ಭಾರತದ ಈ ಜಾಗಗಳು ನಿಮಗೆ ಯುರೋಪ್​ನಲ್ಲಿರುವ ಫೀಲ್ ಕೊಡುತ್ತವೆ.. ಎಲ್ಲಿವೆ ಈ ಜಾಗಗಳು? ಹೇಗಿವೆ?

author-image
Gopal Kulkarni
Updated On
ಭಾರತದ ಈ ಜಾಗಗಳು ನಿಮಗೆ ಯುರೋಪ್​ನಲ್ಲಿರುವ ಫೀಲ್ ಕೊಡುತ್ತವೆ.. ಎಲ್ಲಿವೆ ಈ ಜಾಗಗಳು? ಹೇಗಿವೆ?
Advertisment
  • ಭಾರತದಲ್ಲೂ ಇವೆ ಯುರೋಪ್​ ರಾಷ್ಟ್ರಗಳ ನಗರಗಳಿಗೆ ಹೋಲುವ ಸಿಟಿಗಳು
  • ಯಾವ ಯಾವ ನಗರ ಯಾವ ಯುರೋಪ್ ನಗರವನ್ನು ನೆನಪಿಸುತ್ತದೆ ಗೊತ್ತಾ?
  • ಕರ್ನಾಟಕದ ಈ ಪ್ರದೇಶವು ಯುರೋಪ್​ನ ಯಾವ ನಗರವನ್ನು ನೆನಪಿಸುತ್ತೆ?

ಜಗತ್ತಿನ ಅತ್ಯಂತ ಸುಂದರ ಸ್ಥಳಗಳು ನೋಡಲು ಸಿಗುವುದು ಯುರೋಪ್ ದೇಶಗಳಲ್ಲಿ ಮಾತ್ರ ಎಂಬುವುದು ಅನೇಕರ ನಂಬಿಕೆಯಾಗಿದೆ. ಅದನ್ನು ಕೂಡ ಅಲ್ಲಗಳೆಯುವಂತಿಲ್ಲ ಯುರೋಪ್ ದೇಶಗಳು ಅತ್ಯಂತ ಸುಂದರ ನಗರಗಳನ್ನು ಹೊಂದಿವೆ. ಹೀಗಾಗಿ ಅಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಹಾಗಂತ ಸೌಂದರ್ಯ ಸಿರಿ ಹೊತ್ತಿರುವ ನಗರಗಳು ಭಾರತದಲ್ಲೇನೂ ಕಡಿಮೆಯಿಲ್ಲ. ಇಲ್ಲಿಯೂ ಕೂಡ ಯುರೋಪ್ ದೇಶಗಳ ಹಲವು ನಗರಗಳನ್ನು ನೆನಪಿಸುವ ಹಾಗೆ ಅಲ್ಲಿಯದೇ ಭಾವ ಬಿತ್ತುವಂತ ಅನೇಕ ಜಾಗಗಳಿವೆ ಅವು ಯಾವುವು ಎಂಬುದನ್ನು ನಾವು ನಿಮಗೆ ತಿಳಸ್ತೀವಿ.

publive-image

ಉದಯಪುರ: ರಾಜಸ್ಥಾದ ಉದಯಪುರ ಯಾವ ಯುರೋಪ್ ದೇಶಗಳ ನಗರಗಳ ಸೌಂದರ್ಯಕ್ಕೂ ಕಡಿಮೆಯಿಲ್ಲ ಇಲ್ಲಿರುವ ಕೆಲವು ಸರೋವರಗಳು ಹಾಗೂ ಬೋಟಿಂಗ್​ಗಳು ನಗರದ ಸೌಂದರ್ಯ, ಅಲ್ಲಿ ನಿರ್ಮಾಣಗೊಂಡಿರುವ ಅನೇಕ ಪುರಾತನ ಕಟ್ಟಡಗಳು ಇವೆಲ್ಲವೂ ಕೂಡ ಯುರೋಪ್​ ದೇಶದ ಇಟಲಿಯ ವೆನಿಸ್ ನಗರವನ್ನು ಜ್ಞಾಪಿಸುತ್ತದೆ. ಅಲ್ಲಿಯೇ ಇದ್ದಂತ ಭಾವ ಬಿತ್ತುತ್ತದೆ.

publive-image

ಮುನ್ನಾರ್: ಕೇರಳದ ಮುನ್ನಾರ್​ನಲ್ಲಿ ಚಹಾ ಬೆಳೆಯನ್ನು ಬೆಳೆದ ನೋಡುವ ಸಿರಿಯೇ ಚೆಂದ. ಹಿರಿದಾದ ಪರ್ವತ ಪ್ರದೇಶಗಳು. ತಂಪಾದ ವಾತಾವರಣ ಎಂತವರನ್ನು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿ ಪ್ರಕೃತಿ ಸೌಂದರ್ಯ ಮತ್ತು ವಾತಾವರಣ ನಮಗೆ ಸ್ವಿಸ್​ನಲ್ಲಿರುವ ಫೀಲ್ ಕೊಡುತ್ತದೆ.

publive-image

ಕೂರ್ಗ್​: ಕರ್ನಾಟಕದ ಕೊಡಗು, ಯುರೋಪಿನ ಯಾವ ಸುಂದರ ನಗರಗಳಿಗಿಂಲೂ ಕಡಿಮೆಯಿಲ್ಲ. ಇದರ ಪ್ರಕೃತಿ ಸೌಂದರ್ಯ ಸವಿಯಲೆಂದೇ ದೇಶ ವಿದೇಶಗಳಿಂದ ಪ್ರವಾಸಿಗರು ಹರಿದು ಬರುತ್ತಾರೆ. ಕಾಫಿ ಬೆಳೆ, ಹೋಮ್​ಸ್ಟೇಗಳು, ಮಂಜು ತುಂಬಿಕೊಂಡ ಬೆಟ್ಟಗಳು. ಸುತ್ತಲೂ ಹಬ್ಬಿರುವ ದಟ್ಟವಾದ ಕಾಡುಗಳು. ಹಸಿರು ತುಂಬಿರುವ ನಡುವೆ ಹರಿದುಕೊಂಡಿರುವ ರಸ್ತೆ. ಇವು ಯುರೋಪ್​ನ ಹಲವು ನಗರಗಳನ್ನು ಕೊಡಗಿಗೆ ಹೋಲಿಸಲಾಗುತ್ತದೆ. ಅಂತಹ ಫೀಲ್ ಈ ನಗರ ಕಟ್ಟಿಕೊಡುತ್ತದೆ.

publive-image

ಶಿಲ್ಲಾಂಗ್​: ಮೇಘಾಲಯದ ರಾಜಧಾನಿ ಶಿಲ್ಲಾಂಗ್​ನ ಸೌಂದರ್ಯವನ್ನು ಅನುಭವಿಸಲು ಎರಡು ಕಣ್ಣು ಸಾಲುವುದೇ ಇಲ್ಲ. ಅಂತಹ ಸೃಷ್ಟಿ ಸೌಂದರ್ಯವನ್ನು ಹೊದ್ದುಕೊಂಡು ನಿಂತಿದೆ ಈ ಶಿಲ್ಲಾಂಗ್​. ಕಡಿದಾದ ಬೆಟ್ಟಗಳು, ಅತ್ಯದ್ಭುತ ಎನಿಸುವ ಜಲಪಾತಗಳು. ಸುಂದರವಾದ ಸರೋವರಗಳು. ಹಚ್ಚ ಹಸುರಾದ ವಾತಾವರಣ ನಮಗೆ ಸ್ಕಾಟ್​ಲ್ಯಾಂಡ್​ನ್ನು ನೆನಪು ಮಾಡಿಸುತ್ತದೆ.

publive-image

ಪಾಂಡಿಚೆರಿ: ಫ್ರಂಚರ್​ ವಸಾತುಶಾಯಿಯಲ್ಲಿ ಬೆಳೆದ ನಗರ ಪಾಂಡಿಚೆರಿ. ಇಲ್ಲಿನ ಕೆಫೆಗಳು, ಸುಂದರವಾದ ಬೀಚ್​ಗಳು. ಪ್ರಶಾಂತವಾದ ವಾತಾವರಣ ನಮಗೆ ಫ್ರಾನ್ಸ್​ ನ್ನು ನೆನೆಪಿಸುತ್ತದೆ.

publive-image

ಧರ್ಮಶಾಲಾ: ಧರ್ಮಶಾಲಾವನ್ನು ಗಿರಿಧಾಮ ಎಂದಲೇ ಕರೆಯಲಾಗುತ್ತದೆ. ಇಲ್ಲಿನ ಆಗಸದೆತ್ತರಕ್ಕೆ ಬೆಳೆದಿರುವ ಗಿರಿಗಳು. ಆ ಗಿರಿಗಳ ನಡುವೆ ನೆಲೆಸಿರುವ ಈ ಧರ್ಮಶಾಲಾ ಎಂಬ ನಗರ ಟಿಬೆಟ್​ ಸಂಸ್ಕೃತಿಯನ್ನು ಅಪ್ಪಿಕೊಂಡು ಬೆಳೆದಿದೆ. ಈ ನಗರವು ಕೂಡ ಯುರೋಪಿಯನ್​ ಅನೇಕ ನಗರಗಳು ಹೊಂದಿರುವ ಚಾರ್ಮ್​ನ್ನು ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment