ಅದಕ್ಕೆಲ್ಲ ನೋ ಟೆನ್ಶನ್​! ಯಾಕಂದ್ರೆ ಎಕ್ಸ್​ಪೆನ್ಸಿವ್​ ಟೈಮನ್ನೇ ಹಿಡಿದಿಟ್ಟುಕೊಂಡಿದ್ದಾರೆ ಪಾಂಡ್ಯ​!

author-image
AS Harshith
Updated On
ಅದಕ್ಕೆಲ್ಲ ನೋ ಟೆನ್ಶನ್​! ಯಾಕಂದ್ರೆ ಎಕ್ಸ್​ಪೆನ್ಸಿವ್​ ಟೈಮನ್ನೇ ಹಿಡಿದಿಟ್ಟುಕೊಂಡಿದ್ದಾರೆ ಪಾಂಡ್ಯ​!
Advertisment
  • ವಿಭಿನ್ನ ಸ್ಟೈಲ್​ನಿಂದ ಎಲ್ಲರ ಗಮನ ಸೆಳೆದ ಕ್ರಿಕೆಟಿಗ
  • ಪಾಂಡ್ಯಗೊಂದು ವಿಚಿತ್ರವಾದ ಹವ್ಯಾಸವಿದೆ.. ಅದೇನು ಗೊತ್ತಾ?
  • ಅದಕ್ಕಾಗಿ ಪಾಂಡ್ಯ ಕೋಟಿ-ಕೋಟಿ ಹಣವನ್ನ ಖರ್ಚು ಮಾಡ್ತಾರೆ

ಟೀಮ್​ ಇಂಡಿಯಾ ಆಲ್​​ರೌಂಡರ್​​ ಹಾರ್ದಿಕ್​ ಪಾಂಡ್ಯ ಆಟದ ಹೊರತಾಗಿ ತಮ್ಮ ವಿಭಿನ್ನ ಸ್ಟೈಲ್​ನಿಂದಲೂ ತನ್ನ ಗಮನ ಸೆಳೆದ ಕ್ರಿಕೆಟಿಗ. ಈ ಹಾರ್ದಿಕ್​ ಪಾಂಡ್ಯಗೆ ಒಂದು ವಿಚಿತ್ರವಾದ ಹವ್ಯಾಸವಿದೆ. ಇದಕ್ಕಾಗಿ ಕೋಟಿ-ಕೋಟಿ ಹಣವನ್ನ ಖರ್ಚು ಮಾಡಿದ್ದಾರೆ. ಅಷ್ಟಕ್ಕೂ ಹಾರ್ದಿಕ್​ಗಿರೋ ಆ ಎಕ್ಸ್​ಪೆನ್ಸಿವ್​ ಹವ್ಯಾಸ ಏನು ಗೊತ್ತಾ? ಈ ಸ್ಟೋರಿ ಓದಿ.

ಟೀಮ್​ ಇಂಡಿಯಾದ ಕ್ರಿಕೆಟಿಗರು ಆಟದಿಂದ ಮಾತ್ರವಲ್ಲ ತಮ್ಮ ಆಫ್​ ಫೀಲ್ಡ್​ ಜೀವನದಿಂದಲೂ ಆಗಾಗ ಸುದ್ದಿಯಾಗ್ತಾರೆ. ಆಟದ ಹೊರತಾಗಿ ಹಲವು ವಿಶೇಷವಾದ ಕ್ರೇಜ್​​ಗಳನ್ನ ಹೊಂದಿರ್ತಾರೆ. ಬಟ್ಟೆ, ಶೂ, ಸನ್​ ಗ್ಲಾಸ್​ಗಳ ಕಲೆಕ್ಷನ್​ನ ಹವ್ಯಾಸ ಇರುತ್ತೆ. ಇದೇ ರೀತಿ ಆಲ್​​ರೌಂಡರ್​ ಹಾರ್ದಿಕ್​​ ಪಾಂಡ್ಯಾಗೆ ವಾಚ್ ಕಲೆಕ್ಷನ್​​ನ ಗೀಳಿದೆ.

publive-image

ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗದಿದ್ದರೆ.. ಭಾರತದ ಪಂದ್ಯಗಳು ಈ ದೇಶದಲ್ಲಿ ನಡೆಯಲಿವೆ..

ವಾಚ್​ಗಳ ಪ್ರಖ್ಯಾತ ಬ್ರ್ಯಾಂಡ್​ ಪಾಟೆಕ್​ ಫಿಲಿಫಿ ಕಂಪನಿಯ ಎಕ್ಸ್​ಪೆನ್ಸಿವ್​​ ವಾಚ್​ಗಳನ್ನ ಖರೀದಿಸೋ ಕ್ರೇಜ್​ ಪಾಂಡ್ಯಾಗಿದೆ. ನೀವು ನಂಬಲ್ಲ ಹಾರ್ದಿಕ್​ ಬಳಿ ಇರೋ ಈ ಕಂಪನಿಯ ಎಲ್ಲಾ ವಾಚ್​ಗಳ ಅಂದಾಜು ಬೆಲೆ ಬರೋಬ್ಬರಿ 10.8 ಕೋಟಿಗೂ ಅಧಿಕವಾಗಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಮದುವೆಯ ಸ್ಪೆಷಲ್ ಸಿನಿಮಾ ರೆಡಿ.. ಅಮಿತಾಬ್ ಬಚ್ಚನ್ ಪಾತ್ರವೇನು..?

publive-image

ಪಾಟೆಕ್​ ಫಿಲಿಫಿ ನೌಟಿಲೆಸ್​ ಪ್ಲಾಟಿನಮ್​ 5711 ಇದು ಹಾರ್ದಿಕ್​ ಪಾಂಡ್ಯ ಬಳಿ ಇರೋ ಅತ್ಯಂತ ದುಬಾರಿ ವಾಚ್​. ಇದ್ರ ಬೆಲೆ ಬರೋಬ್ಬರಿ 5 ಕೋಟಿಗೂ ಹೆಚ್ಚಿದೆ. 2.7 ಕೋಟಿ ಬೆಲೆಯ ಪಾಟೆಕ್​ ಫಿಲಿಫಿ ನೌಟಿಲೆಸ್ 18K ವೈಟ್​ ಗೋಲ್ಡ್​ ವಾಚ್ ಕೂಡ​​ ಹಾರ್ದಿಕ್​ ಕಲೆಕ್ಷನ್​ನಲ್ಲಿದೆ. ಇವೆರೆಡರ ಹೊರತಾಗಿ 1.65 ಕೋಟಿ ಮೌಲ್ಯದ ಪಾಟೆಕ್​ ಫಿಲಿಫಿ ನೌಟಿಲೆಸ್ 5712R ವಾಚ್​ ಕೂಡ ಪಾಂಡ್ಯ ಬಳಿಯಿದೆ. ಇನ್ನು 1 ಕೋಟಿ ಮೌಲ್ಯದ ರೊಲೆಕ್ಸ್ ಒ​​ಸ್ಟೆರ್​​ ಪ್ರರ್ಪೆಚ್ಚುವಲ್​​ ಡೈಟೋನಾ ಕಾಸ್ಮೋಗ್ರಾಫ್​​, 38 ಲಕ್ಷ ಮೌಲ್ಯದ ರಾಯಲ್​ ಓಕ್​ ರೋಸ್​ ಗೋಲ್ಡ್​ ವಾಚ್​ಗಳನ್ನ ಕೂಡ ಹಾರ್ದಿಕ್​ ಹೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment