ಕೊಹ್ಲಿ, ರೋಹಿತ್​​ರನ್ನ ಮೆಂಟಲಿಯಾಗಿ ಕೆಣಕುತ್ತಿರುವ ಆಸ್ಟ್ರೇಲಿಯನ್ನರು.. ಫೀಲ್ಡ್​ ಹೊರಗೂ ಮೈಂಡ್​ಗೇಮ್

author-image
Bheemappa
Updated On
ಕೊಹ್ಲಿ, ರೋಹಿತ್​​ರನ್ನ ಮೆಂಟಲಿಯಾಗಿ ಕೆಣಕುತ್ತಿರುವ ಆಸ್ಟ್ರೇಲಿಯನ್ನರು.. ಫೀಲ್ಡ್​ ಹೊರಗೂ ಮೈಂಡ್​ಗೇಮ್
Advertisment
  • ಎಲ್ಲದಕ್ಕೂ ಬ್ಯಾಟ್​ನಿಂದಲೆ ಉತ್ತರ ಕೊಡ್ತಾರಾ ರೋಹಿತ್, ಕೊಹ್ಲಿ?
  • ಆಸಿಸ್​ ಮಾಧ್ಯಮಗಳಿಂದ ನಡೀತಿದೆಯಾ ಹೊಸ ಮೈಂಡ್​ಗೇಮ್?
  • ಟೀಮ್ ಇಂಡಿಯಾ ಮನೋಬಲ ಕುಗ್ಗಿಸಲು ಆಸಿಸ್ ಗದಾ ಪ್ರಹಾರ!

ಬಾಕ್ಸಿಂಗ್ ಡೇ ಟೆಸ್ಟ್​​ ಆರಂಭವಾಗಿದೆ. ಮೆಲ್ಬರ್ನ್ ಮಹಾಯುದ್ಧ ಗೆಲ್ಲುಲು ಇನ್ನೂ 4 ದಿನ ಆನ್​ಫೀಲ್ಡ್​ನಲ್ಲಿ ಹೋರಾಟ ನಡೆಸಲಿವೆ. ಆದ್ರೆ, ಆಫ್​ ದಿ ಫೀಲ್ಡ್​ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಲು ಆಸ್ಟ್ರೇಲಿಯನ್ಸ್​ ಮೀಡಿಯಾಗಳು ಹೊಸ ಮೈಂಡ್​ಗೇಮ್ ಶುರುಮಾಡಿದೆ.

ಮೆಲ್ಬರ್ನ್ ಬಾಕ್ಸಿಂಗ್ ಡೇ ಟೆಸ್ಟ್​ ರೋಚಕ ಆರಂಭ ಪಡೆದುಕೊಂಡಿದೆ. ಮೆಲ್ಬರ್ನ್ ಟೆಸ್ಟ್​ ಗೆಲುವಿನೊಂದಿಗೆ ಸರಣಿ ಮೇಲೆ ಪ್ರಾಬಲ್ಯ ಮರೆಯಲು ವಿಶೇಷ ರಣತಂತ್ರಗಳೊಂದಿಗೆ ರಣಾಂಗಣಕ್ಕೆ ಇಳಿದಿವೆ. ಆದ್ರೆ, ಇತ್ತ ಆಫ್​ ದಿ ಫೀಲ್ಡ್​ನಲ್ಲಿ ಆಸ್ಟ್ರೇಲಿಯಾ ಮೀಡಿಯಾಗಳು ಟೀಮ್​ ಇಂಡಿಯಾವನ್ನ ಸುಖಾ ಸುಮ್ಮನೆ ಕೆಣಕಿ ಆತ್ಮವಿಶ್ವಾಸ ಕುಗ್ಗಿಸೋ ಯತ್ನಕ್ಕೆ ಕೈ ಹಾಕಿವೆ.

publive-image

ಗಾಬಾ ಟೆಸ್ಟ್ ಡ್ರಾ ಬೆನ್ನಲ್ಲೇ ಸುಖಾಸುಮ್ಮನೆ ಟೀಮ್ ಇಂಡಿಯಾ ಆಟಗಾರರನ್ನು ಟಾರ್ಗೆಟ್ ಮಾಡುತ್ತಿವೆ. ಏರ್​​ಪೋರ್ಟ್​ನಲ್ಲಿ ವಿರಾಟ್ ಕೊಹ್ಲಿಗೆ ಜಗಳಗಂಟ ಪಟ್ಟ ಕಟ್ಟಿದ್ದ ಮಾಧ್ಯಮಗಳು, ಪ್ರೆಸ್​ ಕಾನ್ಫಿರೆನ್ಸ್​ನಲ್ಲಿ ರವೀಂದ್ರ ಜಡೇಜಾ ಹಿಂದಿ ಮಾತನಾಡಿದ್ದಕ್ಕೆ ಕ್ಯಾತೆ ತೆಗೆದಿತ್ತು. ಆದ್ರೀಗ ಈ ಎರಡು ಸುಖ್ಯಾಂತದ ಬಳಿಕ ಪಾರ್ಟ್​-2 ಸಿನಿಮಾಗೆ ಚಾಲ್ತಿ ನೀಡಿರುವ ಆಸಿಸ್ ಮೀಡಿಯಾಗಳು, ಬಾಕ್ಸಿಂಗ್ ಡೇ ಟೆಸ್ಟ್​ ಸುತ್ತಲೂ ಹೊಸ ಕಥೆ ಕಟ್ಟುತ್ತಿದೆ.

ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಬ್ಲಾಕ್ ಬಾಸ್ಟರ್​ ರಿಟೈರ್ಮೆಂಟ್​..?

ಬ್ರಿಸ್ಬೇನ್‌ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ರವಿಚಂದ್ರನ್ ಅಶ್ವಿನ್ ಗುಡ್​ ಬೈ ಘೋಷಿಸಿದ್ದು, ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಈ ಬೆನ್ನಲ್ಲೇ ಈಗ ಹೊಸ ಊಹಾಪೋಹಗಳು ಹುಟ್ಟಿಕೊಂಡಿವೆ. ಮೆಲ್ಬರ್ನ್​ನ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲೇ ಟೀಮ್ ಇಂಡಿಯಾದ ಮೂವರು ಹಿರಿಯ ಆಟಗಾರರು, ಟೆಸ್ಟ್​ಗೆ ಗುಡ್​ ಬೈ ಹೇಳುತ್ತಾರೆ ಎಂದು ಸುದ್ದಿ ಮಾಡುತ್ತಿರುವ ಆಸಿಸ್ ಮಾಧ್ಯಮಗಳು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ನಿವೃತ್ತಿಯೊಂದಿಗೆ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಬ್ಲಾಕ್ ಬಾಸ್ಟರ್ ರಿಟೈರ್ಮೆಂಟ್​ ಕಾದಿದೆ ಅಂತಾನೇ ಬಿಂಬಿಸುತ್ತಿವೆ.

ಆನ್​ಫೀಲ್ಡ್​ನಲ್ಲಿ ಬ್ಯಾಟ್ ಹಾಗೂ ಬಾಲ್​ನಿಂದ ಮಾತ್ರವೇ ಪ್ರವಾಸಿ ತಂಡಗಳನ್ನು ಆಸ್ಟ್ರೇಲಿಯಾ ಅಟ್ಯಾಕ್ ಮಾಡಲ್ಲ. ಆಫ್​ ದಿ ಫೀಲ್ಡ್​ನಲ್ಲಿ ಸ್ಲೆಡ್ಜಿಂಗ್ ಮಾಡಿ ಏಕಾಗ್ರತೆಗೆ ಭಂಗ ಮಾಡುವ ಕೆಲಸ ಮಾಡುವುದು ಆಸ್ಟ್ರೇಲಿಯನ್ನರ ಚಾಳಿ. ಇದಕ್ಕೆ ತಕ್ಕಂತೆ ಆಸಿಸ್​ ಆಟಗಾರರು, ಮಾಜಿ ಆಟಗಾರರು ವಿವಿಧ ರೀತಿಯ ಹೇಳಿಕೆ ನೀಡುತ್ತಾರೆ. ಪ್ರವಾಸಿ ತಂಡದ ಮನೋಬಲ ಕುಗ್ಗಿಸುವ ಪ್ರಯತ್ನಕ್ಕೆ ಕೈಹಾಕುತ್ತಾರೆ. ಆದ್ರೀಗ ಆಸಿಸ್​ ಮೀಡಿಯಾಗಳು ಮೆಲ್ಬರ್ನ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಬ್ಲಾಕ್ ಬಾಸ್ಟರ್​ ರಿಟೈರ್ಮೆಂಟ್​​ನ ಹೆಡ್​ಲೈನ್​ನೊಂದಿಗೆ ಹೊಸ ಮೈಂಡ್‌ಗೇಮ್ ಶುರುಮಾಡಿದೆ.

ಇದನ್ನೂ ಓದಿ:ICC Test Ranking; ಕೊಹ್ಲಿ​, ರೋಹಿತ್, ರಾಹುಲ್ ಸ್ಥಾನ ಯಾವುದು.. ಫಸ್ಟ್​, ಸೆಕೆಂಡ್​ನಲ್ಲಿ ಯಾರಿದ್ದಾರೆ?

publive-image

ಫಾರ್ಮ್​ನಲ್ಲಿಲ್ಲದ ದಿಗ್ಗಜರ ಮೇಲೆ ಮತ್ತಷ್ಟು ಎಫೆಕ್ಟ್ ಆಗುತ್ತಾ..?

ಸದ್ಯ ನಿವೃತ್ತಿಯ ಸಾಲಿನಲ್ಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಕಮ್​ಬ್ಯಾಕ್ ಮಾಡಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇಂಥಹ ಸಂದಿಗ್ದ ಪರಿಸ್ಥಿತಿಯಲ್ಲಿರುವ ರೋಹಿತ್ ಶರ್ಮಾ ಹಾಗೂ ವಿರಾಟ್​ ಮೇಲೆ ಮೆಂಟಲಿ ಎಫೆಕ್ಟ್ ಆಗೋ ಸಾಧ್ಯತೆ ಇದ್ದೇ ಇದೆ. ಆದ್ರೆ, ಇದಕ್ಕೆಲ್ಲ ದಿಗ್ಗಜರು ಬ್ಯಾಟ್​ನಿಂದಲೇ ಉತ್ತರಿಸಬೇಕಾದ ಅನಿವಾರ್ಯತೆ ಇದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ರನ್ ಗಳಿಸಲಿ, ರನ್ ಗಳಿಸದಿರಲಿ, ಏಜ್ ಆಗಿರುವ ಇವರು ನಿವೃತ್ತಿ ಅಂಚಿನಲ್ಲಿರುವುದು ಸತ್ಯ. ಆದ್ರೆ, ಬಾಕ್ಸಿಂಗ್ ಡೇ ಟೆಸ್ಟ್​ ಕರಿಯರ್ ಅಂತ್ಯ ಅನ್ನೋದು ಸರಿಯಲ್ಲ. ಯಾಕಂದ್ರೆ, ಮುಂದಿನ ಎರಡೂ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಗೆದ್ದರೆ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ತನಕ ಟೀಮ್ ಇಂಡಿಯಾದಲ್ಲಿ ಉಳಿಯುತ್ತಾರೆ. ಇಲ್ಲ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಅಂತ್ಯದ ಬಳಿಕ ಭವಿಷ್ಯ ನಿರ್ಧಾರವಾಗುತ್ತೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment