ಆಪರೇಷನ್‌ ಸಿಂಧೂರ: ಭಾರತದ ಫೈಟರ್‌ ಜೆಟ್‌ಗಳಿಗೆ ಹಾನಿ! ಏನಿದು ಟ್ಯಾಕ್ಟಿಕಲ್ ಮಿಸ್ಟೇಕ್‌? VIDEO

author-image
admin
ಆಪರೇಷನ್‌ ಸಿಂಧೂರ: ಭಾರತದ ಫೈಟರ್‌ ಜೆಟ್‌ಗಳಿಗೆ ಹಾನಿ! ಏನಿದು ಟ್ಯಾಕ್ಟಿಕಲ್ ಮಿಸ್ಟೇಕ್‌? VIDEO
Advertisment
  • ರಫೇಲ್‌ ಜೆಟ್‌ಗೆ ಉಗ್ರರ ನೆಲೆ ಮೇಲೆ ಬಾಂಬಿಂಗ್‌ಗೆ ಮಾತ್ರ ಕ್ಲಿಯರೆನ್ಸ್‌
  • ಪಾಕ್ ಕಿಲ್‌ ಚೈನ್‌ ಸಿಸ್ಟಮ್‌ ಮೂಲಕ ಐಎಎಫ್‌ ಜೆಟ್‌ಗಳ ಟಾರ್ಗೆಟ್‌
  • ಆಪರೇಷನ್‌ ಸಿಂಧೂರ್‌ ವೇಳೆ ಸಂಯಮ ಕಾಯ್ದುಕೊಂಡಿದ್ದ ಭಾರತ

ನವದೆಹಲಿ: ಆಪರೇಷನ್‌ ಸಿಂಧೂರದಲ್ಲಿ ಭಾರತೀಯ ಸೇನೆ ಭುಜಬಲದ ಪರಾಕ್ರಮ ವಿಶ್ವಕ್ಕೆ ತಿಳಿದಿದೆ. ಶತ್ರುರಾಷ್ಟ್ರಗಳಿಗೂ ಎಚ್ಚರಿಕೆಯ ಕರೆಗಂಟೆ ರಿಂಗಣಿಸಿದೆ. ಪಾಕ್‌ ಅಂತೂ ಬಾಲ ಮುದುರಿಕೊಂಡು ಬಿಲ ಸೇರಿದೆ. ಎದುರಾಳಿಗಳ ವಿರುದ್ಧ ಹೋರಾಟದಲ್ಲಿ ಒಂದೆರಡು ಪೆಟ್ಟು ಬೀಳೋದು ಸಹಜ. ಅದೇ ರೀತಿ ಭಾರತೀಯ ಸೇನೆಗೂ ಕೊಂಚ ನಷ್ಟವಾಗಿರೋ ಸಂಗತಿ ಬೆಳಕಿಗೆ ಬಂದಿದೆ. ಇದನ್ನೇ ಹಿಡಿದು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಾತಿನ ಸಮರ ಸಾರಿವೆ.

ಯುದ್ಧದಲ್ಲಿ ಯಾರು ಮೊದಲು ಹೊಡೆದ್ರು ಅನ್ನೋದು ಲೆಕ್ಕಕ್ಕೆ ಬರಲ್ಲ. ಯಾರು ಮೊದಲು ಕೆಳಗೆ ಬಿದ್ರು. ಯಾರ ಕಡೆ ಹೆಚ್ಚು ಧ್ವಂಸ ಆಯ್ತು ಅನ್ನೊದೇ ಲೆಕ್ಕಕ್ಕೆ ಬರೋದು. ಇದೀಗ ಪಾಕಿಸ್ತಾನಕ್ಕೆ ಭಾರತ ಕೊಟ್ಟಿರೋ ಪೆಟ್ಟು ಕೊನೆ ತನಕ ಇದ್ದೇ ಇರುತ್ತೆ. ಆಪರೇಷನ್ ಸಿಂಧೂರ ಅಂದ್ರೆ ಪಾಕ್‌ ಕನಸಲ್ಲೂ ಬೆಚ್ಚಿ ಬೀಳ್ತಿದೆ. ಇದರ ಮಧ್ಯೆ ಭಾರತೀಯ ಸೇನೆಗೂ ಸಣ್ಣ ಪುಟ್ಟ ನಷ್ಟ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.


">May 31, 2025

ಏನಿದು ಟಾಕ್ಟಿಕಲ್ ಮಿಸ್ಟೇಕ್‌?
ಆಪರೇಷನ್‌ ಸಿಂಧೂರ್‌ ವೇಳೆ ಸಂಯಮ ಕಾಯ್ದುಕೊಂಡಿದ್ದ ಭಾರತ
ಪಾಕ್‌ ಸೇನಾ ವಿಮಾನ ಅಥವಾ ಸೇನಾ ನೆಲೆ ಟಾರ್ಗೆಟ್‌ ಮಾಡಿರಲಿಲ್ಲ
ಭಾರತವು ಜಾಗತಿಕ ಮಟ್ಟದಲ್ಲಿ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿತ್ತು
ರಫೇಲ್‌ ಜೆಟ್‌ಗೆ ಉಗ್ರರ ನೆಲೆ ಮೇಲೆ ಬಾಂಬಿಂಗ್‌ಗೆ ಮಾತ್ರ ಕ್ಲಿಯರೆನ್ಸ್‌
ಈ ಲಾಭ ಪಡೆದು ಪಾಕಿಸ್ತಾನ ಸೇನೆಯಿಂದ ದಾಳಿ.. ಜೆಟ್‌ಗಳಿಗೆ ಹಾನಿ
ಗಡಿಯ ಸಮೀಪದಿಂದ ದಾಳಿಗೆ ಮುಂದಾಗಿದ್ದು ಟಾಕ್ಟಿಕಲ್‌ ಮಿಸ್ಟೇಕ್‌
ಪಾಕ್ ಕಿಲ್‌ ಚೈನ್‌ ಸಿಸ್ಟಮ್‌ ಮೂಲಕ ಐಎಎಫ್‌ ಜೆಟ್‌ಗಳ ಟಾರ್ಗೆಟ್‌
ರಾಡಾರ್‌ ಲಾಕಿಂಗ್‌, ಜೆಟ್‌ನಿಂದ ಫೈರಿಂಗ್‌, ಏರ್‌ಬಾರ್ನ್‌ ಮಿಸೈಲ್‌ ಗೈಡಿಂಗ್‌
ಆರಂಭಿಕ ಹಾನಿ ಬಳಿಕ ಎಚ್ಚೆತ್ತುಕೊಂಡು ಪ್ರತಿದಾಳಿ ನಡೆಸಿದ್ದ IAF

‘ಆಪರೇಷನ್‌ ಸಿಂಧೂರ’ ವೇಳೆ ಭಾರತದ ಜೆಟ್‌ಗಳಿಗೆ ಹಾನಿ
ಟಾಕ್ಟಿಕಲ್‌ ಮಿಸ್ಟೇಕ್‌ನಿಂದ ಕೆಲ ಹಾನಿ ಅಂತ CDS ಮಾಹಿತಿ
ಎದುರಾಳಿ ಜೊತೆ ಗುದ್ದಾಟದಲ್ಲಿ ಒಂದೆರೆಡು ಪೆಟ್ಟು ಬೀಳೋದು ಸಹಜ. ಅದೇ ರೀತಿ ಆಪರೇಷನ್ ಸಿಂಧೂರದ ವೇಳೆ ಭಾರತೀಯ ಸೇನೆಗೂ ಹಾನಿಯಾಗಿದೆ ಎಂಬ ಸಂಗತಿ ಈಗ ತಿಳಿದು ಬಂದಿದೆ. ಒಂದು ರಫೇಲ್‌, ಮಿರಾಜ್ ಫೈಟರ್‌ ಜೆಟ್‌ಗೆ ಹಾನಿಯಾಗಿದೆ ಎನ್ನಲಾಗಿದೆ. ಪಾಕ್ ದಾಳಿಯ ಬಗ್ಗೆ ಭಾರತೀಯ ಸೇನೆ ಮಾಡಿದ ಟ್ಯಾಕ್ಟಿಕಲ್ ಮಿಸ್ಟೇಕ್‌ನಿಂದ ಒಂದಷ್ಟು ಹಾನಿಯಾಗಿದೆ ಎಂದು ಭಾರತೀಯ ಸೇನೆಯ ಚೀಫ್ ಆಫ್ ಡಿಫೆನ್ಸ್​​ ಅನಿಲ್ ಚೌಹಾಣ್‌ ಅವರೇ ಖುದ್ದು ಈ ಮಾಹಿತಿ ನೀಡಿದ್ದಾರೆ. ಜೊತೆಗೆ ಪಾಕ್ ದಾಳಿ ಬಳಿಕ ಭಾರತ ಕೊಟ್ಟಿರೋ ಪೆಟ್ಟು ಎಷ್ಟು ತೀಕ್ಷ್ಣವಾಗಿತ್ತು ಅನ್ನೋದನ್ನೂ ವಿದೇಶಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

publive-image

ಆ್ಯಂಕರ್: ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದಲ್ಲಿ ಪಾಕಿಸ್ತಾನ ಭಾರತದ ಫೈಟರ್ ಜೆಟ್‌ಗಳನ್ನ ಹೊಡೆದುರುಳಿಸಿದ್ಯಾ? ಈ ಬಗ್ಗೆ ನೀವು ಖಚಿತಪಡಿಸುತ್ತೀರಾ?

ಸಿಡಿಎಸ್‌: ನನ್ನ ಪ್ರಕಾರ ಯಾವುದು ಮುಖ್ಯವಾದದ್ದು ಅಂದ್ರೆ ಜೆಟ್‌ ಹೊಡೆದುರುಳಿಸಿದ್ದಾರೆ ಅನ್ನೋದಲ್ಲ. ನಾವು ಹೇಗೆ ಎದುರಿಸಿದ್ವಿ ಅನ್ನೋದು. ಒಳ್ಳೆಯದು ಆಗಿದ್ದೇನೆಂದ್ರೆ ಮೊದಲು ಭಾರತಕ್ಕೆ ಹಾನಿಯಾಗಿತ್ತು. ನಾವು ಯುದ್ಧತಂತ್ರದಲ್ಲಿ ಎಡವಿರೋದನ್ನ ಅರ್ಥ ಮಾಡಿಕೊಂಡ್ವಿ. ಆಮೇಲೆ ಅದನ್ನ ಗುರುತಿಸಿ 2 ದಿನಗಳ ಬಳಿಕ ಕಾರ್ಯಗತಗೊಳಿಸಿದ್ವಿ. ಮತ್ತೆ ನಮ್ಮ ಹಲವು ಜೆಟ್‌ಗಳು ಲಾಂಗ್‌ ರೇಂಜ್‌ ಟಾರ್ಗೆಟ್‌ನ ಮುಟ್ಟಿವೆ.

ಆ್ಯಂಕರ್: ಪಾಕಿಸ್ತಾನ ಹೇಳುತ್ತೆ ಭಾರತದ 6 ಫೈಟರ್‌ ಜೆಟ್‌ಗಳನ್ನ ಹೊಡೆದುರುಳಿಸಿದ್ದೇವೆ ಅಂತ. ಇದು ನಿಜಾನಾ?

ಸಿಡಿಎಸ್‌: ಇದು ನಿಜಕ್ಕೂ ತಪ್ಪು. ಏನಾಗಿದೆ ಅನ್ನೋ ಮಾಹಿತಿಗಿಂತ ನಾವು ಏನು ಮೇಲುಗೈ ಸಾಧಿಸಿದ್ದೇವೆ ಅನ್ನೋದು ಮುಖ್ಯ ಆಗುತ್ತೆ. ಆಮೇಲೆ ನಾವು ಏನು ಮಾಡಿದ್ವಿ ಅನ್ನೋದು ಅತಿ ಮುಖ್ಯ.
- ಅನಿಲ್ ಚೌಹಾಣ್, ಸಿಡಿಎಸ್‌

publive-image

ಮೋದಿಯವರು ಚುನಾವಣಾ ಭಾಷಣ ಮಾಡುವುದು ಬೇಡ
ಸಂಸತ್ ಅಧಿವೇಶನ ಕರೆಯಿರಿ ಎಂದ ಮಲ್ಲಿಕಾರ್ಜುನ ಖರ್ಗೆ!
ಆಪರೇಷನ್ ಸಿಂಧೂರದ ವೇಳೆ ಭಾರತಕ್ಕೂ ಹಾನಿಯಾಗಿರೋದು ದೃಢಪಟ್ಟಿದೆ. ಇದರ ಬೆನ್ನಲ್ಲೇ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಾತಿನ ಸಮರ ಸಾರಿವೆ. ಜೊತೆಗೆ ಸೇನೆಯ ಸಾಧನೆಯನ್ನ ಚುನಾವಣೆಗೆ ಬಳಸುತ್ತಿರೋ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಈ ಬಗ್ಗೆ ಸಂಸತ್ ಅಧಿವೇಶನ ಕರೆಯುವಂತೆ ಆಗ್ರಹಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆೈದಿದ್ದಾರೆ. ಸೇನೆಗೆ ಏನು ನಷ್ಟ ಆಗಿದೆ ಎಂದು CDS ಜನರ ಮುಂದೆ ಹೇಳಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಗುರುದಕ್ಷಿಣೆಯಾಗಿ PoK ಬೇಕು.. ಜಗದ್ಗುರು ರಾಮಭದ್ರಾಚಾರ್ಯರಿಗೆ ಸೇನಾ ಮುಖ್ಯಸ್ಥ ಹೇಳಿದ್ದೇನು? 

ಯುದ್ಧ ಅಂದ್ಮೇಲೆ ಎರಡೂ ಕಡೆ ಹಾನಿಯಾಗೋದು ಕಾಮನ್. ಇದೀಗ ಖುದ್ದು ಸಿಡಿಎಸ್‌ ಭಾರತೀಯ ಸೇನೆಗೂ ಹಾನಿಯಾಗಿದೆ ಅಂತ ವಿದೇಶಿ ಮಾಧ್ಯಮದ ಮುಂದೆ ಹೇಳಿರೋದು ಚರ್ಚೆಗೆ ಗ್ರಾಸವಾಗಿದೆ. ಇದನ್ನೇ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಾತಿನ ಮಿಸೈಲ್‌ ಬಿಡುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment