/newsfirstlive-kannada/media/post_attachments/wp-content/uploads/2024/10/food.jpg)
ನಮ್ಮ ಭಾರತ ಒಂದು ವೈವಿಧ್ಯಮಯ ದೇಶ. ಪ್ರತಿ ಪ್ರದೇಶದಲ್ಲಿಯೂ ಭಾಷೆ, ಸಂಸ್ಕೃತಿ ಆಹಾರ ಪದ್ಧತಿ ಬೇರೆ ಬೇರೆ. ಆಹಾರ ಮತ್ತು ಪಾಕ ವಿಧಾನಗಳಲ್ಲಿ ಭಾರತ ಶ್ರೀಮಂತ ಪರಂಪರೆ ಹೊಂದಿದೆ. ಒಂದೆಡೆ ಭಾರತ ಜಾಗತಿಕ ಸೂಚ್ಯಂಕದಲ್ಲಿ 125 ದೇಶಗಳಲ್ಲಿ 111ನೇ ಸ್ಥಾನದಲ್ಲಿದ್ದರೆ, ಮತ್ತೊಂದೆಡೆ ವಿಶ್ವದಲ್ಲಿಯೇ ನಮ್ಮ ಆಹಾರ ಪದ್ಧತಿ ಸಮರ್ಥ, ಪರಿಸರ ಸ್ನೇಹಿ ಅಂತ ಅಂತಾರಾಷ್ಟ್ರೀಯ ವರದಿಯೊಂದು ಹೇಳಿದೆ.
ಹೌದು, ಲಿವಿಂಗ್ ಪ್ಲಾನೆಟ್ ಎಂಬ ಸಂಸ್ಥೆಯೊಂದು ಜಾಗತಿಕವಾಗಿ ನಡೆಸಿದ ಸಂಶೋಧನೆಯಲ್ಲಿ ಜಗತ್ತಿನ ಎಲ್ಲಾ ದೇಶಗಳಿಗಿಂತ ಭಾರತದ ಆಹಾರ ಸೇವನೆ ಪರಿಸರ ಸ್ನೇಹಿ ಮತ್ತು ಆರೋಗ್ಯಕರ ಆಹಾರ ಅಂತ ಶ್ಲಾಘನೆಗೆ ಒಳಗಾಗಿದೆ. ಭಾರತೀಯರ ಆಹಾರವು ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರಗಳ ಮಿಶ್ರಣದಿಂದ ಕೂಡಿದೆ. ದ್ವಿದಳ ಧಾನ್ಯ, ಗೋಧಿ ಆಧಾರಿತ ರೊಟ್ಟಿ ಇದರ ಜೊತೆಗೆ ಮಾಂಸಾಹಾರವೂ ಸೇರಿ ಆಹಾರ ಪದ್ಧತಿಯು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಸನ್ನಿಧಿ ಮುಂದೆ ರೀಲ್ಸ್.. ಶಾಸಕನ ಸಂಗಾತಿ ಮೇಲೆ ದಾಖಲಾಯ್ತು ಕೇಸ್
ಇತ್ತೀಚೆಗೆ ಭಾರತದ ಎಲ್ಲಾ ವರ್ಗದವರಲ್ಲಿ ಫಾಸ್ಟ್ ಫುಡ್ ಬಳಕೆ ಹೆಚ್ಚುತ್ತಿದೆ. ಆದರೂ ಲಿವಿಂಗ್ ಪ್ಲಾನೆಟ್ ನಡೆಸಿದ ವರದಿಯು ಭಾರತದಲ್ಲಿ ತಿನ್ನುವ ಆಹಾರವು ಜಿ-20 ದೇಶಗಳಿಗಿಂತ ಹೆಚ್ಚು ಪರಿಸರ ಸ್ನೇಹಿ ಮತ್ತು ಸಮರ್ಥ ಅಂತ ಹೇಳಿದೆ. ಅಮೆರಿಕ, ಅರ್ಜೆಂಟಿನಾ ಮತ್ತು ಆಸ್ಟ್ರೇಲಿಯಾದ ಆಹಾರಕ್ಕೆ ಈ ವರದಿಯಲ್ಲಿ ಕಳಪೆ ಸ್ಥಾನ ನೀಡಲಾಗಿದೆ. ಅಮೆರಿಕ, ಅರ್ಜೆಂಟಿನಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಕೊಬ್ಬಿನ ಮತ್ತು ಸಕ್ಕರೆ ಅಂಶವಿರುವ ಆಹಾರಗಳ ಅತಿಯಾದ ಸೇವನೆಯಿಂದ ಬೊಜ್ಜಿನ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ ಎಂದು ಹೇಳಲಾಗಿದೆ. ಈ ದೇಶಗಳಲ್ಲಿ ಸರಿ ಸುಮಾರು 2.5 ಕೋಟಿಗೂ ಹೆಚ್ಚು ಜನರು ಅಧಿಕ ತೂಕ ಹೊಂದಿದ್ದಾರಂತೆ. 890 ಮಿಲಿಯನ್ ಜನ ಸ್ಥೂಲಕಾಯಕ್ಕೆ ಬಲಿಯಾಗ್ತಾರೆ ಅಂತ ವರದಿ ಹೇಳಿದೆ.
ಲಿವಿಂಗ್ ಪ್ಲಾನೆಟ್ ವರದಿಯಲ್ಲಿ ರಾಗಿ ಬಳಕೆ ಬಗ್ಗೆಯೂ ಉಲ್ಲೇಖಿಸಲಾಗಿದೆ. ಭಾರತವು ವಿಶ್ವದ ಅತಿ ದೊಡ್ಡ ರಾಗಿ ಉತ್ಪಾದಕವಾಗಿದ್ದು, ಜಾಗತಿಕ ಆಹಾರ ಉತ್ಪಾದನೆಯ ಶೇ.41ರಷ್ಟು ಬೆಳೆಯಲಾಗುತ್ತದೆ. ರಾಷ್ಟ್ರೀಯ ರಾಗಿ ಅಭಿಯಾನ, ರಾಗಿ ಮಿಷನ್, ಬರ ಪರಿಹಾರ ಯೋಜನೆ ಸೇರಿ ರಾಗಿ ಆಹಾರಕ್ಕೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಉತ್ತರ ಭಾರತದಲ್ಲಿ ಬೇಳೆಕಾಳು, ಗೋಧಿ ರೊಟ್ಟಿ ಜೊತೆಗೆ ಮಾಂಸ ಆಧಾರಿತ ಆಹಾರವಿದೆ. ದಕ್ಷಿಣದಲ್ಲಿ ಅನ್ನ ಅದಕ್ಕೆ ಸಂಬಂಧಿಸಿದ ಇಡ್ಲಿ, ದೋಸೆ, ಸಾಂಬಾರ್ ಹೆಚ್ಚು ಸೇವಿಸಲಾಗುತ್ತಿದೆ. ಅಲ್ಲದೇ ಮೀನು, ಮಾಂಸ ಕೂಡ ಹಲವರ ನೆಚ್ಚಿನ ಅಹಾರ. ಪಶ್ಚಿಮ, ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿ, ಮೀನು, ಅನ್ನ ಪ್ರಧಾನ ಆಹಾರ. ಇಲ್ಲಿನ ಜನರು ಬಾರ್ಲಿ, ರಾಗಿ, ರಾಗಿ, ಬೇಳೆ, ಮುತ್ತು ರಾಗಿಯನ್ನು ಸೇವಿಸುತ್ತಾರೆ.
ವರದಿಯಲ್ಲಿ ಮುಖ್ಯವಾಗಿ ಸ್ಥಳೀಯ ಮತ್ತು ಕಾಲರಿಯುತ ಆಹಾರ ಸೇವಿಸುವ ಅಗತ್ಯದ ಬಗ್ಗೆ ಹೇಳಿದೆ. ಸಂಸ್ಕರಿಸಿದ ಆಹಾರ ಕನಿಷ್ಠವಾಗಿ ಸೇವಿಸಬೇಕು, ಸಸ್ಯಾಹಾರಿ ಮತ್ತು ಸಸ್ಯಾಹಾರಿ ಆಹಾರವನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಜೊತೆಗೆ ಆಹಾರ ವ್ಯರ್ಥವಾಗುವುದನ್ನು ಕಡಿಮೆ ಮಾಡಬೇಕು ಅಂತ ವರದಿ ಹೇಳಿದೆ. 2050ರ ವೇಳೆಗೆ ಜಗತ್ತಿನ ಎಲ್ಲಾ ದೇಶಗಳು ಭಾರತದಂತೆ ಆಹಾರ ಉತ್ಪಾದನೆ ಮತ್ತು ಆಹಾರ ಸೇವನೆಗೆ ಮಾಡಿದರೆ ಅದು ಭೂಮಿಗೆ ಮತ್ತು ಹವಾಮಾನಕ್ಕೂ ಕನಿಷ್ಟ ಹಾನಿ ಅಂತ ವರದಿ ಹೇಳಿದೆ. ಭಾರತದ ಆಹಾರದಿಂದ ಹವಾಮಾನ ಬದಲಾವಣೆಯಲ್ಲಿ ಯಾವುದೇ ಕೆಟ್ಟ ಪರಿಣಾಮವಿಲ್ಲ ಜೊತೆಗೆ ಜೀವವೈವಿಧ್ಯತೆಯ ನಷ್ಟವಾಗುವುದಿಲ್ಲ. ನೈಸರ್ಗಿಕ ಸಂಪನ್ಮೂಲಗಳು ಮತ್ತು ಆಹಾರ ಭದ್ರತೆಯಲ್ಲಿ ಇಳಿಕೆಯಾಗುವುದಿಲ್ಲ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಭಾರತದ ಆಹಾರ ಪದ್ಧತಿ ಅರೋಗ್ಯಕ್ಕೂ ಪ್ರಯೋಜನ, ಹವಾಮಾನಕ್ಕೂ ಒಳ್ಳೆಯದು ಅಂತಿದೆ ಲಿವಿಂಗ್ ಪ್ಲಾನೆಟ್ ವರದಿ.
ವಿಶೇಷ ವರದಿ- ವಿಶ್ವನಾಥ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ