newsfirstkannada.com

ವಿಶ್ವದ ಅತ್ಯಂತ ದುಬಾರಿ ಮನೆ ಖರೀದಿಸಿದ ಭಾರತದ ಉದ್ಯಮಿ; ಎಷ್ಟು ಸಾವಿರ ಕೋಟಿ ಗೊತ್ತಾ..?

Share :

Published June 28, 2023 at 9:31pm

    ವಿಶ್ವದ ಅತ್ಯಂತ ದುಬಾರಿ ಮನೆ ಖರೀದಿಸಿದ ಭಾರತದ ಉದ್ಯಮಿ

    ಖರೀದಿಸಿದ್ದು ಭಾರತ ಮೂಲದ ಬಿಲೇನಿಯರ್​​ ಪಂಕಜ್ ಓಸ್ವಾಲ್!

    ಐಷಾರಾಮಿ ವಿಲ್ಲಾ ಬೆಲೆ ಬರೋಬ್ಬರಿ ಎಷ್ಟು ಸಾವಿರ ಕೋಟಿ ಗೊತ್ತಾ?

ಭಾರತ ಮೂಲದ ಬಿಲೇನಿಯರ್​​ ಪಂಕಜ್ ಓಸ್ವಾಲ್ ಮತ್ತವರ ಪತ್ನಿ ರಾಧಿಕಾ ಓಸ್ವಾಲ್​​ ವಿಶ್ವದ ಅತ್ಯಂತ ದುಬಾರಿ ಮನೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಸ್ವಿಜರ್​ಲ್ಯಾಂಡ್​​ನಲ್ಲಿರೋ ಸ್ವಿಸ್ ಎಂಬ ಹಳ್ಳಿಯೊಂದರಲ್ಲಿ ವಿಲ್ಲಾ ʻವಾರಿʼ ಖರೀದಿ ಮಾಡಲಾಗಿದೆ. ಇದು ಭಾರೀ ಹಿಮದಿಂದ ಕೂಡಿದ ಆಲ್​​ಪ್ಸ್​ ಎಂಬ ಶಿಖರದ ಸಮೀಪ ಇದೆ. ಇದು 4.3 ಲಕ್ಷ ಚದರ ಅಡಿ ಗ್ರಾಮೀಣ ಪ್ರದೇಶ ಆಗಿದೆ.

ಓಸ್ವಾಲ್ ದಂಪತಿ ಖರೀದಿಸಿದ ಈ ಐಷಾರಾಮಿ ವಿಲ್ಲಾ ಬೆಲೆ ಬರೋಬ್ಬರಿ 1,649 ಕೋಟಿ ರೂ. ಅಂದರೆ 200 ಬಿಲಿಯನ್​​​ ಡಾಲರ್ಸ್​​. ಇದು ವಿಶ್ವದ ಅಗ್ರ 10 ಅತ್ಯಂತ ದುಬಾರಿ ಮನೆಗಳಲ್ಲಿ ಒಂದು ಎಂಬುದು ವಿಶೇಷ. ಗ್ರೀಕ್ ಉದ್ಯಮಿ ಬಳಿಯಿದ್ದ ಈ ವಿಲ್ಲಾ ಖರೀದಿಸಿದ ಓಸ್ವಾಲ್ ಕುಟುಂಬ ರಿನೋವೇಟ್​ ಮಾಡಿಸಿದೆ. ಜಗತ್ತಿನ ಅತ್ಯಂತ ಫೇಮಸ್​ ಡಿಸೈನರ್​ ಎಂದು ಖ್ಯಾತಿ ಹೊಂದಿರೋ ಜೆಫ್ರಿ ವಿಲ್ಕೆಸ್ ಈ ಮನೆ ನವೀಕರಣ ಮಾಡಿದ್ದಾರೆ.

ಈ ಸಂಬಂಧ ತನ್ನ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಹಾಕಿರುವ ಓಸ್ವಾಲ್ ದಂಪತಿ ಮಗಳು ರಿದಿ, ತಮ್ಮ ಭವ್ಯ ವಿಲ್ಲಾದ ಪೋಟೋಗಳನ್ನು ಶೇರ್​ ಮಾಡಿದ್ದಾರೆ. ಕೊನೆಗೂ ಮೂರು ವರ್ಷಗಳ ಬಳಿಕ ನಮ್ಮ ವಿಲ್ಲಾಗೆ ಶಿಫ್ಟ್​ ಆಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by RIDI (@realridi)

ಬಂಗಲೆ ವಿಶೇಷತೆ ಏನು..?

ವಿಲ್ಲಾ ʻವಾರಿʼ ಗೋಡೆ ಜೈಪುರದ ಅಂಬರ್ ಅರಮನೆ ಸ್ಫೂರ್ತಿಯಿಂದ ನಿರ್ಮಾಣ ಮಾಡಲಾಗಿದೆ. ಜತೆಗೆ ವಿಲ್ಲಾದಲ್ಲಿ ಖಾಸಗಿ ಜಿಮ್, ಚಿನ್ನದ ಲೇಪಿತ ಸ್ಪಾ, ವೆಲ್ನೆಸ್ ವಿಂಗ್, ದೊಡ್ಡ ಫ್ರೆಂಚ್ ಕಿಟಕಿಗಳು, ದೊಡ್ಡ ಪಾರ್ಕ್​ಗಳು ಇದೆ. ಇದು ನೋಡಲು ಸ್ವರ್ಗದಂತೆ ಭಾಸವಾಗುತ್ತದೆ.

ಯಾರು ಈ ಪಂಕಜ್ ಓಸ್ವಾಲ್..?

ಪಂಕಜ್ ಓಸ್ವಾಲ್ ಭಾರತದ ಖ್ಯಾತ ಉದ್ಯಮಿ. ಇವರು ಓಸ್ವಾಲ್ ಗ್ರೂಪ್ ಗ್ಲೋಬಲ್ ಕಂಪನಿ ಮಾಲೀಕರು. ಈ ಕಂಪನಿ ಪೆಟ್ರೋ ಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರ, ಗಣಿಗಾರಿಕೆ ವ್ಯವಹಾರ ಮಾಡಲಿದೆ. ಪಂಕಜ್ ಓಸ್ವಾಲ್ ರಾಧಿಕಾ ಅವರನ್ನು ಮದುವೆ ಆಗಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವದ ಅತ್ಯಂತ ದುಬಾರಿ ಮನೆ ಖರೀದಿಸಿದ ಭಾರತದ ಉದ್ಯಮಿ; ಎಷ್ಟು ಸಾವಿರ ಕೋಟಿ ಗೊತ್ತಾ..?

https://newsfirstlive.com/wp-content/uploads/2023/06/Bunglow.jpg

Load More