newsfirstkannada.com

ಬ್ಯಾಟ್​​​​ ಪ್ರಾಯೋಜಕತ್ವದಿಂದಲೂ ಕೋಟಿ ಕೋಟಿ ಏಣಿಸುತ್ತಾರೆ ಕ್ರಿಕೆಟಿಗರು.. ಈ ಆಟಗಾರನಿಗೆ ವರ್ಷಕ್ಕೆ 12.5 ಕೋಟಿ ಬರುತ್ತೆ..!

Share :

Published July 20, 2023 at 1:40pm

    ಹಿಟ್​ಮ್ಯಾನ್​ ಖಾತೆಗೆ 4 ಕೋಟಿ, ವಾರ್ನರ್​ಗೆ ಎಷ್ಟು?

    ಕ್ರಿಕೆಟ್​​​ಗೆ ಗುಡ್​ ಬೈ ಹೇಳಿದ್ರೂ ಕುಗ್ಗದ ಮಾಹಿ ಪವರ್

    ಬ್ಯಾಟ್​ ಸ್ಪಾನ್ಸರ್​ಶಿಪ್​ನಿಂದ​ ಸ್ಮಿತ್​ ಸಂಪಾದನೆ ಎಷ್ಟು.?

ಕ್ರಿಕೆಟರ್ಸ್​​​ ​​ಅಡಿಯಿಂದ ಹಿಡಿದು ಮುಡಿವರೆಗೂ ಸ್ಪಾನ್ಸರ್​ಶಿಪ್​ನಿಂದ ಕೋಟಿ ಕೋಟಿ ಹಣವನ್ನ ಕಮಾಯ್​ ಮಾಡ್ತಾರೆ. ಬ್ಯಾಟ್​​ ಸ್ಪಾನ್ಸರ್​ಶಿಪ್​ ವಿಚಾರದಲ್ಲೂ ಕೋಟಿಯಲ್ಲೇ ಲೆಕ್ಕ. ಹಾಗಾದ್ರೆ ಬ್ಯಾಟ್​​ ಸ್ಪಾನ್ಸರ್​​ಶಿಪ್​ನಿಂದ ಅತಿ ಹೆಚ್ಚು ಸಂಪಾದನೆ ಮಾಡೋ ಆಟಗಾರರು ಯಾರು?

ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​ಗಳ ಪಾಲಿಗೆ ಬ್ಯಾಟ್​​ ಅನ್ನೋದೇ ವೆಪನ್. ಎದುರಾಳಿಗಳ ತಂತ್ರ-ರಣತಂತ್ರವನ್ನ ಭೇದಿಸಿ, ಬೌಲಿಂಗ್​ ಭದ್ರಕೋಟೆಯನ್ನು ಛಿದ್ರಗೊಳಿಸೋಕೆ ಇರೋ ಅಸ್ತ್ರ. ಸಕ್ಸಸ್​-ಫೇಲ್ಯೂರ್​ ಎಲ್ಲವೂ ಬ್ಯಾಟ್​ ಎಂಬ ಅಸ್ತ್ರದ ಮೇಲೆ ನಿಂತಿರುತ್ತೆ. ಬ್ಯಾಟ್ಸ್​​ಮನ್​​ಗಳ ಬತ್ತಳಿಕೆಯಲ್ಲಿರೋ ಈ ವೆಪನ್​ಗೆ ಕೋಟಿ ಕೋಟಿ ಹಣ ಹರಿದುಬರುತ್ತೆ ಗೊತ್ತಾ?

100 ಕೋಟಿ ಡೀಲ್​ಗೆ ಸಹಿ ಹಾಕಿದ ಕೊಹ್ಲಿ

ಮಾಸ್ಟರ್​​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​, ಬ್ಯಾಟ್​ ಸ್ಪಾನ್ಸರ್​​ಶಿಪ್​ಗಾಗಿ ಈ ಹಿಂದೆ MRF ಕಂಪನಿಯ ಜೊತೆಗೆ ವರ್ಷಕ್ಕೆ 8 ಕೋಟಿಯ ಡೀಲ್​ಗೆ ಸೈನ್​ ಹಾಕಿದ್ದರು. ಬ್ಯಾಟ್ ಸ್ಪಾನ್ಸರ್​​ಶಿಪ್​​ನಿಂದ ಅತಿ ಹೆಚ್ಚು ಹಣಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಈವರೆಗೆ ಸಚಿನ್​ದ್ದಾಗಿತ್ತು. ಇದೀಗ ಈ ದಾಖಲೆಯನ್ನ ಕೊಹ್ಲಿ ಪುಡಿಗಟ್ಟಿದ್ದಾರೆ. ಬರೋಬ್ಬರಿ 100 ಕೋಟಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

1 ವರ್ಷಕ್ಕೆ ಕೊಹ್ಲಿ ಖಜಾನೆಗೆ 12.5 ಕೋಟಿ

2025ರವರೆಗೆ ಬ್ಯಾಟ್​​ ಸ್ಪಾನ್ಸರ್​ಶಿಪ್​ಗಾಗಿ MRF ಜೊತೆಗೆ ಕೊಹ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ. ಹೊಸ ಒಪ್ಪಂದದ ಪ್ರಕಾರ ವಾರ್ಷಿಕವಾಗಿ 12.5 ಕೋಟಿ ಹಣ ಕೊಹ್ಲಿಯ ಖಜಾನೆ ಸೇರಲಿದೆ. ಇದ್ರೊಂದಿಗೆ ಬ್ಯಾಟ್​​ ಸ್ಪಾನ್ಸರ್​​ಶಿಪ್​ನಿಂದ ಹೆಚ್ಚು ಹಣಗಳಿಸೋ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.

ವರ್ಷಕ್ಕೆ 4 ಕೋಟಿ ಪಡೀತಾರೆ ಹಿಟ್​ಮ್ಯಾನ್

ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಬ್ಯಾಟ್​ ಸ್ಪಾನ್ಸರ್​ಶಿಪ್​ನಿಂದ ಅತಿ ಹೆಚ್ಚು ಹಣಗಳಿಸೋ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. CEAT ಟೈರ್​ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿರೋ ರೋಹಿತ್​, ವಾರ್ಷಿಕವಾಗಿ 4 ಕೋಟಿ ಹಣವನ್ನ ಜೇಬಿಗಿಳಿಸ್ತಾರೆ.

ವಾರ್ನರ್​ ಖಾತೆಗೆ ಜಮಾ ಆಗುತ್ತೆ 3.3 ಕೋಟಿ

ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ಕೂಡ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. DSC ಬ್ರ್ಯಾಂಡ್​​ ಜೊತೆಗೆ ಟೈ ಅಪ್​ ಆಗಿರೋ ವಾರ್ನರ್,​ ವಾರ್ಷಿಕವಾಗಿ 3.3 ಕೋಟಿ ಹಣವನ್ನ ಬ್ಯಾಟ್​​ ಸ್ಪಾನ್ಸರ್​​ಶಿಪ್​ನಿಂದ ಪಡೀತಾರೆ.

​ಸ್ಮಿತ್​ ಬ್ಯಾಟ್​​ ಸ್ಪಾನ್ಸರ್​​ಶಿಪ್​ ಸಂಪಾದನೆ 2.45 ಕೋಟಿ

ಆಸಿಸ್​​ ಬ್ಯಾಟ್ಸ್​ಮನ್​​ ಸ್ಟೀವ್​ ಸ್ಮಿತ್​ ಕೂಡ ಬ್ಯಾಟ್ ಸ್ಪಾನ್ಸರ್​ಶಿಪ್​ನಿಂದ ಭರ್ಜರಿ ಹಣವನ್ನೇ ಗಳಿಸ್ತಾರೆ. NB ಕಂಪನಿಯ ಡಿಸಿ 10 ವರ್ಷನ್​ನ ಬ್ಯಾಟ್​ ಬಳಸೋ ಸ್ಮಿತ್​, ವರ್ಷಕ್ಕೆ 2.45 ಕೋಟಿ ಹಣವನ್ನ ಸಂಪಾದಿಸ್ತಾರೆ.

ಕ್ರಿಕೆಟ್​​​ಗೆ ಗುಡ್​ ಬೈ ಹೇಳಿದ್ರೂ ಕುಗ್ಗದ ಮಾಹಿ ಹವಾ..!

ಇಂಟರ್​ನ್ಯಾಷನಲ್​ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ್ರೂ ಧೋನಿ ಈಗಲೂ ಜಾಹೀರಾತುದಾರರ ಪಾಲಿಗೆ ಡಾರ್ಲಿಂಗ್​. ಕೇವಲ ಐಪಿಎಲ್​ನಲ್ಲಿ ಮಾತ್ರ ಬ್ಯಾಟ್​ ಝಳಪಿಸೋ ಧೋನಿ, 3 ತಿಂಗಳ ಆಟದಿಂದಲೇ 2.2 ಕೋಟಿ ಹಣವನ್ನು ಕಮಾಯ್​ ಮಾಡ್ತಾರೆ. ಈ ಮೂಲಕ ಬ್ಯಾಟ್ ಸ್ಪಾನ್ಸರ್​ಶಿಪ್​ನಿಂದ ಹೆಚ್ಚು ಹಣಗಳಿಸೋ ಆಟಗಾರರ ಪಟ್ಟಿಯಲ್ಲಿ ಟಾಪ್​ 5 ಸ್ಥಾನದಲ್ಲಿದ್ದಾರೆ.
ಇವರಷ್ಟೇ ಅಲ್ಲ.. ರಿಷಭ್​ ಪಂತ್ 2 ಕೋಟಿ ಹಣವನ್ನು ಬ್ಯಾಟ್​​ ಸ್ಪಾನ್ಸರ್​​ಶಿಪ್​ನಿಂದ ಗಳಿಸಿದ್ರೆ ಜೋ ರೂಟ್ 1.8 ಕೋಟಿ, ಕೇನ್​ ವಿಲಿಯಮ್​ಸನ್​ 1.64 ಕೋಟಿ, ಬಾಬರ್​ ಅಝಂ 1.14 ಕೋಟಿ ಹಣವನ್ನ ಸಂಪಾದಿಸ್ತಾರೆ. ಆನೆ ಇದ್ದರೂ ಕೋಟಿ ಸತ್ತರೂ ಕೋಟಿ ಅನ್ನೋ ಮಾತಿದ್ಯಲ್ಲ ಅದು ಕ್ರಿಕೆಟರ್ಸ್​​ಗೆ ಪಕ್ಕಾ ಸೂಟ್​ ಆಗುತ್ತೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬ್ಯಾಟ್​​​​ ಪ್ರಾಯೋಜಕತ್ವದಿಂದಲೂ ಕೋಟಿ ಕೋಟಿ ಏಣಿಸುತ್ತಾರೆ ಕ್ರಿಕೆಟಿಗರು.. ಈ ಆಟಗಾರನಿಗೆ ವರ್ಷಕ್ಕೆ 12.5 ಕೋಟಿ ಬರುತ್ತೆ..!

https://newsfirstlive.com/wp-content/uploads/2023/07/DHONI-8.jpg

Load More