಂದೆ ಗುಲಾಮ್​ ಹುಸೇನ್​ ರಿಯಲ್ ಎಸ್ಟೇಟ್​ ಉದ್ಯಮಿಯಾಗಿದ್ದರು. ಆದರೆ ಬರುಬರುತ್ತಾ ತಂದೆ ಉದ್ಯಮ ನೆಲಕಚ್ಚಿತು. ಕೊನೆಗೆ ತಂದೆಯೊಂದಿಗೆ ವ್ಯಾಪಾರದಲ್ಲಿ ಸಹಾಯ ಮಾಡಲು ಫಿರೋಜ್​ ಮರ್ಚೆಂಟ್ 11ನೇ ವಯಸ್ಸಿನಲ್ಲಿ ಶಿಕ್ಷಣವನ್ನು ತ್ಯಜಿಸುತ್ತಾರೆ.

ವಿವಾಹದ ಬಳಿಕ ಪತ್ನಿ ರೋಜಿನಾ ಜೊತೆಗೆ ಹನಿಮೂನಿಗಾಗಿ ದುಬೈ ಹೋಗುತ್ತಾರೆ. ಅದಲ್ಲಿ ದುಬೈ ಗೋಲ್ಡ್​ ಸ್ಟಾಕ್​ ನೋಡಿ ಅದರ ವ್ಯಾಪಾರದತ್ತ ಮನಸೋಲುತ್ತಾರೆ. ಬಳಿಕ ದುಂಬೈನಲ್ಲಿ ನೆಲೆನಿಂತ ಅವರು 1989ರಲ್ಲಿ ತಮ್ಮದೇ ಆದ ಚಿನ್ನ ಮತ್ತು ವಜ್ರದ ವ್ಯಾಪಾರವನ್ನು ಸ್ಥಾಪಿಸುತ್ತಾರೆ. ​ಸದ್ಯ ಚಿನ್ನದ ವ್ಯಾಪಾ ಮಾಡುವ ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಲ್ಫ್​​ ಜೈಲಿನಲ್ಲಿರುವ 900 ಕೈದಿಗಳನ್ನು ಬಿಡುಗಡೆ ಮಾಡಲು 2.5 ಕೋಟಿ ದೇಣಿಗೆ ನೀಡಿದ ಭಾರತದ ಉದ್ಯಮಿ! ಯಾರಿವರು?

https://newsfirstlive.com/wp-content/uploads/2024/02/Firoz-Merchants.jpg

Load More