ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ.. ಎಷ್ಟು ಕೆಲಸಗಳು ಖಾಲಿ ಇವೆ, ಯಾರಿಗೆ ಅವಕಾಶ ಇದೆ?

author-image
Bheemappa
Updated On
ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ.. ಎಷ್ಟು ಕೆಲಸಗಳು ಖಾಲಿ ಇವೆ, ಯಾರಿಗೆ ಅವಕಾಶ ಇದೆ?
Advertisment
  • ಕೊನೆಯ ದಿನಾಂಕ, ಆಯ್ಕೆ ಪ್ರಕ್ರಿಯೆ ಸೇರಿ ಹಲವು ಮಾಹಿತಿ ಇಲ್ಲಿದೆ
  • ಆಕಾಂಕ್ಷಿಗಳು ಆನ್​​ಲೈನ್​ನಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಬೇಕು
  • ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು

ಭಾರತೀಯ ಕೋಸ್ಟ್ ಗಾರ್ಡ್ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದ್ದು ಅರ್ಹ ಹಾಗೂ ಆಸಕ್ತಿ ಇರುವ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. 2026ರ ಬ್ಯಾಚ್​ಗಾಗಿ ಈಗಲೇ ಉದ್ಯೋಗಗಳನ್ನು ತುಂಬಲಾಗುತ್ತಿದೆ. ಈ ನೇಮಕಾತಿ ಅಭಿಯಾನದ ಅಡಿ ಪರೀಕ್ಷೆಯ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಜನರಲ್ ಡ್ಯೂಟಿ (ಜಿಡಿ) ಮತ್ತು ತಾಂತ್ರಿಕ (ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್) ಸೇರಿದಂತೆ ವಿವಿಧ ಶಾಖೆಗಳಲ್ಲಿ ಆಯ್ಕೆ ಆದವರನ್ನು ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಗಮನಿಸಿ ಆನ್‌ಲೈನ್‌ ಮೂಲಕ ಅಪ್ಲೇ ಮಾಡಬಹುದು. ಇದರ ಅಧಿಕೃತ ವೆಬ್‌ಸೈಟ್ https://joinindiancoastguard.cdac.in/ ಆಗಿದೆ. ಈ ಕೆಲಸಗಳಿಗೆ ಸಂಬಂಧಿಸಿದಂತೆ ಕೊನೆಯ ದಿನಾಂಕ, ಆಯ್ಕೆ ಪ್ರಕ್ರಿಯೆ, ಮುಂದಿನ ಅಪ್​ಡೇಟ್ಸ್​, ಅರ್ಜಿ ಶುಲ್ಕ, ಇತ್ಯಾದಿಗಳ ವಿವರ ಇಲ್ಲಿ ನೀಡಲಾಗಿದೆ.

ಉದ್ಯೋಗದ ಹೆಸರು

  • ಸಹಾಯಕ ಕಮಾಂಡೆಂಟ್‌ ಹುದ್ದೆಗಳು
  • ಜನರಲ್ ಡ್ಯುಟಿ (ಜಿಡಿ)- 110 ಉದ್ಯೋಗಗಳು
  • ತಾಂತ್ರಿಕ (ಇಂಜಿನಿಯರ್)- 30 ಹುದ್ದೆಗಳು

ಇದನ್ನೂ ಓದಿ:Karnataka Bank; ಪ್ರೊಬೆಷನರಿ ಅಧಿಕಾರಿ ಹುದ್ದೆಗೆ ಅರ್ಜಿ ಹಾಕಲು ನಾಳೆ ಕೊನೆ ದಿನ

publive-image

ವಯೋಮಿತಿ-
21 ರಿಂದ 25 ವರ್ಷದ ಒಳಗಿನವರಿಗೆ ಅವಕಾಶ

ಶೈಕ್ಷಣಿಕ ವಿದ್ಯಾರ್ಹತೆ-
ಜನರಲ್ ಡ್ಯುಟಿ (ಜಿಡಿ)- ದ್ವಿತೀಯ ಪಿಯುಸಿ (ಗಣಿತ ಮತ್ತು ಭೌತಶಾಸ್ತ್ರ ಅಧ್ಯಯನ ಮಾಡಿರಬೇಕು)
ತಾಂತ್ರಿಕ (ಇಂಜಿನಿಯರ್)- ತಾಂತ್ರಿಕ ಶಾಖೆ (ಎಂಜಿನಿಯರಿಂಗ್/ಎಲೆಕ್ಟ್ರಿಕಲ್):

ಅರ್ಜಿ ಶುಲ್ಕ ಎಷ್ಟು?

  • ಜನರಲ್, ಒಬಿಸಿ, ಇಡಬ್ಲುಎಸ್- 300 ರೂಪಾಯಿಗಳು
  • ಎಸ್​ಸಿ, ಎಸ್​ಟಿ, ವಿಶೇಷ ಚೇತನರು- ವಿನಾಯಿತಿ ಇದೆ
  • ಆನ್​​ಲೈನ್ ಮೂಲಕ ಹಣ ಪಾವತಿ ಮಾಡಬೇಕು

ಪ್ರಮುಖವಾದ ದಿನಾಂಕಗಳು

ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 05 ಡಿಸೆಂಬರ್ 2024
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 24 ಡಿಸೆಂಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment