/newsfirstlive-kannada/media/post_attachments/wp-content/uploads/2024/09/JOBS-2.jpg)
ಉದ್ಯೋಗಗಳನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇಲ್ಲೊಂದು ಆಫರ್ ಒಂದಿದೆ. ಕೇಂದ್ರ ಸರ್ಕಾರದಡಿ ಕೆಲಸ ಮಾಡಲು ಇಚ್ಛಿಸುವವರು ಇಲ್ಲಿ ತಿಳಿಸಲಾದ ಎಲ್ಲವನ್ನು ಅರಿತುಕೊಂಡು ಕೂಡಲೇ ಅರ್ಜಿ ಸಲ್ಲಿಕೆ ಮಾಡಿ. ಏಕೆಂದರೆ ಕೆಲವೇ ಕೆಲವು ಉದ್ಯೋಗಗಳು ಇರುವುದರಿಂದ ಬೇಗ ಅಪ್ಲೇ ಮಾಡುವುದು ಉತ್ತಮ.
ಭಾರತ ಸರ್ಕಾರದಡಿ ಬರುವ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧೀನ ಶಾಸಕಾಂಗ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಇಲಾಖೆಯು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಮಾಡುವವರು ಕೇಳಿರುವ ಎಲ್ಲ ದಾಖಲೆಗಳನ್ನು ಲಗತ್ತಿಸಿ ಇಮೇಲ್ ಮೂಲಕ ಕಳುಹಿಸಬಹುದು. ಇಮೇಲ್- [email protected]. ಆಫ್​ಲೈನ್ ಮೂಲಕವು ಅರ್ಜಿ ಸಲ್ಲಿಕೆ ಮಾಡಬಹುದು.
ಉದ್ಯೋಗ ಹೆಸರು- ಕಚೇರಿ ಸಹಾಯಕರು
ಒಟ್ಟು ಎಷ್ಟು ಹುದ್ದೆಗಳು- 05
ವಯೋಮಿತಿ- 21- 40 ವರ್ಷ
ಇದನ್ನೂ ಓದಿ: ಹಿರಿಯ ವ್ಯವಸ್ಥಾಪಕ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ.. ಒಟ್ಟು ಎಷ್ಟು ಉದ್ಯೋಗಗಳು ಇವೆ?
/newsfirstlive-kannada/media/post_attachments/wp-content/uploads/2024/12/JOBS_CWC.jpg)
ಮಾಸಿಕ ವೇತನ ಶ್ರೇಣಿ- 35,000
ಶೈಕ್ಷಣಿಕ ಅರ್ಹತೆ- ಯಾವುದೇ ಪದವಿ, ಬಿ.ಟೆಕ್, ಬಿಸಿಎ ಅಥವಾ 1 ವರ್ಷದ ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಶನ್
ಕಚೇರಿಯಲ್ಲಿ ಕೆಲಸ ಏನು ಇರುತ್ತದೆ?
ದಾಖಲಾತಿ ಸ್ಕ್ಯಾನಿಂಗ್, ಆಡಳಿತ, ರೆಕಾರ್ಡ್ ನಿರ್ವಹಣೆಗಳಲ್ಲಿ 2 ವರ್ಷದ ಅನುಭವ ಇರಬೇಕು.
ಎಂಎಸ್ ಆಫೀಸ್, ಎಂಎಸ್ ವರ್ಲ್ಡ್, ಎಕ್ಸೆಲ್, ಪವರ್ ಪಾಯಿಂಟ್ ಬಳಕೆ ಗೊತ್ತಿರಬೇಕು.
26 ಮಾರ್ಚ್ 2025 ಪ್ರಕಟಣೆ ಹೊರಡಿಸಿದೆ
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 10/ 04/ 2025 (ಈ ಉದ್ಯೋಗ ಪ್ರಕಟಣೆ ಮಾಡಿದ 15 ದಿನಗಳ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕು)
ಉದ್ಯೋಗದ ಮಾಹಿತಿಯ ಲಿಂಕ್;
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us