/newsfirstlive-kannada/media/post_attachments/wp-content/uploads/2024/06/VIRAT_KOHLI_1.jpg)
ಒಂದು ಕಾಲವಿತ್ತು. ಕಿಂಗ್ ಕೊಹ್ಲಿಯನ್ನ ಎದುರು ಹಾಕಿಕೊಳ್ಳಲು ಬಿಸಿಸಿಐನೇ ಹೆದರುತ್ತಿತ್ತು. ಆದ್ರೀಗ ಕಾಲ ಉರುಳಿದೆ. ಬಿಗ್​ಬಾಸ್​ಗಳಿಗೆ ರನ್ ಮಷೀನ್​​​​​​ ತಲೆಬಾಗುವ ಸ್ಥಿತಿ ಬಂದಿದೆ. ಲಂಕಾ ಪ್ರವಾಸದ ವೇಳೆ ಒಮ್ಮೆ ತಲೆಬಾಗಿದ್ದಾಯ್ತು. ಇದೀಗ ಮತ್ತೊಮ್ಮೆ ಕೊಹ್ಲಿ ಶರಣಾಗಿದ್ದಾರೆ.
ದುಲೀಪ್​​ ಟ್ರೋಫಿ ಆಡಲು ಸಜ್ಜಾದ ರನ್ ಮಷೀನ್
ಗೌತಮ್​ ಗಂಭೀರ್​ ಟೀಮ್ ಇಂಡಿಯಾದ ಹೆಡ್​​ಕೋಚ್​ ಆಗಿದ್ದೇ ಬಂತು. ಕಠಿಣ ನಿರ್ಧಾರ ತೆಗೆದುಕೊಳ್ತಿದ್ದಾರೆ. ಚಾರ್ಜ್​ ತೆಗೆದುಕೊಂಡ ಮೊದಲ ಸಿರೀಸ್​ ವೇಳೆಯೇ ರೆಸ್ಟ್​ ಇದ್ದಾಗ ಕಾಂಟ್ರಾಕ್ಟೆಡ್​ ಪ್ಲೇಯರ್ಸ್​ ಡೊಮೆಸ್ಟಿಕ್​ ಕ್ರಿಕೆಟ್ ಆಡಬೇಕು ಅಂತ ಕಡ್ಡಿ ಮುರಿದಂತೆ ಹೇಳಿದ್ರು. ಇದಕ್ಕೆ ಕ್ಯಾಪ್ಟನ್ ರೋಹಿತ್​ ಶರ್ಮಾ ಕೂಡ ಸಾಥ್​ ಕೊಟ್ಟಿದ್ರು. ಇದರ ಹಿಂದಿನ ಸೂತ್ರಧಾರಿ ಬಿಸಿಸಿಐ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಸದ್ಯ ಬಿಸಿಸಿಐಯನ್ನ ಯಾರೂ ಪ್ರಶ್ನೆ ಮಾಡುವಂತಿಲ್ಲ. ಟೀಮ್ ಇಂಡಿಯಾ ವಿಚಾರದಲ್ಲಿ ಬಿಗ್​ಬಾಸ್​ಗಳು ಹೇಳಿದ್ದೇ ವೇದವಾಕ್ಯ. ಯಾವ ಸೂಪರ್​​ ಸ್ಟಾರ್​ಗಳ ಆಟವು ನಡೆಯಲ್ಲ. ಅದಕ್ಕೆ ಸ್ಟಾರ್ ಕ್ರಿಕೆಟರ್ಸ್​ ದುಲೀಪ್​ ಟ್ರೋಫಿಯತ್ತ ಮುಖ ಮಾಡಿರೋದೇ ಮತ್ತೊಂದು ನಿದರ್ಶನ.
ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!
ದುಲೀಪ್ ಟ್ರೋಫಿಯಲ್ಲಿ ಘರ್ಜಿಸಲು ಕೊಹ್ಲಿ ರೆಡಿ
ಒಂದು ತಿಂಗಳು ಮಟ್ಟಿಗೆ ಟೀಮ್ ಇಂಡಿಯಾಗೆ ಯಾವುದೇ ಸರಣಿಗಳಿಲ್ಲ. ಸೆಪ್ಟೆಂಬರ್​​​ 5 ರಿಂದ ದುಲೀಪ್​ ಟ್ರೋಫಿ ಆರಂಭಗೊಳ್ಳಲಿದೆ. ಈ ಡೊಮೆಸ್ಟಿಕ್​ ಪಂದ್ಯಾವಳಿಯಲ್ಲಿ ಎಲ್ಲರಿಗೂ ಆಡುವಂತೆ ಬಿಸಿಸಿಐ ಎಲ್ಲರಿಗೂ ಖಡಕ್ ಆಗಿ ಸೂಚಿಸಿದೆ. ಬಿಗ್​​ಬಾಸ್​ಗಳು ಸೂಚನೆ ಕೊಟ್ಟ ಬೆನ್ನಲ್ಲೆ ಕಿಂಗ್ ಕೊಹ್ಲಿ ದುಲೀಪ್​​ ಟ್ರೋಫಿಯಲ್ಲಿ ಪ್ಯಾಡ್ ಕಟ್ಟಿ ಘರ್ಜಿಸಲು ಸಜ್ಜಾಗಿದ್ದಾರೆ.
12 ವರ್ಷಗಳ ಬಳಿಕ ಡೊಮೆಸ್ಟಿಕ್​​ ಕ್ರಿಕೆಟ್​ನಲ್ಲಿ ಕಣಕ್ಕೆ
ವಿಶ್ವ ಕ್ರಿಕೆಟ್​ನ ತ್ರಿವಿಕ್ರಮನಾಗಿ ಮೆರೆದಾಡ್ತಿರೋ ಕಿಂಗ್ ಕೊಹ್ಲಿ ಡೊಮೆಸ್ಟಿಕ್​ ಕ್ರಿಕೆಟ್ ಆಡದೇ ದಶಕಗಳೇ ಉರುಳಿತ್ತು. ಇದೀಗ ದುಲೀಪ್​ ಟ್ರೋಫಿಯಲ್ಲಿ ಆಡಲು ರನ್​ ಮಷೀನ್ ರೆಡಿ ಆಗಿದ್ದಾರೆ. ಆ ಮೂಲಕ ಬರೋಬ್ಬರಿ 12 ವರ್ಷಗಳ ಬಳಿಕ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ 2012 ರಲ್ಲಿ ಡೆಲ್ಲಿ ಪರ ಕೊನೆ ಡೊಮೆಸ್ಟಿಕ್​ ಪಂದ್ಯವನ್ನಾಡಿದ್ದರು.
ದುಲೀಪ್ ಟ್ರೋಫಿ ಕೊಹ್ಲಿಗೆ ಇಂಪಾರ್ಟೆಂಟ್​
ಬಾಂಗ್ಲಾದೇಶ ಟೆಸ್ಟ್​ ಸರಣಿಗೂ ಮುನ್ನ ನಡೆಯುವ ದುಲೀಪ್​ ಟ್ರೋಫಿ ಕಿಂಗ್ ಕೊಹ್ಲಿ ಮಹತ್ವದ್ದಾಗಿದೆ. ಟೀಮ್ ಇಂಡಿಯಾದಲ್ಲಿ ಪೈಪೊಟಿ ಹೆಚ್ಚಿದೆ. ಪ್ರತಿ ಸ್ಲಾಟ್​ಗೆ ಇಬ್ಬರಿಂದ ಮೂವರು ಪ್ಲೇಯರ್ಸ್​ ಸಿದ್ಧರಿದ್ದಾರೆ. ಹೀಗಾಗಿ ಕೊಹ್ಲಿ ಮೈ ಮರೆಯದೇ ದುಲೀಪ್​ ಟ್ರೋಫಿಯಲ್ಲಿ ಪರ್ಫಾಮ್​ ಮಾಡಲೇಬೇಕಿದೆ. ಆಗಲಷ್ಟೇ ಮುಂಬರೋ ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಅವಕಾಶದ ಬಾಗಿಲು ತೆರೆಯಲಿದೆ.
ಲಂಕಾ ODI ಸರಣಿ
ಶ್ರೀಲಂಕಾ ಏಕದಿನ ಸರಣಿಯಲ್ಲಿ ಕೊಹ್ಕಿ ಈ ಮಟ್ಟಿಗೆ ಕಳಪೆ ಪರ್ಫಾಮೆನ್ಸ್​​​​​ ನೀಡ್ತಾರೆ ಅಂತ. ಸಿಂಹಳೀಯರ ಸ್ಪಿನ್​​ಗೆ ತಡಬಡಾಯಿಸಿದ ಕೊಹ್ಲಿ ಆಡಿದ 3 ಪಂದ್ಯಗಳಿಂದ ಬರೀ 58 ರನ್ ಗಳಿಸಿ ಟೀಕಾಕಾರರಿಗೆ ಬಾಯಿಗೆ ಆಹಾರವಾಗಿದ್ದಾರೆ.
ಬಾಂಗ್ಲಾ ಸರಣಿಯಲ್ಲಿ ನಡೆಸ್ತಾರಾ ರನ್ ಪ್ರಹಾರ..?
ಲಂಕಾ ಒನ್ಡೆ ಸರಣಿಯಲ್ಲಿ ಅಟ್ಟರ್​ ಫ್ಲಾಪ್​ ಶೋ ನೀಡಿದ ಕೊಹ್ಲಿಗೆ ಸೆಪ್ಟೆಂಬರ್​​ 19 ರಿಂದ ಆರಂಭಗೊಳ್ಳುವ ಬಾಂಗ್ಲಾ ಟೆಸ್ಟ್​ ಸರಣಿ ಮಹತ್ವ ಪಡೆದುಕೊಂಡಿದೆ. 9 ತಿಂಗಳ ಬಳಿಕ ರೆಡ್​​ ಬಾಲ್​ ಕ್ರಿಕೆಟ್ ಆಡಲಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ್ರು. ಅದೇ ರಿದಮ್​​​​​​​​ ಬಾಂಗ್ಲಾ ವಿರುದ್ಧ ಕಂಟಿನ್ಯೂ ಮಾಡಬೇಕಾದ ಅಗತ್ಯವಿದೆ. ಒಂದು ವೇಳೆ ಸೆಂಚುರಿ ಮಾಸ್ಟರ್​​​​ ಇಲ್ಲಿಯೂ ರನ್ ಬರ ಎದುರಿಸಿದ್ರೆ ಸಂಕಷ್ಟ ತಪ್ಪಿದ್ದಲ್ಲ. ಯಾಕಂದ್ರೆ ಯಂಗ್​ಸ್ಟರ್ಸ್​ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಯಾವ ಕ್ಷಣದಲ್ಲಿ ಬೇಕಾದ್ರೂ, ಸ್ಥಾನವನ್ನ ಕಬ್ಜಾ ಮಾಡಿಕೊಳ್ಳಬಹುದು. ಹೀಗಾಗಿ ವಿರಾಟ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ರನ್​ ಪ್ರಹಾರ ನಡೆಸಬೇಕಿದೆ. ಇಲ್ಲವಾದ್ರೆ ಕುತ್ತು ತಪ್ಪಿದ್ದಲ್ಲ.
ಇದನ್ನೂ ಓದಿ:ಮಹಿಳೆಯ ನಗ್ನ ಫೋಟೋ ಬರುತ್ತೆ.. ಆಮೇಲೆ ನಿಮ್ಮ ಬ್ರೈನ್ ಕೂಡ ಹೈಜಾಕ್ ಆಗುತ್ತೆ.. ಹುಷಾರಾಗಿರಿ!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್