/newsfirstlive-kannada/media/post_attachments/wp-content/uploads/2024/12/JOBS_BANKS-1.jpg)
2026ರ ಬ್ಯಾಚ್ಗಾಗಿ ಭಾರತೀಯ ಕೋಸ್ಟ್ ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಉದ್ಯೋಗಕ್ಕೆ ಅಪ್ಲೇ ಮಾಡಲು ನಾಳೆಯೇ ಕೊನೆಯ ದಿನವಾಗಿದ್ದರಿಂದ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳ ಆಯ್ಕೆಗಾಗಿ ಸಂಸ್ಥೆಯು ಪರೀಕ್ಷೆ ನಡೆಸುತ್ತದೆ. ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಭಾರತೀಯ ಕೋಸ್ಟ್ ಗಾರ್ಡ್ನ ಅಧಿಕೃತ ವೆಬ್‌ಸೈಟ್ https://joinindiancoastguard.cdac.in/ನಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಆಫ್ಲೈನ್ ಅರ್ಜಿಗೆ ಅನುಮತಿ ಇರುವುದಿಲ್ಲ. ಈ ಕೆಲಸಗಳಿಗೆ ಸಂಬಂಧಿಸಿದಂತೆ ಕೊನೆಯ ದಿನಾಂಕ, ಆಯ್ಕೆ ಪ್ರಕ್ರಿಯೆ, ಮುಂದಿನ ಅಪ್ಡೇಟ್ಸ್, ಅರ್ಜಿ ಶುಲ್ಕದ ಮಾಹಿತಿ ಸೇರಿ ಎಲ್ಲವೂ ಈ ಆರ್ಟಿಕಲ್ನಲ್ಲಿದೆ. ಭಾರತೀಯ ಕೋಸ್ಟ್ ಗಾರ್ಡ್ ಜನರಲ್ ಡ್ಯೂಟಿ (ಜಿಡಿ) ಹಾಗೂ ತಾಂತ್ರಿಕ (ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್) ಸೇರಿದಂತೆ ವಿವಿಧ ಶಾಖೆಗಳಲ್ಲಿ ನೇಮಕಾತಿ ಮಾಡುತ್ತಿದೆ.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 24 ಡಿಸೆಂಬರ್ 2024
ಉದ್ಯೋಗದ ಹೆಸರು, ಎಷ್ಟು ಹುದ್ದೆಗಳು-
- ಜನರಲ್ ಡ್ಯುಟಿ (ಜಿಡಿ)- 110 ಉದ್ಯೋಗಗಳು
- ತಾಂತ್ರಿಕ (ಇಂಜಿನಿಯರ್)- 30 ಹುದ್ದೆಗಳು
ಸಹಾಯಕ ಕಮಾಂಡೆಂಟ್ ಹುದ್ದೆಗಳು ಒಟ್ಟು- 140
ಇದನ್ನೂ ಓದಿ:Assistant Manager; ವಿಜ್ಞಾನ, ವಾಣಿಜ್ಯ ವಿಭಾಗದ ಅಭ್ಯರ್ಥಿಗಳಿಗೆ ಹಲವು ಉದ್ಯೋಗಗಳು
ಅರ್ಜಿ ಶುಲ್ಕ ಎಷ್ಟು?
- ಜನರಲ್, ಒಬಿಸಿ, ಇಡಬ್ಲುಎಸ್- 300 ರೂಪಾಯಿಗಳು
- ಎಸ್ಸಿ, ಎಸ್ಟಿ, ವಿಶೇಷ ಚೇತನರು- ವಿನಾಯಿತಿ ಇದೆ
- ಆನ್ಲೈನ್ ಮೂಲಕ ಹಣ ಪಾವತಿ ಮಾಡಬೇಕು
ವಿದ್ಯಾರ್ಹತೆ-
ಜನರಲ್ ಡ್ಯುಟಿ (ಜಿಡಿ)- ದ್ವಿತೀಯ ಪಿಯುಸಿ (ಗಣಿತ ಮತ್ತು ಭೌತಶಾಸ್ತ್ರ ಅಧ್ಯಯನ ಮಾಡಿರಬೇಕು)
ತಾಂತ್ರಿಕ (ಇಂಜಿನಿಯರ್)- ತಾಂತ್ರಿಕ ಶಾಖೆ (ಎಂಜಿನಿಯರಿಂಗ್/ಎಲೆಕ್ಟ್ರಿಕಲ್):
ವಯಸ್ಸಿನ ಮಿತಿ-
21 ರಿಂದ 25 ವರ್ಷದ ಒಳಗಿನವರಿಗೆ ಅವಕಾಶ
(01 ಜುಲೈ 2000 ದಿಂದ 30 ಜೂನ್ 2004ರ ಒಳಗೆ ಜನಿಸಿರಬೇಕು)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ