newsfirstkannada.com

ಅಕ್ಕಿ ರಫ್ತು ಮಾಡದಿರಲು ಕೇಂದ್ರ ಸರ್ಕಾರ ಚಿಂತನೆ; ಭಾರತದ ನಿರ್ಧಾರಕ್ಕೆ ಜಾಗತಿಕ ರೈಸ್‌ ಮಾರುಕಟ್ಟೆಯಲ್ಲಿ ಹೊಸ ಟೆನ್ಷನ್

Share :

Published July 13, 2023 at 10:05pm

Update December 2, 2023 at 7:25pm

  ಟೊಮ್ಯೊಟೋ ಜೊತೆಗೆ ದೇಶದಲ್ಲಿ ಅಕ್ಕಿ ಬೆಲೆಯೂ ಏರಿಕೆ

  ಬಾಸುಮತಿ ಹೊರೆತುಪಡಿಸಿ ಉಳಿದ ಅಕ್ಕಿಗಳ ರಫ್ತಿಗೆ ಬ್ರೇಕ್?

  ಭಾರತದಿಂದ ಜಾಗತಿಕ ಅಕ್ಕಿ ಮಾರುಕಟ್ಟೆಯಲ್ಲಿ ಕೋಲಾಹಲ

ನವದೆಹಲಿ: ದೇಶಾದ್ಯಂತ ಟೊಮ್ಯೊಟೋ ಬೆಲೆ ಏರಿಕೆಯ ಜೊತೆಗೆ ತರಕಾರಿ, ದಿನಸಿ ವಸ್ತುಗಳ ದರವೂ ಹೆಚ್ಚಾಗುತ್ತಿದೆ. ಈ ಬೆಲೆ ಏರಿಕೆಯು ಅಕ್ಕಿ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸೋ ಸಾಧ್ಯತೆಯಿದೆ. ಈ ಸಮಸ್ಯೆ ಗಂಭೀರತೆಯನ್ನು ಅರಿತಿರೋ ಕೇಂದ್ರ ಸರ್ಕಾರ ವಿದೇಶಕ್ಕೆ ಅಕ್ಕಿ ಮಾರಾಟ ಮಾಡದಿರಲು ಚಿಂತನೆ ನಡೆಸಿದೆ. ಭಾರತ ಅಕ್ಕಿ ರಫ್ತಿಗೆ ಬ್ರೇಕ್ ಹಾಕ್ತಿರೋದು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಕಂಪನ ಸೃಷ್ಟಿಸಿದೆ.

ಭಾರತದಲ್ಲಿ ಅಕ್ಕಿ ದರ ಹೆಚ್ಚುತ್ತಿರುವ ಹಿನ್ನೆಲೆ ಅಕ್ಕಿಯನ್ನೇ ರಫ್ತು ಮಾಡದಿರುವ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಚರ್ಚೆ ನಡೆಸಿದೆ. ಬಾಸುಮತಿ ಅಕ್ಕಿಯನ್ನ ಹೊರೆತುಪಡಿಸಿ ಉಳಿದ ಅಕ್ಕಿಗಳ ರಫ್ತಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅಕ್ಕಿ ದರ ಏರಿಕೆ ಆಗುತ್ತಿರುವುದರಿಂದ ರಫ್ತು ಮಾಡಿದ್ರೆ ದೇಶದ ಒಳಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಸಾಮಾನ್ಯ ಜನರ ಹಿತದೃಷ್ಟಿಯಿಂದ ಅಕ್ಕಿ ರಫ್ತಿಗೆ ಬ್ರೇಕ ಹಾಕಲು ಕೇಂದ್ರ ಸರ್ಕಾರ ಚಿಂತಿಸಿದೆ.

ಜಾಗತಿಕ ಅಕ್ಕಿ ಮಾರುಕಟ್ಟೆಯಲ್ಲಿ ಭಾರತ ಸಿಂಹಪಾಲು ಹೊಂದಿದೆ. ಭಾರತದ ಈ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಶೇಕಡಾ 80ರಷ್ಟು ಅಕ್ಕಿ ರಫ್ತಿನ ವಹಿವಾಟಿಗೆ ಪೆಟ್ಟು ಬೀಳಲಿದೆ. ಯಾಕಂದ್ರೆ ಜಾಗತಿಕ ಮಾರುಕಟ್ಟೆಯಲ್ಲ ಏಷ್ಯಾದಿಂದಲೇ ಶೇಕಡಾ 90ರಷ್ಟು ಅಕ್ಕಿ ರಫ್ತು ಮಾಡಲಾಗ್ತಿದೆ. ಅದರಲ್ಲಿ ಭಾರತವೇ ಶೇಕಡಾ 40ರಷ್ಟು ಅಕ್ಕಿ ರಫ್ತು ಮಾಡುತ್ತಿದೆ. ಈಗ ಇದ್ದಕ್ಕಿದ್ದಂತೆ ಭಾರತ ಅಕ್ಕಿ ರಫ್ತಿಗೆ ಬ್ರೇಕ್ ಹಾಕಿದ್ರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಕೊರತೆ ಎದುರಾಗುತ್ತದೆ. ಅಕ್ಕಿಯ ಬೆಲೆ ದಿಢೀರ್ ಗಗನಕ್ಕೇರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕಿ ರಫ್ತು ಮಾಡದಿರಲು ಕೇಂದ್ರ ಸರ್ಕಾರ ಚಿಂತನೆ; ಭಾರತದ ನಿರ್ಧಾರಕ್ಕೆ ಜಾಗತಿಕ ರೈಸ್‌ ಮಾರುಕಟ್ಟೆಯಲ್ಲಿ ಹೊಸ ಟೆನ್ಷನ್

https://newsfirstlive.com/wp-content/uploads/2023/07/Rice-Export.jpg

Load More