newsfirstkannada.com

ಆ ಒಂದು ಇನ್ನಿಂಗ್ಸ್​ ಕೊಹ್ಲಿಗೆ ಸ್ಟಾರ್​ಗಿರಿ ತಂದು ಕೊಡ್ತಾ.. ವಿರಾಟ್​ನ ವಿಶ್ವ ಸಾಮ್ರಾಟನಾಗಿಸಿತು ಆ ಒಂದು ನಿರ್ಧಾರ!

Share :

Published June 23, 2023 at 1:24pm

  ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದೇ ಕೊಹ್ಲಿಗೆ ಲಕ್​ ತಂದಿತು

  ಮುಗಿದೇ ಹೋಗಿತ್ತು ಎನ್ನುವಷ್ಟರಲ್ಲಿ ಪಂದ್ಯ ಹೊಸ ಬದುಕು ಕೊಟ್ಟಿತು

  ನಂಬರ್​- 1 ಬ್ಯಾಟ್ಸ್​ಮನ್ ಆಗಲು ವಿರಾಟ್​ ಕೊಹ್ಲಿ ಮಾಡಿದ್ದು ಏನು?

ವಿರಾಟ್​ ಕೊಹ್ಲಿ ವಿಶ್ವ ಕ್ರಿಕೆಟ್​ ಸಾಮ್ರಾಟ. ಇಂದು ಸಕ್ಸಸ್​ ಫುಲ್ ಬ್ಯಾಟ್ಸ್​ಮನ್​ ಆಗಿ ಕ್ರಿಕೆಟ್​ನ ಆಳ್ತಿರುವ ಕೊಹ್ಲಿಯನ್ನ ನಿಜಕ್ಕೂ ಬದಲಿಸಿದ್ದು ಒಂದೇ ಒಂದು ಇನ್ನಿಂಗ್ಸ್. ಆ ಒಂದು ಇನ್ನಿಂಗ್ಸ್​ ಬಳಿಕ ಕೊಹ್ಲಿಯ ಮನಃಪರಿವರ್ತನೆ ಆಗದಿದ್ರೆ, ಇಂದು ನಾವು ಕೊಹ್ಲಿಯ ಈ ಸಾಧನೆಗಳನ್ನು ನೋಡಲು ಆಗ್ತಿರಲಿಲ್ಲ.

ವಿರಾಟ್​ ಕೊಹ್ಲಿ ಟೀಮ್​​ ಇಂಡಿಯಾದ ರನ್ ಮಷಿನ್. ಕೊಹ್ಲಿ ಕಟ್ಟಿದ ರನ್​​ ಶಿಖರ ಮಾತ್ರ ಕರಗುವುದಿಲ್ಲ. ಈ ಶತಕ ವೀರನ ಬೋರ್ಗೆರತದ ಬ್ಯಾಟಿಂಗ್​ಗೆ ರೆಕಾರ್ಡ್ಸ್​ ಲೆಕ್ಕಕ್ಕಿಲ್ಲ. ಹೀಗೆ ನಾನಾ ದಾಖಲೆಗಳು ಬರೆದಿರುವ ಬ್ಯಾಟಿಂಗ್ ಚಾಂಪಿಯನ್​​​ ಅಭಿಮಾನಿಗಳ ಆರಾಧ್ಯ ದೈವ ಕೂಡ. ಆದ್ರೆ, ಈ ಬ್ಯಾಟಿಂಗ್ ಚಾಂಪಿಯನ್​​ ಕರಿಯರ್​​​​​​​​​​​​​​​​​​​​​​​​​​​​​​​​​​​​​​​​​​​​ ಬದಲಿಸಿದ್ದು ಒಂದೇ ಒಂದು ಇನ್ನಿಂಗ್ಸ್​​​.

ವಿರಾಟ್​ ಕೊಹ್ಲಿ ಇಂದು ಏನೆಲ್ಲ ಸಾಧನೆ ಮಾಡಿದ್ದರು ವಿಶ್ವ ಕ್ರಿಕೆಟ್​ನ ನಂಬರ್​ ಒನ್ ಬ್ಯಾಟ್ಸ್​ಮನ್​ ಆಗಿ ಹಲವು ದಾಖಲೆಗಳನ್ನೂ ಬರೆದರು ಆ ಒಂದು ಇನ್ನಿಂಗ್ಸ್​ ಕಾರಣ. ಆ ಒಂದು ಇನ್ನಿಂಗ್ಸ್​ ವಿರಾಟ್​ ಜೀವಮಾನದಲ್ಲಿ ಆಡದೇ ಇದಿದ್ದರೆ ಇವತ್ತು ನಾವ್ಯಾರು ವಿರಾಟ್​ ಕೊಹ್ಲಿರನ್ನು ನಿಜಕ್ಕೂ ನೋಡುತ್ತಿರಲಿಲ್ಲ.

ಸಕ್ಸಸ್-ಗ್ಲಾಮರ್​​​ ಲೋಕದಲ್ಲಿ ತೇಲಾಡುತ್ತಿದ್ದ ಕೊಹ್ಲಿ..!

ಯಂಗ್​ ಪ್ಲೇಯರ್​ ಆಗಿ ಸಕ್ಸಸ್​ ಕಂಡಿದ್ದ ವಿರಾಟ್, ಅಂಡರ್​-19 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ. ಅಷ್ಟೇ ಅಲ್ಲ, ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡಿದ್ದ ಕೊಹ್ಲಿ ಟೀಮ್ ಇಂಡಿಯಾದಲ್ಲಿ ನೆಲೆಯೂರಿದ್ದರು. ಆದ್ರೆ, ಧೋನಿ ನಾಯಕತ್ವದಲ್ಲಿ 2011ರ ಏಕದಿನ ವಿಶ್ವಕಪ್​ ಗೆದ್ದ ಬೆನ್ನಲ್ಲೇ ಬಣ್ಣದ ಲೋಕದಲ್ಲಿ ತೇಲಾಡಿದ್ದರು. ಅಲ್ಪಾವಧಿಯಲ್ಲಿ ಸಿಕ್ಕ ಸಕ್ಸಸ್​ನಲ್ಲಿ ಮಿಂದೆದ್ದಿದ್ದ ವಿರಾಟ್, ಅಂದು ನಿಜಕ್ಕೂ ಆಟಕ್ಕಿಂತ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಗ್ಲಾಮರ್ ಲೋಕಕ್ಕೆ.

ಪಾರ್ಟಿ, ಪಬ್ ಅಂತೆಲ್ಲ ಸುತ್ತಾಟ ನಡೆಸಿದ್ದ ವಿರಾಟ್​, ನಿಜಕ್ಕೂ ಕಾಟ್ರವರ್ಸಿಯಿಂದಲೇ ಸುದ್ದಿಯಾಗಿದ್ದು ಹೆಚ್ಚು. ಬಣ್ಣದ ಲೋಕಕ್ಕೆ ಅಡಿಕ್ಟ್​ ಆಗಿದ್ದ ಕೊಹ್ಲಿಯ ವೃತ್ತಿ ಜೀವನ ಮತ್ತೊಂದು ಕಡೆ ಅಂತತ್ರಕ್ಕೆ ಸಿಲುಕಿತ್ತು. ಹೀಗೆ ಅತಂತ್ರದಲ್ಲಿದ್ದ ವಿರಾಟ್​​ಗೆ ನಿಜಕ್ಕೂ ಪುನರ್​ ಜೀವನ ನೀಡಿದ್ದು ಆ ಒಂದು ಇನ್ನಿಂಗ್ಸ್​.

ವಿರಾಟ್​ನ ವಿಶ್ವ ಸಾಮ್ರಾಟನಾಗಿಸಿತು ಆ ಒಂದು ನಿರ್ಧಾರ..!

2011ರ ವಿಶ್ವಕಪ್​ ಬಳಿಕ ವಿರಾಟ್​ ವೃತ್ತಿ ಜೀವನ ಇಳಿ ಮುಖದತ್ತ ಸಾಗಿತ್ತು. 2012ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ರೆ, ವಿರಾಟ್​​ ಕೊಹ್ಲಿಗೆ ಕಿಕ್​​ಔಟ್ ಗ್ಯಾರಂಟಿಯಾಗಿತ್ತು. ಆದ್ರೆ, ಹೋಬರ್ಟ್​ನ ಲಂಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅಬ್ಬರಿಸಿದ ಕೊಹ್ಲಿ 86 ಎಸೆತಗಳಲ್ಲೇ 133 ರನ್ ಸಿಡಿಸಿದ್ದರು. ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಒಂದು ಇನ್ನಿಂಗ್ಸ್​ ವಿರಾಟ್​ ಕೊಹ್ಲಿಯ ವೃತ್ತಿ ಜೀವನ ಅಲ್ಲ. ಆತನ ಆಲೋಚನೆ ಮಾದರಿಯನ್ನೇ ಬದಲಿಸಿತ್ತು.

ಈ ಗೆಲುವಿನ ಬಳಿಕ ಪಾರ್ಟಿ ಮೂಡ್​​ನಲ್ಲಿದ್ದ ವಿರಾಟ್​ಗೆ ಕಾಮೆಂಟ್​ಟೇರ್​ ಹೇಳಿದ ಒಂದೇ ಒಂದು ಮಾತು ಕೊಹ್ಲಿ ಎದೆಗೆ ಅಪ್ಪಳ್ಳಿಸಿತ್ತು. ಆ ಒಂದು ಮಾತೇ this the one of the best innings played by indian.

ಯಾವ ಸ್ಥಾನಕ್ಕೆ ಹೋಗಬಹುದು ಎಂದು ಪ್ರಶ್ನಿಸಿಕೊಂಡ ಕೊಹ್ಲಿ

ಪಾರ್ಟಿಗೆ ನಾನು ಬರಲ್ಲ ಎಂದು ಹೇಳಿದ್ದ ವಿರಾಟ್​, ತನಗೆ ತಾನು ಟೈಮ್ ಕೊಟ್ಟಿದ್ದ. ಮುಂದೆ ಇದ್ದಿದ್ದ ಮಿರರ್ ತನ್ನನ್ನ ತಾನು ನೋಡಿಕೊಂಡಿದ್ದ. ಶರ್ಟ್ ಬಿಚ್ಚಿ ತನ್ನ ದೇಹ ನೋಡಿಕೊಂಡು ಎಲ್ಲಿಂದ ಬಂದಿದ್ದೇವೆ? ನಮ್ಮ ಆಶಯ ಏನು? ನನ್ನ ಪಯಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿಕೊಂಡಿದ್ದನು. ಇಷ್ಟು ವರ್ಷದ ಚರಿತ್ರೆಯಲ್ಲಿ ಇಂಥಹ ಇನ್ನಿಂಗ್ಸ್ ಇಲ್ಲ ಎಂದು ಹೊಗಳಿದ್ದಾರೆ. ಇದೇ ರೀತಿ ಸ್ಥಿರ ಪ್ರದರ್ಶನ ನೀಡಿದರೆ, ಯಾವ ಸ್ಥಾನಕ್ಕೆ ಹೋಗಬಹುದು ಎಂದು ಪ್ರಶ್ನಿಸಿಕೊಂಡಿದ್ದನು.

MSK ಪ್ರಸಾದ್, ಮಾಜಿ ಸೆಲೆಕ್ಟರ್

ಯೆಸ್. ಅಂದು ತನ್ನನ್ನ ತಾನು ಪ್ರಶ್ನಿಸಿಕೊಂಡಿದ್ದ ಕೊಹ್ಲಿ, ನಂತರ ಎದುರಾಳಿಯ ವಿಕ್ನೇಸ್, ಸ್ಟ್ರೆಂಥ್, ತನ್ನ ವಿಕ್ನೇಸ್ ಏನು ಅನ್ನೋದನ್ನ ಬುಕ್​ನಲ್ಲಿ​ ಬರೆದುಕೊಳ್ತಾರೆ. ಸಚಿನ್ ಸೇರಿದಂತೆ ಇತರೆ ಹಿರಿಯ ಆಟಗಾರರ ಮೀರಿಸಬೇಕಾದ್ರೆ, ಫಿಟ್ನೆಸ್ ಸಾಧಿಸಬೇಕು ಎಂದು ಅರಿತುಕೊಂಡ ವಿರಾಟ್​, ನಂಬರ್​ ಒನ್ ಬ್ಯಾಟ್ಸ್​ಮನ್ ಆಗಬೇಕೆಂಬ ಗಟ್ಟಿ ನಿರ್ಧಾರ ತೆಗೆದುಕೊಂಡರು. ಈ ಬಳಿಕವೇ ನೋಡಿ ದುಂಡು ದುಂಡಾಗಿದ್ದ ಕೊಹ್ಲಿ, ಫಿಟ್ನೆಸ್ ಕಾ ಬಾಪ್ ಆಗಿ ಟೀಮ್ ಇಂಡಿಯಾದ ನಂಬರ್​.1 ಬ್ಯಾಟ್ಸಮನ್ ಆಗಿ ಬೆಳೆದರು.

ನಾನು ಭಾರತಕ್ಕೆ ನಂ.1 ಆಗಬೇಕು

ವಿರಾಟ್​ ಕೊಹ್ಲಿಯಲ್ಲಿ ಶೇ.32ರಷ್ಟು ಕೊಬ್ಬು ಇತ್ತು. ನಂತರ ದಿನೇ ದಿನೇ ವರ್ಕೌಟ್​ನಿಂದ ತನ್ನ ಪ್ಯಾಟ್​​ನ 32ರಿಂದ 22ಕ್ಕೆ ಇಳಿಸಿಕೊಂಡು ಬರ್ತಾರೆ. ಕೊಹ್ಲಿಯ ಪ್ಯಾಟ್​ 22 ಇರುವಾಗ ಅದ್ಭುತವಾಗಿ ಆಡಲು ಶುರು ಮಾಡಿದ. ದಿನೇ ದಿನೇ ವಿರಾಟ್​ ಪ್ರದರ್ಶನ ನೀಡುತ್ತಿದ್ದರು. ಟೀಮ್ ಇಂಡಿಯಾದಲ್ಲಿ ನಂಬರ್​​.1 ಬ್ಯಾಟ್ಸ್​ಮನ್ ಆದರು.

ಈಗ ನಾನು ಪ್ರಪಂಚದಲ್ಲಿ ನಂಬರ್​.1 ಬ್ಯಾಟ್ಸ್​ಮನ್ ಆಗಬೇಕು. ವಿಶ್ವದ ಆಟಗಾರರನ್ನ ಮ್ಯಾಪ್ ಮಾಡುತ್ತಿದ್ದೇನೆ. ಅವರಿಗೂ ನನಗೆ ಇರೋ ಲೋಪವೇನು ಎಂಬುವುದರ ಬಗ್ಗೆ ವರ್ಕ್​ ಮಾಡುತ್ತಿದ್ದೇನೆ. ಹೊಸ ಗುರಿಯೊಂದಿಗೆ ಹೊಸ ಟ್ರೈನಿಂಗ್​ ವಿಧಾನದ ಮೊರೆ ಹೋದ ಕೊಹ್ಲಿ, ಶೇ.22ರಷ್ಟಿದ್ದ ಪ್ಯಾಟ್​ನ 12 ಪರ್ಸೆಂಟ್​ಗೆ ತೆಗೆದುಕೊಂಡು ಬಂದರು.

MSK ಪ್ರಸಾದ್, ಮಾಜಿ ಸೆಲೆಕ್ಟರ್

ಈ ಬಳಿಕವೇ ನೋಡಿ, ವಿರಾಟ್​ ಮೂರು ಫಾರ್ಮೆಟ್​ನ ಗ್ರೇಟ್​ ಬ್ಯಾಟ್ಸ್​ಮನ್ ಆಗಿ ವಿಶ್ವ ಕ್ರಿಕೆಟ್​ನ ಆಳಿದ್ದು. ಕೆಲ ವರ್ಷಗಳ ಕಾಲ ವಿಶ್ವದ ನಂ.1 ಬ್ಯಾಟ್ಸ್​ಮನ್ ಆಗಿ ಮೆರೆದಾಡಿದರು.​ ಆ ಒಂದು ಇನ್ನಿಂಗ್ಸ್​ ಬಳಿಕ ವಿರಾಟ್​, ಮನಃ ಪರಿವರ್ತನೆ ಆಗದಿದ್ದರೂ, ವಿರಾಟ್​ ಅಂತಹ ಬೆಸ್ಟ್​ ಇನ್ನಿಂಗ್ಸ್​ ಆಡದೇ ಇದ್ದಿದ್ದರೇ ಇಂದು ಕಿಂಗ್ ಕೊಹ್ಲಿ ಕಾಣುತ್ತಲೇ ಇರಲಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆ ಒಂದು ಇನ್ನಿಂಗ್ಸ್​ ಕೊಹ್ಲಿಗೆ ಸ್ಟಾರ್​ಗಿರಿ ತಂದು ಕೊಡ್ತಾ.. ವಿರಾಟ್​ನ ವಿಶ್ವ ಸಾಮ್ರಾಟನಾಗಿಸಿತು ಆ ಒಂದು ನಿರ್ಧಾರ!

https://newsfirstlive.com/wp-content/uploads/2023/06/VIRAT_KOHLI_BATTING_1.jpg

Load More