newsfirstkannada.com

ದುಬಾರಿ ಜೀವನ.. ಖಾಸಗಿ ಜೆಟ್​ಗಳನ್ನು ಹೊಂದಿರುವ ಭಾರತೀಯ ಕ್ರಿಕೆಟಿಗರಿವರು!

Share :

Published September 5, 2024 at 7:38am

Update September 5, 2024 at 8:40am

    ಐಷಾರಾಮಿ ಜೀವನ ನಡೆಸುತ್ತಿರುವ ಕ್ರಿಕೆಟಿಗರಿವರು

    ಜಾಹೀರಾತುಗಳ ಮೂಲಕ ಸಾಕಷ್ಟು ಹಣ ಗಳಿಸುತ್ತಾರೆ ಇವರು

    ಕೊಹ್ಲಿ ಮಾತ್ರವಲ್ಲ.. ಇವರ ಬಳಿಯೂ ಇದೆ ಪ್ರೈವೇಟ್​ ಜೆಟ್​

ಟೀಂ ಇಂಡಿಯಾದ ಅನೇಕ ಸ್ಟಾರ್​ ಕ್ರಿಕೆಟಿಗರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಕೆಲವರ ಬಳಿ ದುಬಾರಿ ಬಂಗಲೆ, ದುಬಾರಿ ಕಾರುಗಳಿವೆ. ಇನ್ನು ಕೆಲವರು ಖಾಸಗಿ ಜೆಟ್​ಗಳನ್ನು ಹೊಂದಿದ್ದಾರೆ. ಲೀಗ್​ ಕ್ರಿಕೆಟ್​​, ಬ್ರ್ಯಾಂಡ್​​ ಎಂಡಾರ್ಸ್​​ಮೆಂಟ್​​ ಮತ್ತು ಜಾಹೀರಾತುಗಳ ಮೂಲಕ ಸಾಕಷ್ಟು ಹಣವನ್ನು ಗಳಿಸುವ ಇವರುಗಳು ಪ್ರೈವೇಟ್​​ ಜೆಟ್​​ ಹೊಂದಿದ್ದಾರೆ ಎಂದರೆ ಅಚ್ಚರಿ ಪಡಬೇಕಾಗಿಲ್ಲ.

ಕ್ರಿಕೆಟ್​​ನಿಂದ ಸಾಕಷ್ಟು ಹಣ ಹರಿದುಬರುತ್ತದೆ. ಅದರಲ್ಲೂ ಜಾಹೀರಾತು ಸೇರಿ ಕೆಲವು ವಸ್ತುಗಳಿಗೆ ಬ್ರ್ಯಾಂಡ್​ ಅಂಬಾಸಿಡರ್​ ಆಗುವ ಮೂಲಕ ಐಷಾರಾಮಿ ಜೀವನದತ್ತ ತಿರುಗುತ್ತಾರೆ. ಅಂದಹಾಗೆಯೇ ಟೀಂ ಇಂಡಿಯಾದ ಯಾವೆಲ್ಲಾ ಕ್ರಿಕೆಟಿಗರ ಬಳಿ ಖಾಸಗಿ ಜೆಟ್​​ ಇದೆ ಎಂದು ನೋಡೋಣ.

ಕಪಿಲ್ ದೇವ್

ಭಾರತದ ತಂಡದ ಮಾಜಿ ನಾಯಕ, ಆಲ್​ರೌಂಡರ್​ ಕಪಿಲ್ ದೇವ್ ಬಳಿ ಖಾಸಗಿ ಜೆಟ್​ ಇದೆ. ಇವರ ನಾಯಕತ್ವದಲ್ಲಿ ಭಾರತವು 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು. ಕಪಿಲ್ ದೇವ್ ಟೀಂ ಇಂಡಿಯಾದಲ್ಲಿ ಖಾಸಗಿ ಜೆಟ್ ಖರೀದಿಸಿದ ಮೊದಲ ಕ್ರಿಕೆಟಿಗರಾದರು. 110 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್​ ಇವರ ಬಳಿಯಿದೆ.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಇವರನ್ನು ಕ್ರಿಕೆಟ್ ದೇವರು ಎಂದು ಕರೆಯುತ್ತಾರೆ. ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಸಚಿನ್​ ಇದ್ದು, ಇವರು ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ. ಲೆಜೆಂಡರಿ ಕ್ರಿಕೆಟಿಗನ ಬಳಿ 250 ಕೋಟಿ ರೂಪಾಯಿ ಮೌಲ್ಯದ ಜೆಟ್ ಇದೆ.

ಎಂಎಸ್ ಧೋನಿ

ಎಂಎಸ್ ಧೋನಿ ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ. ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ. ಮಾತ್ರವಲ್ಲದೆ ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರು. ಎಂಎಸ್ ಧೋನಿ ಕೂಡ ಖಾಸಗಿ ಜೆಟ್ ಮಾಲೀಕರಾಗಿದ್ದು, ಇವರ ಬಳಿ 110 ಕೋಟಿ ಮೌಲ್ಯದ ಜೆಟ್​ ಇದೆ.

ವಿರಾಟ್ ಕೊಹ್ಲಿ

ರನ್ ಮೆಷಿನ್ ಎಂದೇ ಖ್ಯಾತಿ ಪಡೆದ ವಿರಾಟ್ ಕೊಹ್ಲಿ ಬಳಿಯೂ ದುಬಾರಿ ಕಾರು ಮತ್ತು ಖಾಸಗಿ ಜೆಟ್ ಇದೆ. 120 ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಖಾಸಗಿ ಜೆಟ್​​ ಅನ್ನು ವಿರಾಟ್​ ಕೊಹ್ಲಿ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಕೂಡ ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಇವರ ಬಳಿ 40 ಕೋಟಿ ಮೌಲ್ಯದ ಖಾಸಗಿ ಜೆಟ್ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಬಾರಿ ಜೀವನ.. ಖಾಸಗಿ ಜೆಟ್​ಗಳನ್ನು ಹೊಂದಿರುವ ಭಾರತೀಯ ಕ್ರಿಕೆಟಿಗರಿವರು!

https://newsfirstlive.com/wp-content/uploads/2024/09/Private-jet.jpg

Load More