/newsfirstlive-kannada/media/post_attachments/wp-content/uploads/2025/07/abhimanyu_easwaran-1.jpg)
ಟೀಮ್ ಇಂಡಿಯಾ ಪರ ಆಡಬೇಕಂದ್ರೆ, ಟ್ಯಾಲೆಂಟ್ ಜೊತೆಗೆ ಅದೃಷ್ಟವೂ ಇರಬೇಕು ಅನ್ಸುತ್ತೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಭಿಮನ್ಯು ಈಶ್ವರ್. ಈತನಲ್ಲಿ ಟ್ಯಾಲೆಂಟ್ ಇದೆ. ಆದ್ರೆ, ಅದೃಷ್ಟ ಮಾತ್ರ ಇಲ್ಲ. ಇದೆಲ್ಲಾ ಯಾಕ್ ಹೇಳ್ತಿದ್ದೀವಿ ಅಂತೀರಾ? ಇಲ್ಲಿದೆ ಡಿಟೇಲ್ಸ್.
ಇಂಡೋ ಇಂಗ್ಲೆಂಡ್ ಮ್ಯಾಂಚೆಸ್ಟರ್ ಟೆಸ್ಟ್ ಬರದಿಂದ ಸಾಗಿದೆ. ಪಂತ್ ಇಂಜುರಿ ನಡುವೆ ಆಡ್ತಾರಾ, ಇಲ್ವಾ?. ಟೀಮ್ ಇಂಡಿಯಾ ಸರಣಿ ಸಮಬಲ ಮಾಡಿಕೊಳ್ಳುತ್ತಾ ಇಲ್ವಾ ಎಂಬ ಪ್ರಶ್ನೆಗಳ ನಡುವೆ ದೇಶಿ ಕ್ರಿಕೆಟ್ ಹೀರೋ, ಬೆಂಗಾಗ್ ಬ್ಯಾಟರ್ ಅಭಿಮನ್ಯು ಈಶ್ವರನ್, ಭಾರತೀಯ ಕ್ರಿಕೆಟ್‌ನ ಹಾಟ್ ಟಾಫಿಕ್ ಆಗಿದ್ದಾರೆ. ಇದಕ್ಕೆ ಕಾರಣ ಅಭಿಮನ್ಯು ಈಶ್ವರನ್ಗೆ ಆಗ್ತಿರುವ ಅನ್ಯಾಯ.
2022ರಿಂದ ಸ್ಥಾನ.. ಪ್ಲೇಯಿಂಗ್-XIನಲ್ಲಿ ಇಲ್ಲ ಚಾನ್ಸ್!
ಅಭಿಮನ್ಯು ಈಶ್ವರನ್.. ಕಳೆದ ಮೂರು ವರ್ಷಗಳಿಂದ ಟೀಮ್ ಇಂಡಿಯಾದ ವಾಟರ್ ಭಾಯ್. ಗೆಸ್ಟ್ ಅಪಿರಿಯನ್ಸ್ ಪ್ಲೇಯರ್. 2021ರಲ್ಲಿ ಹೆಚ್ಚುವರಿ ಆಟಗಾರನಾಗಿ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಾನ ಪಡೆದಿದ್ದ ಈಶ್ವರನ್, 2022ರ ಬಾಂಗ್ಲಾ ಪ್ರವಾಸದಿಂದ ಬಹುಪಾಲು ಟೆಸ್ಟ್ ಸರಣಿಗಳಲ್ಲಿ ಸ್ಥಾನ ಪಡೆದುಕೊಳ್ತಿದ್ದಾರೆ. ಆದ್ರೆ, ಸ್ಥಾನ ಪಡೆದ್ರೂ, ಈತ ಬೆಂಚ್ ಬಿಸಿ ಮಾಡಿದ್ದು, ಬಿಟ್ರೆ ಮತ್ತೇನು ಇಲ್ಲ.
2022ರಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾ ಎಂಟ್ರಿ ನೀಡಿದ ಅಭಿಮನ್ಯು, ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲೇ ಡೆಬ್ಯು ಮಾಡೋ ನಿರೀಕ್ಷೆ ಇತ್ತು. ಆದ್ರೆ, ಅದು ಹುಸಿಯಾಯ್ತು. ಆಸಿಸ್ ಟೂರ್ ಆಯ್ತು. ಅಷ್ಟೇ ಯಾಕೆ. ಪ್ರಸಕ್ತ ಇಂಗ್ಲೆಂಡ್ ಸರಣಿಯಲ್ಲಾದರು ಸಿಕ್ಕೇ ಸಿಗುತ್ತೆ ಅನ್ನೋ ಕನಸಿತ್ತು. ಆದ್ರೆ, ಸೀನಿಯರ್ಗಳ ಅಲಭ್ಯತೆಯಲ್ಲೀ ಪ್ಲೇಯಿಂಗ್ ಇಲೆವೆನ್ ಎಂಬ ಚಕ್ರವ್ಯೂಹ ಬೇಧಿಸಲು ಸಾಧ್ಯವಾಗುತ್ತಿಲ್ಲ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅಭಿಮನ್ಯು
ಇದುವರೆಗೆ 103 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅಭಿಮನ್ಯು ಈಶ್ವರನ್, 48.70 ಸರಾಸರಿಯಲ್ಲಿ 7841 ರನ್ ಗಳಿಸಿದ್ದಾರೆ. ಈ ಪೈಕಿ 27 ಶತಕ, 31 ಅರ್ಧ ಶತಕ ದಾಖಲಿಸಿದ್ದಾರೆ. ಇದು ಅಭಿಮನ್ಯು ಈಶ್ವರನ್ಗೆ ಆಗ್ತಿರುವ ಅನ್ಯಾಯವಲ್ದೇ ಮತ್ತೇನು?. ಟ್ಯಾಲೆಂಟ್ ಇದ್ದರೂ, ಬೆಂಚ್ಗೆ ಕಾಯ್ತಿರುವ ನತದೃಷ್ಟ ಆಟಗಾರನಲ್ದೇ ಇನ್ನೇನು.?
ದೇಶಿ ಕ್ರಿಕೆಟ್ನಲ್ಲಿ ಟನ್ ಗಟ್ಟಲೇ ರನ್.. ಯಾಕಿಲ್ಲ ಸ್ಥಾನ..?
ದೇಶಿ ಕ್ರಿಕೆಟ್ನಲ್ಲಿ ಅಭಿಮನ್ಯು ಈಶ್ವರನ್, ಟನ್ ಗಟ್ಟಲೇ ರನ್ ಗಳಿಸಿದ್ದಾರೆ. 103 ಪಂದ್ಯಗಳನ್ನಾಡಿರುವ ಅನುಭವ ಹೊಂದಿದ್ದಾರೆ. ಹೀಗಾದ್ರೂ ಟೀಮ್ ಇಂಡಿಯಾ ಡೆಬ್ಯು ಭಾಗ್ಯ ಸಿಕ್ಕಿಲ್ಲ. ಇದು ಸಹಜವಾಗೇ ಮತ್ತೇನು ಮಾಡಬೇಕು ಎಂಬ ಪ್ರಶ್ನೆ ಹುಟ್ಟಿಹಾಕುತ್ತೆ. ಇಂಥಹ ಪ್ರಶ್ನೆಯ ಹುಟ್ಟಿಗೆ ಮತ್ತೊಂದು ಕಾರಣವೂ ಇದೆ. ಅದೇ ಇತರ ಆಟಗಾರರ ಡೆಬ್ಯು.
ಅಭಿಮನ್ಯು ಈಶ್ವರನ್ ಬಳಿಕ ಬಂದವರಿಗೆಲ್ಲ ಡೆಬ್ಯು ಭಾಗ್ಯ..!
2022ರಿಂದ ಅಭಿಮನ್ಯು ಈಶ್ವರನ್ ನಿರಂತರ ತಂಡದಲ್ಲಿದ್ದಾರೆ. ಆದ್ರೆ, ಅಭಿಮನ್ಯು ಈಶ್ವರನ್ಗೆ ಸಿಗದ ಡೆಬ್ಯು ಭಾಗ್ಯ, ಈಶ್ವರನ್ ಆಗಮನದ ಬಳಿಕ ಬಂದ ಇತರರಿಗೆ ಸಿಕ್ಕಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 15 ಮಂದಿ ಪದಾರ್ಪಣೆ ಮಾಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಈ 15 ಮಂದಿಯಲ್ಲಿ 10 ಆಟಗಾರರು ಬ್ಯಾಟ್ಸ್ಮನ್ಗಳೇ ಆಗಿದ್ದಾರೆ.
ಇದನ್ನೂ ಓದಿ:ಕೊಹ್ಲಿಯಂತೆ ಕಠಿಣ ಡಯಟ್.. ಕೇವಲ 2 ತಿಂಗಳು, 17 Kg ತೂಕ ಇಳಿಸಿದ ಸರ್ಫರಾಜ್ ಖಾನ್!
ಈಶ್ವರನ್ ಬಳಿಕ ಬಂದವರಿಗೆ ಡೆಬ್ಯು ಭಾಗ್ಯ..!
- ಕೆ.ಎಸ್.ಭರತ್, ಇಶಾನ್ ಕಿಶನ್, ರಜತ್ ಪಾಟಿದಾರ್
- ಸೂರ್ಯಕುಮಾರ್, ಯಶಸ್ವಿ ಜೈಸ್ವಾಲ್, ಸರ್ಫರಾಜ್
- ಧೃವ್ ಜುರೇಲ್, ದೇವದತ್ ಪಡಿಕ್ಕಲ್, ನಿತಿಶ್ ರೆಡ್ಡಿ
- ಸಾಯಿ ಸುರ್ದಶನ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ
- ಆಕಾಶ್ ದೀಪ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್
ಇವ್ರೇ ಯಾಕೆ.? 8 ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡಿದ್ದ ಕರುಣ್ ನಾಯರ್ ಕನಸು ಸಹ ನನಸಾಗಿದೆ. ಆದ್ರೆ, ವಿರಾಟ್ ಕೊಹ್ಲಿಯ ನಾಯಕತ್ವದಿಂದಲೂ ತಂಡದಲ್ಲಿದ್ದರು. ಟೀಮ್ ಇಂಡಿಯಾಗೆ ಡೆಬ್ಯು ಮಾಡುವ ಭಾಗ್ಯ ಸಿಗದಿರುವುದು ನಿಜಕ್ಕೂ ದುರಾದೃಷ್ಟವಲ್ಲದೇ ಮತ್ತೇನು? ಇದು ಆಟಗಾರನ ಆತ್ಮವಿಶ್ವಾಸ ಕುಂದಿಸುವ ಕೆಲಸವಲ್ದೇ ಇನ್ನೇನು?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ