ಪಾಕ್​ನ 500 ಡ್ರೋಣ್ ಹೊಡೆದುರುಳಿಸಿದ್ದು ಹೇಗೆ..? ಭಾರತದ ರಕ್ಷಣಾ ಮೂಲಗಳಿಂದ ವಿಡಿಯೋ ರಿಲೀಸ್

author-image
Bheemappa
Updated On
ಪಾಕ್​ನ 500 ಡ್ರೋಣ್ ಹೊಡೆದುರುಳಿಸಿದ್ದು ಹೇಗೆ..? ಭಾರತದ ರಕ್ಷಣಾ ಮೂಲಗಳಿಂದ ವಿಡಿಯೋ ರಿಲೀಸ್
Advertisment
  • ಪಾಕಿಸ್ತಾನದ ಎಲ್ಲ ಪ್ಲಾನ್​ಗಳನ್ನು ಉಲ್ಟಾ ಮಾಡಿರುವ ಭಾರತೀಯ ಸೇನೆ
  • 50 ಡ್ರೋಣ್​ಗಳನ್ನು ವಾಯು ರಕ್ಷಣಾ ಬಂದೂಕುಗಳಿಂದ ನಾಶ ಮಾಡಿದೆ
  • ಭಾರತದ ಎಷ್ಟು ಪ್ರದೇಶಗಳ ಮೇಲೆ ಪಾಕಿಸ್ತಾನ ವಿಫಲ ದಾಳಿ ಮಾಡಿದೆ?

ಪಾಕಿಸ್ತಾನದ 500 ಡ್ರೋಣ್​ಗಳನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು (Indian air defence systems) ಹೇಗೆ ತಡೆದವು ಎನ್ನುವುದರ ವಿಡಿಯೋವನ್ನು ಭಾರತದ ರಕ್ಷಣಾ ಮೂಲಗಳು ಬಿಡುಗಡೆ ಮಾಡಿವೆ.

ಭಾರತದ 24 ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ 500 ಡ್ರೋಣ್​ಗಳನ್ನು ಉಡಾವಣೆ ಮಾಡಿತ್ತು. ಆದರೆ ಇದನ್ನು ವಿಫಲ ಮಾಡಿರುವ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಆಕಾಶದಲ್ಲೇ ಹೊಡೆದುರುಳಿಸಿವೆ. ಭಾರತದ ಲಡಾಖ್‌ನ ಸಿಯಾಚಿನ್ ಬೇಸ್ ಕ್ಯಾಂಪ್‌ನಿಂದ ಗುಜರಾತ್‌ನ ಕಚ್ ಪ್ರದೇಶದವರೆಗೆ ಒಟ್ಟು 24 ಸ್ಥಳಗಳ ಮೇಲೆ ದಾಳಿಗೆ ಯತ್ನಿಸಿತ್ತು. ಆದರೆ ಭಾರತೀಯ ಸೇನೆ ಎಲ್ಲ ಡ್ರೋನ್​ಗಳನ್ನು ನಾಶ ಮಾಡಿದೆ. ಈ ಬಗ್ಗೆ ಇದೀಗ ವಿಡಿಯೋ ಕೂಡ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:IPL ಪಂದ್ಯಗಳು 1 ವಾರ ಮುಂದೂಡಿಕೆ.. ಪ್ಲೇ ಆಫ್ ​ರೇಸ್​ನಲ್ಲಿ ಯಾವ್ಯಾವ ಟೀಮ್ ಇವೆ?

publive-image

ವಾಯು ರಕ್ಷಣಾ ಬಂದೂಕುಗಳಿಂದ 50 ಡ್ರೋಣ್​​​ಗಳನ್ನು ನಾಶ ಮಾಡಿದ್ರೆ, 20 ಡ್ರೋಣ್​ಗಳನ್ನು ಗುಂಡಿನ ದಾಳಿಯ ಮೂಲಕ ಹೊಡೆದುರುಳಿಸಲಾಗಿದೆ. ಹೆಚ್ಚಿನ ಡ್ರೋಣ್​​ಗಳು ನಿರಾಯುಧ ಆಗಿದ್ದವು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ಡ್ರೋಣ್​ಗಳಲ್ಲಿ ಕ್ಯಾಮೆರಾಗಳು ಕಂಡು ಬಂದಿದ್ದು ಬಹುಶಃ ಇವು ಇಲ್ಲಿನ ನೈಜ ದೃಶ್ಯಗಳನ್ನು ಸೆರೆ ಹಿಡಿದು ವಿರೋಧಿ ರಾಷ್ಟ್ರಕ್ಕೆ ಪ್ರಸಾರ ಮಾಡುವ ತಂತ್ರಜ್ಞಾನ ಹೊಂದಿದ್ದವು ಎಂದು ಹೇಳಲಾಗಿದೆ.

ಮೇ 8 ಹಾಗೂ 9ರ ಮಧ್ಯರಾತ್ರಿ ಭಾರತದ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋಣ್​ಗಳು ಮತ್ತು ಇತರ ಯುದ್ಧ ಸಾಮಗ್ರಿಗಳನ್ನು ಬಳಸಿ ಪಾಕಿಸ್ತಾನ ದಾಳಿ ಮಾಡಲು ಯೋಜಿಸಿತ್ತು. ಆದರೆ ಪಾಕಿಸ್ತಾನದ ಪ್ಲಾನ್​ಗಳನ್ನೆಲ್ಲಾ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿವೆ ಎಂದು ಭಾರತೀಯ ಸೇನೆ ಹೇಳಿದೆ.


">May 9, 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment