ಅಮೆರಿಕಾದಲ್ಲಿ ಅವಧಿಗೂ ಮುನ್ನ ಹೆರಿಗೆಗೆ ಮುಗಿಬಿದ್ದ ಅನಿವಾಸಿ ಭಾರತೀಯರು; ಕಾರಣವೇನು?

author-image
admin
Updated On
ಅಮೆರಿಕಾದಲ್ಲಿ ಅವಧಿಗೂ ಮುನ್ನ ಹೆರಿಗೆಗೆ ಮುಗಿಬಿದ್ದ ಅನಿವಾಸಿ ಭಾರತೀಯರು; ಕಾರಣವೇನು?
Advertisment
  • ಅಮೆರಿಕಾ ಪೌರತ್ವಕ್ಕಾಗಿ ಪ್ರಾಣ ಪಣಕ್ಕಿಟ್ರು ಭಾರತೀಯ ತಾಯಂದಿರು
  • ಬೇಡುವೆನು ವರವನು ನಾರ್ಮಲ್ ಹೆರಿಗೆ ಮೂಲಕ ಕೊಡು ಜನ್ಮವನು
  • ಡೊನಾಲ್ಡ್ ಟ್ರಂಪ್ ಹೊಸ ಕಾನೂನು ಕರುಳಿಗೆ ಕತ್ತರಿ ಹಾಕುತ್ತಿದೆಯೇ?

ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಪಟ್ಟಕ್ಕೇರಿದ ಕೂಡಲೇ ಅಲ್ಲಿ ನೆಲೆಸಿದ್ದ ಭಾರತೀಯರನ್ನು ಬೆಚ್ಚಿ ಬೀಳಿಸಿದ್ರು. ಅಧಿಕಾರಕ್ಕೇರಿದ ಕೂಡಲೇ ಟ್ರಂಪ್ ಹಾಕಿದ ಹೊಸ ಆದೇಶದ ಸಹಿ ಕರುಳ ಬಳ್ಳಿಗೆ ಕತ್ತರಿ ಹಾಕಿದೆಯೇ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ತಾಯಿಯ ಗರ್ಭ ಅನ್ನೋದು ಅತ್ಯಂತ ಸುರಕ್ಷಿತ ಜಾಗ. ಅಂಥಾ ಜಾಗದಲ್ಲೂ ನೆಮ್ಮದಿ ಆಗಿ ಇರೋದಕ್ಕೆ ಟ್ರಂಪ್ ಆದೇಶ ಬಿಡುತ್ತಿಲ್ಲ. ಅದರಲ್ಲೂ ಅನಿವಾಸಿ ಭಾರತೀಯ ತಾಯಂದಿರು ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.

publive-image

ಡೊನಾಲ್ಡ್ ಟ್ರಂಪ್ ಸಹಿ ಕರುಳಿಗೆ ಕತ್ತರಿ ಹಾಕಿದ್ದು ಹೇಗೆ?
ಅಮೆರಿಕಾದಲ್ಲಿ ಜನಿಸಿದ ಮಕ್ಕಳಿಗೆ ಜನ್ಮಸಿದ್ಧ ಪೌರತ್ವ ನೀಡಲಾಗುತ್ತಿತ್ತು. ಇದರ ಅನ್ವಯ ಅಮೆರಿಕಾದಲ್ಲಿದ್ದ ಅನಿವಾಸಿ ಭಾರತೀಯರಿಗೆ ಜನಿಸಿದ ಮಕ್ಕಳಿಗೆ ಅಮೆರಿಕಾ ಪೌರತ್ವ ಸಿಗುತ್ತಿತ್ತು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಟ್ರಂಪ್ ಜನ್ಮಸಿದ್ಧ ಪೌರತ್ವ ನೀತಿಯನ್ನೇ ರದ್ದು ಮಾಡುವುದಾಗಿ ಹೇಳಿ ಆದೇಶಕ್ಕೆ ಸಹಿ ಮಾಡಿದ್ರು.

ಇದೇ ಫೆಬ್ರವರಿ 20ಕ್ಕೆ ಈ ಜನ್ಮಸಿದ್ಧ ಪೌರತ್ವ ನೀತಿ ರದ್ದಾಗಲಿದೆ. ಅದಕ್ಕೂ ಮುಂಚೆಯೇ ಮಕ್ಕಳನ್ನ ಹಡೆದು ಬಿಟ್ಟರೇ ಅಮೆರಿಕಾ ಪೌರತ್ವ ಸಿಗುತ್ತದೆ ಅನ್ನೋ ಕಾರಣಕ್ಕೆ ಅಲ್ಲಿ ನೆಲೆಸಿರೋ ಭಾರತೀಯ ತಾಯಂದಿರು ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ.

publive-image

C ಹೆರಿಗೆ ಮಾಡಿಸಿಕೊಳ್ಳೋದಕ್ಕೆ ಕ್ಯೂ ಕಟ್ಟಿ ನಿಂತಿದ್ದಾರೆ!
ಜನ್ಮಸಿದ್ಧ ಪೌರತ್ವ ನೀತಿ ರದ್ದಾಗೋದಕ್ಕೆ ಮುನ್ನ ಎಂದರೇ ಫೆಬ್ರವರಿ 20ಕ್ಕೂ ಮುಂಚೆಯೇ ಸಿಸೇರಿಯನ್ ಹೆರಿಗೆ ಮಾಡಿಸಿಕೊಳ್ಳೋದಕ್ಕೆ ಅನಿವಾಸಿ ಭಾರತೀಯ ದಂಪತಿಗಳು ಕ್ಯೂ ಕಟ್ಟಿ ನಿಂತಿದ್ದಾರೆ. ಅವಧಿಗೂ ಮುನ್ನವೇ ಹೆರಿಗೆ ಮಾಡಿಸಿಕೊಳ್ಳೋದಕ್ಕೆ ಸಾಲುಗಟ್ಟಿ ನಿಂತವರನ್ನು ಕಂಡು ಅಮೆರಿಕಾದ ವೈದ್ಯರು ಅಕ್ಷರಶಃ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಮಹತ್ವದ ಆದೇಶಗಳಿಗೆ ಸಹಿ ಮಾಡಿ ಪೆನ್ ಎಸೆದ ಡೊನಾಲ್ಡ್‌ ಟ್ರಂಪ್‌; ಟಾಪ್ 10 ನಿರ್ಧಾರಗಳ ವಿವರ ಇಲ್ಲಿದೆ! 

ಒಂಬತ್ತು ತಿಂಗಳು ಮುಗಿಯೋದಕ್ಕೂ ಮುನ್ನವೇ ಭಾರತೀಯ ತಾಯಂದಿರು ಸಿ ಸೆಕ್ಷನ್ ಹೆರಿಗೆ ಮಾಡಿಸಿಕೊಳ್ಳೋದ್ರಿಂದಾಗಿ ಪ್ರಾಣಕ್ಕೆ ಸಂಚಕಾರ ಎದುರಾಗಬಹುದು. ಇಂಥಾ ಹೆರಿಗೆಯಿಂದಾಗಿ ತಾಯಿ ಮಗುವಿನ ಆರೋಗ್ಯದಲ್ಲಿ ಬಹುದೊಡ್ಡ ಸಮಸ್ಯೆ ಬರುವ ಸಾಧ್ಯತೆಯೂ ಇದೆ. ಇದೇ ಆತಂಕವೇ ವೈದ್ಯರನ್ನೂ ಕಂಗೆಡಿಸುತ್ತಿದೆ. ಬೇಡುವೆನು ವರವನು ಕೊಡು ತಾಯಿ ಜನ್ಮವನು ಕಡೆ ತನಕ ಮರೆಯಲ್ಲ ಅಂತಿದ್ದ ನಮ್ಮ ಜೋಗಿ. ಆದರೇ, ಟ್ರಂಪ್ ಕಾರಣಕ್ಕೆ ಅಮೆರಿಕಾದಲ್ಲಿ ಇದೇ ಫೆಬ್ರವರಿ 20ಕ್ಕೂ ಮುಂಚೆ ಶಸ್ತ್ರ ಚಿಕಿತ್ಸೆಯಿಂದ ಹುಟ್ಟಲಿರೋ ಮಗು ಬೇಡವೆನು ವರವನು ಒಂಬತ್ತು ತಿಂಗಳು ಕಾಯಮ್ಮ ಅನ್ನುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment