newsfirstkannada.com

ಶೀಘ್ರದಲ್ಲೇ ವಂಚನೆ, ಸ್ಪ್ಯಾಮ್ ಕರೆಗಳಿಗೆ ಮೂಗುದಾರ; ಗ್ರಾಹಕರಿಗೆ ಬಿಗ್ ರಿಲೀಫ್ ಕೊಡಲಿದೆ Caller ID..!

Share :

Published February 24, 2024 at 1:39pm

    ಮೋಸಗಾರರ ಪತ್ತೆಗೆ ‘CNAP ಸೇವೆ’; ಹಾಗೆಂದರೆ ಏನು ಗೊತ್ತಾ?

    ದೂರ ಸಂಪರ್ಕದ Caller ID ಎಂದರೆ ಏನು..? ಅದು ಹೇಗಿರುತ್ತದೆ?

    Caller ID ಜಾರಿಯಾದರೆ ಯಾರಿಗೆ ಲಾಭ, ಯಾರಿಗೆ ನಷ್ಟ ಆಗುತ್ತದೆ?

ಮೊಬೈಲ್ ಬಂದ್ಮೇಲೆ ಅಂಗೈಯಲ್ಲೇ ‘ನನ್ನ ಪ್ರಪಂಚ’ ಎಂಬ ಮಾತಿದೆ. ಅಂಗೈ ಅಗಲದ ಚಿಕ್ಕ ಸಂಪರ್ಕ ಸಾಧನದಿಂದ ಆಗುವುದೆಲ್ಲ ಒಳ್ಳೆಯದಕ್ಕೆ ಆಗಿದ್ದರೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಬೆನಿಫಿಟ್​ಗಿಂತ ಕೆಟ್ಟದಾಗಿರೋದೇ ಹೆಚ್ಚಾಗಿದೆ. ಜಗತ್ತು ತೋರಿಸೋ ಬೆರಳು ತುದಿಗಳು, ಅದೆಷ್ಟೋ ಜನರಿಗೆ ಉಂಡೆನಾಮ ಹಾಕಿ ಬದುಕಿನ ಪ್ರಪಂಚವನ್ನೇ ಬಿಟ್ಟು ಹೋಗುವಂತೆ ಮಾಡಿವೆ. ನೆಮ್ಮದಿಯನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇದೆಲ್ಲವೂ ಖುಲ್ಲಂಖುಲ್ಲಾ ಆಗಿದ್ದರೂ ಯಾರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ನಮ್ಮದಾಗಿತ್ತು. ಆದರೆ ಕೇಂದ್ರ ಸರ್ಕಾರದ ನಿನ್ನೆ ತೆಗೆದುಕೊಂಡ ಆ ಒಂದು ನಡೆ ಹೊಸ ಆಶಾ ಭಾವನೆಯನ್ನು ಮೂಡಿಸಿದೆ. ಒಂದು ವೇಳೆ ಪ್ಲಾನ್​​ನಂತೆ ಇಂಪ್ಲೆಮೆಂಟ್ ಮಾಡಿದರೆ ಮಸ್ಕಾ ಹೊಡೆದು ಸಾಮಾನ್ಯರ ಜೀವನವನ್ನು ‘ಚಸ್ಕಾ-ಮಸ್ಕಾ’ ಮಾಡುವ ದಂಧೆಗೆ ಬ್ರೇಕ್ ಬೀಳಲಿದೆ.

ಕೊನೆಗೂ ಎಚ್ಚೆತ್ತ TRAI..!

ಹೌದು.. ನಿನ್ನೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದಕ್ಕೂ ಮೊದಲು ಮ್ಯಾಟರ್ ಏನೆಂದು ನೋಡೋದಾದರೆ, ಮೊಬೈಲ್​ನಿಂದ ಆಗುತ್ತಿರುವ ಮೋಸಗಳು ಅಷ್ಟಿಷ್ಟಲ್ಲ. ವಂಚನೆ, ಸ್ಪ್ಯಾಮ್ ಕರೆಗಳಿಂದ ಜನ ಬೇಸತ್ತು ಹೋಗಿದ್ದಾರೆ. ದಿನ ಬೆಳಗಾದರೆ ಸಾಕು ನೂರಾರು ಕರೆಗಳು ಬಂದು ನಮ್ಮ ಮತ್ತು ನಿಮ್ಮನ್ನೆಲ್ಲ ಯಾಮಾರಿಸಲು ಬರುತ್ತವೆ. ಇದರಿಂದ ಅದೆಷ್ಟೋ ಮಂದಿ ಮೋಸ ಹೋಗ್ತಿದ್ದಾರೆ. ಸಮಸ್ಯೆಗಳಿಗೆ ಕಡಿವಾಣ ಹಾಕುವ ಸಂದರ್ಭ ಬರುತ್ತಿದ್ದು, ಕೊನೆಗೂ ದೇಶದ ಟೆಲಿಕಾಂ ನಿಯಂತ್ರಕ TRAI ( ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ) ಜನರ ಸಮಸ್ಯೆಗಳನ್ನು ಅರಿತುಕೊಂಡಂತಿದೆ.

ಮುಂದುವರಿದ ಭಾಗವಾಗಿ TRAI ಹೊಸ ಪ್ರಸ್ತಾವನೆ ಮಾಡಿದೆ. ಅದರ ಪ್ರಕಾರ, ನಿಮಗೆ ಬರುವ ಪ್ರತಿ ಫೋನ್​ ಕರೆಯ ನಂಬರ್ ಜೊತೆಗೆ ನಿಮ್ಮ ನಿಜವಾದ ಹೆಸರು, ವಿಳಾಸ ಎಲ್ಲವೂ ಇನ್​​ಬಿಲ್ಡ್​​ ಆಗಿ ಪ್ರದರ್ಶನಗೊಳ್ಳಲಿದೆ. ಇಲ್ಲಿ ನಿಮಗೆ ಟ್ರೂ ಕಾಲರ್ ಇದೆಯಲ್ಲ ಎಂಬ ಪ್ರಶ್ನೆ ಕಾಡಬಹುದು. ಆದರೆ ಟ್ರೂ ಕಾಲರ್​​ನಲ್ಲೂ ದೋಷಗಳು ಇವೆ. ಹೀಗಾಗಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಟ್ರಾಯ್ ನಿನ್ನೆ ಇಂತಹದೊಂದು ಮಾಹಿತಿಯನ್ನು ನೀಡಿದೆ. ಇದನ್ನು ಇಂಟ್ರಡಕ್ಷನ್ ಆಫ್ ಕಾಲಿಂಗ್ ನೇಮ್ ಪ್ರೆಸೆಂಟೇಶನ್ (CNAP) ಎಂದು ಹೆಸರಿಟ್ಟಿದೆ.

ದೂರ ಸಂಪರ್ಕ ಇಲಾಖೆ ಪ್ಲಾನ್ ಇದು

ಟೆಲಿಕಾಂ ನೆಟ್‌ವರ್ಕ್‌ನಲ್ಲಿ CNAP (Calling Name Presentation) ಸೇವೆಗೆ ಸಂಬಂಧಿಸಿದಂತೆ TRAI ತನ್ನ ಸಲಹೆಗಳನ್ನು ಶಿಫಾರಸು ಮಾಡಿದೆ. ದೂರಸಂಪರ್ಕ ಇಲಾಖೆಯಿಂದ ಅನುಮತಿ ಪಡೆದು ಸಲಹೆಗಳನ್ನು ಮುಂದಿಟ್ಟಿರುವುದಾಗಿ ತಿಳಿಸಿದೆ. ಕರೆ ಮಾಡಿದವರ ನೈಜ ಗುರುತನ್ನು ಬಹಿರಂಗಪಡಿಸುವ ಕುರಿತು ಸಲಹೆ ನೀಡುವಂತೆ ದೂರಸಂಪರ್ಕ ಇಲಾಖೆಯು TRAIಗೆ ಕೇಳಿತ್ತು. 2022, ಮಾರ್ಚ್​​ನಲ್ಲಿ TRAI ದೂರಸಂಪರ್ಕ ಇಲಾಖೆ (DOT) ಸಲಹೆಗಳನ್ನು ಆಹ್ವಾನಿಸಿತ್ತು. ನಂತರ TRAI ನವೆಂಬರ್ 2022ರಲ್ಲಿ CNAP ಸೇವೆಗಳಿಗೆ ಸಂಬಂಧಿಸಿದಂತೆ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ ಸಾರ್ವಜನರು ಪರ-ವಿರೋಧಗಳ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಪರ-ವಿರೋಧ ಕುರಿತ ಚರ್ಚೆಗಳು ಸಾರ್ವಜನಿಕವಾಗಿ ನಡೆದಿದ್ದವು. ಸುದೀರ್ಘ ಚರ್ಚೆಗಳ ಬಳಿಕ TRAI ತನ್ನ ಸಲಹೆಗಳನ್ನು ಸಿದ್ಧಪಡಿಸಿದೆ.

ಹೇಗಿರುತ್ತದೆ Caller ID..?
ದೇಶೀಯ ದೂರಸಂಪರ್ಕ ಜಾಲಗಳಲ್ಲಿ ಕಾಲರ್ ಐಡಿ ವೈಶಿಷ್ಟ್ಯವು ಡೀಫಾಲ್ಟ್ ಆಗಿ ಲಭ್ಯವಿರಲಿದೆ. ಇದರರ್ಥ ಪ್ರತಿ ಕರೆಯೊಂದಿಗೆ ಕರೆ ಮಾಡಿದವರ ನಿಜವಾದ ಗುರುತು ಬಹಿರಂಗ ಆಗಿಲಿದೆ. TRAI ಪ್ರಕಾರ, ಇದು ಪೂರಕ ಸೇವೆಯಾಗಿರಲೂಬಹುದು, ವಿನಂತಿಯ ಮೇರೆಗೆ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲೂಬಹುದು. ಈ ಪ್ರಸ್ತಾವನೆಗಳು ಕಾರ್ಯರೂಪಕ್ಕೆ ಬಂದರೆ ಶೀಘ್ರದಲ್ಲೇ ಕರೆ ಮಾಡಿದವರ ನಿಜವಾದ ಹೆಸರು ನಿಮ್ಮ ಮೊಬೈಲ್‌ನಲ್ಲಿ ಡಿಸ್​​​ಪ್ಲೇ ಆಗಲಿದೆ. ಇನ್ನೊಂದು ವಿಚಾರ ಏನೆಂದರೆ ನೀವು ಯಾವುದೇ ನಂಬರ್ ಮೊಬೈಲ್​ನಲ್ಲಿ ಸೇವ್ ಮಾಡಿಕೊಳ್ಳುವಾಗ, ಸಿಮ್ ಖರೀದಿಸುವ ವೇಳೆ ಕೊಟ್ಟಿರುವ ಐಡಿಯಲ್ಲಿರುವ ಹೆಸರು ಕಾಣಿಸಿಕೊಳ್ಳಲಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ..?
TRAI ‘ಡೀಫಾಲ್ಟ್ ಕಾಲರ್ ಐಡಿ’ ಸೇವೆ ಆರಂಭಿಸುವುದರಿಂದ ಲಾಭ-ನಷ್ಟ ಎರಡೂ ಇದೆ. ಮಾರುಕಟ್ಟೆಯಲ್ಲಿ ಕೆಲವು ಕಂಪನಿಗಳು ನಷ್ಟವನ್ನು ಅನುಭವಿಸಬಹುದು. ಆದರೆ ಗ್ರಾಹಕರಿಗೆ ದೊಡ್ಡ ಪರಿಹಾರ ಹಾಗೂ ರಿಲ್ಯಾಕ್ಸ್ ಸಿಗಲಿದೆ. ಪ್ರಸ್ತುತ, ಟ್ರೂಕಾಲರ್‌ನಂತಹ ಕಂಪನಿಗಳು ಕಾಲರ್ ಐಡಿ ಸೇವೆಯನ್ನು ಒದಗಿಸುತ್ತವೆ. ಆದರೆ ಅದರಲ್ಲಿಯೂ ಸಹ ಗ್ರಾಹಕರು ಕರೆ ಮಾಡಿದವರ ನಿಜವಾದ ಹೆಸರನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ.

ಒಟ್ಟಾರೆ ಹೆಚ್ಚುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ವಂಚನೆ, ಸ್ಪ್ಯಾಮ್ ಕರೆಗಳ ಮೂಲಕ ವಂಚಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಟ್ರೈ ಎಚ್ಚರಿಕೆಯ ನಡುವೆಯೂ ವಂಚನೆ ಅಥವಾ ಸ್ಪ್ಯಾಮ್ ಕರೆಗಳ ಆರ್ಭಟ ನಿಲ್ಲುತ್ತಿಲ್ಲ. ಇದೀಗ ಭಾರತೀಯ ದೂರಸಂಪರ್ಕ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮುಂದೊಂದು ದಿನ ಕಾಲರ್ ಐಡಿ ಸೇವೆ ಬಂದರೆ ಮೋಸ ಹೋಗುತ್ತಿದ್ದ ಜನರಿಗೆ ದೊಡ್ಡ ರಿಲ್ಯಾಕ್ಸ್ ಸಿಗಲಿದೆ. ಅಲ್ಲದೇ ವಂಚಕರ ಹಾವಳಿಗೂ ಮೂಗುದಾರ ಬೀಳಲಿದೆ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೀಘ್ರದಲ್ಲೇ ವಂಚನೆ, ಸ್ಪ್ಯಾಮ್ ಕರೆಗಳಿಗೆ ಮೂಗುದಾರ; ಗ್ರಾಹಕರಿಗೆ ಬಿಗ್ ರಿಲೀಫ್ ಕೊಡಲಿದೆ Caller ID..!

https://newsfirstlive.com/wp-content/uploads/2024/02/PHONE.jpg

Load More