/newsfirstlive-kannada/media/post_attachments/wp-content/uploads/2025/04/4-INDIAN-RICHEST-INDUSTRIALIST.jpg)
ಬ್ಲ್ಯಾಕ್ ಮಂಡೇ, ಇಡೀ ವಿಶ್ವದ ಷೇರು ಮಾರುಕಟ್ಟೆಯನ್ನೇ ತಲ್ಲಣಗೊಳಿಸಿ,1987ರಲ್ಲಿ ನಡೆದ ಕರಾಳ ಇತಿಹಾಸ ಮತ್ತೆ ಜಾಗತಿಕವಾಗಿ ಮರುಕಳಸಲಿದೆಯಾ ಎಂಬ ಭೀತಿಯನ್ನು ಹುಟ್ಟಿಸಿದೆ. ಈಗಾಗಲೇ ಯಾವೆಲ್ಲಾ ದೇಶಗಳು ಏನೆಲ್ಲಾ ಹೊಡೆತ ತಿಂದಿವೆ ಎಂಬುದರ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಭಾರತದ ಷೇರು ಮಾರುಕಟ್ಟೆಗೂ ಕೂಡ ಈ ಬ್ಲ್ಯಾಕ್ ಮಂಡೇ ದೊಡ್ಡ ಹೊಡೆತ ಕೊಟ್ಟು ತಲ್ಲಗೊಳಿಸಿದೆ. ಇದರಿಂದ ಭಾರತದ ಶ್ರೀಮಂತ ಉದ್ಯಮಿಗಳಿಗೂ ಕೂಡ ಭಾರೀ ನಷ್ಟವಾಗಿದೆ. ಯಾವೆಲ್ಲಾ ಉದ್ಯಮಿಗಳೂ ಈ ಬ್ಲ್ಯಾಕ್ ಮಂಡೇಯಿಂದ ಹೊಡೆತ ತಿಂದಿದ್ದಾರೆ. ಆಗಿರುವ ನಷ್ಟ ಎಷ್ಟು ಎನ್ನುವುದನ್ನು ನೋಡುವುದಾದ್ರೆ.
ಇದನ್ನೂ ಓದಿ:ಭಾರತದ ಷೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ತಲ್ಲಣ.. ಏನಿದು ಬ್ಲ್ಯಾಕ್ ಮಂಡೇ? ಇದರ ಇತಿಹಾಸ ಏನು?
ಭಾರತದ ನಾಲ್ವರು ಬಹುದೊಡ್ಡ ಶ್ರೀಮಂತ ಉದ್ಯಮಿಗಳಿಗೆ ಬ್ಲ್ಯಾಕ್ ಮಂಡೇ ಹೊಡೆತ ಕೊಟ್ಟಿದೆ. ಭಾರತದ ಶ್ರೀಮಂತರ ಎಂದ ಕೂಡಲೇ ನಮ್ಮ ತಲೆಯಲ್ಲಿ ಬರೋದು ಎರಡು ಹೆಸರು, ಒಂದು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ. ಇವರನ್ನು ಹೊರತು ಪಡೆಸಿ ಇನ್ನು ಇಬ್ಬರು ಶ್ರೀಮಂತ ಉದ್ಯಮಿಗಳು ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಿದ್ದಾರೆ. ಸಾವಿತ್ರಿ ಜಿಂದಾಲ್ ಮತ್ತು ಶಿವ ನಡಾರ್ಗೂ ಕೂಡ ದೊಡ್ಡ ಹೊಡೆತ ಬಿದ್ದಿದೆ.
ಮುಖೇಶ್ ಅಂಬಾನಿಗೆ ಇಂದು ಸಂಭವಿಸಿದ ಷೇರು ಮಾರುಕಟ್ಟೆಯ ಭೀಕರ ಕುಸಿತದಿಂದಾಗಿ ಸುಮಾರು 3.6 ಬಿಲಿಯನ್ ಡಾಲರ್ನಷ್ಟು ನಷ್ಟವಾಗಿದೆ. ಮುಖೇಶ್ ಅಂಬಾನಿಯ ಬಳಿ ಇರುವ ಒಟ್ಟು ಸ್ವತ್ತು. 87.7 ಯುಎಸ್ ಬಿಲಿಯನ್ ಡಾಲರ್ನಷ್ಟು.
ಇನ್ನು ಗೌತಮ್ ಅದಾನಿಗೂ ಕೂಡ ಬ್ಲ್ಯಾಕ್ ಮಂಡೇ ಹೊಡೆತ ಜೋರಾಗಿಯೇ ಬಿದ್ದಿದೆ. ಗೌತಮ್ ಅದಾನಿ ಸುಮಾರು 3 ಬಿಲಿಯನ್ ಡಾಲರ್ನಷ್ಟು ನಷ್ಟ ಕಂಡಿದ್ದಾರೆ. ಅವರ ಬಳಿ ಇರುವ ಆಸ್ತಿ ಸುಮಾರು 57.3 ಬಿಲಿಯನ್ ಡಾಲರ್.
ಇದನ್ನೂ ಓದಿ:ಜನ ಸಾಮಾನ್ಯರಿಗೆ ಬಿಗ್ ಶಾಕ್.. LPG ಸಿಲಿಂಡರ್ ಬೆಲೆಯಲ್ಲಿ ಏರಿಕೆ; ನಾಳೆಯಿಂದಲೇ ದೇಶಾದ್ಯಂತ ಜಾರಿ!
ಇನ್ನು, ಸಾವಿತ್ರಿ ಜಿಂದಾಲ್ ಸಂಪತ್ತಿಗೂ ಕೂಡ ಸುಮಾರು 2.2 ಬಿಲಿಯನ್ ಡಾಲರ್ನಷ್ಟು ಹೊಡೆತ ಬಿದ್ದಿದೆ. ಸಾವಿತ್ರಿ ಜಿಂದಾಲ್ ಬಳಿ ಇರುವ ಸಂಪತ್ತು ಸುಮಾರು 39.9 ಬಿಲಿಯನ್ ಡಾಲರ್. ಹೆಚ್ಸಿಎಲ್ ಕಂಪನಿಯ ಶಿವ ನಡಾರ್ಗೆ ಇಂದು ಒಂದೇ ದಿನದಲ್ಲಿ ಸುಮಾರು 1.5 ಬಿಲಿಯನ್ ಡಾಲರ್ ನಷ್ಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ