newsfirstkannada.com

Congratulations: ಸತತ 2ನೇ ಬಾರಿ ಕಂಚಿನ ಪದಕಕ್ಕೆ ಮುತ್ತಿಟ್ಟ ಹಾಕಿ ತಂಡ; ಐತಿಹಾಸಿಕ ಜಯ

Share :

Published August 8, 2024 at 8:00pm

Update August 8, 2024 at 8:03pm

    ಪ್ಯಾರಿಸ್ ಅಂಗಳದಲ್ಲಿ ಸ್ಪೇನ್ ವಿರುದ್ಧ ಹಾಕಿ ತಂಡಕ್ಕೆ ಭರ್ಜರಿ ಗೆಲುವು

    ಕಂಚಿನ ಪದಕ ಮುಡಿಗೇರಿಸಿಕೊಂಡ ಭಾರತೀಯ ಪುರುಷರ ಹಾಕಿ ತಂಡ

    ಸತತ ಎರಡನೇ ಬಾರಿಯೂ ಕಂಚಿನ ಪದಕಕ್ಕೆ ಮುತ್ತಿಟ್ಟ ಪುರುಷರ ಪಡೆ

ಪ್ಯಾರಿಸ್​: ಈ ಬಾರಿಯ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಚಿನ್ನ ಗೆಲ್ಲುವ ಭರವಸೆಯನ್ನು ಹುಟ್ಟಿಸಿದವರಲ್ಲಿ ಪುರುಷರ ಹಾಕಿ ತಂಡವು ಕೂಡ ಒಂದಿತ್ತು. ಆರಂಭದಲ್ಲಿ ಪುರುಷರ ಹಾಕಿ ತಂಡ ಆಡಿದ ಪರಿ, ದಶಕಗಳ ಬಳಿಕ ಆಸ್ಟ್ರೇಲಿಯಾ ಟೀಮ್‌ ಅನ್ನು ಬಗ್ಗು ಬಡಿದ ರೀತಿ ನೋಡಿ ಈ ಬಾರಿ ಹಾಕಿ ಚಿನ್ನವನ್ನು ಕೊರಳಿಗೆ ಹಾಕಿಕೊಂಡೆ ಬರಲಿದೆ ಎಂಬ ಭರವಸೆಗಳು ಮೂಡಿದ್ವು. ಆದ್ರೆ ಕೊನೆಯ ಕ್ಷಣದಲ್ಲಿ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದೆ. ಆದ್ರೆ ಭಾರತ ಬರೀಗೈಯಲ್ಲಿ ಬಂದಿಲ್ಲ. ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡೇ ಭಾರತದ ಪುರುಷರ ಹಾಕಿ ತಂಡ ದೇಶಕ್ಕೆ ಮರಳುತ್ತಿದೆ.

ಇದನ್ನೂ ಓದಿ: Good News: ಅನರ್ಹರಾದ ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಸಿಗುತ್ತಾ? ಮನವಿ ಒಪ್ಪಿಕೊಂಡ ಕೋರ್ಟ್!

ಇದನ್ನೂ ಓದಿ:  ಸೋತಲ್ಲೇ ಗೆದ್ದಳು, ಬಿದ್ದಲ್ಲೇ ಎದ್ದಳು‌.. ಶಾ‘ಕಾರಿ ರಿಚರ್ಡ್ಸನ್ ಲೈಫ್​ ಜರ್ನಿಯೇ ಥ್ರಿಲಿಂಗ್ ಸ್ಟೋರಿ; ತಪ್ಪದೇ ಓದಿ!

ಪ್ಯಾರಿಸ್ ಅಂಗಳದಲ್ಲಿ ಸ್ಪೇನ್​ ತಂಡವನ್ನು 2-1 ಅಂತರದಲ್ಲಿ ಸೋಲಿಸುವ ಮೂಲಕ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ. ಕಳೆದ ಬಾರಿ ಟೋಕಿಯದಲ್ಲಿಯೂ ಕಂಚಿನ ಪದಕಕ್ಕೆ ಮುತ್ತಿಡುವ ಮೂಲಕ 52 ವರ್ಷ ಕಾಲದವರೆಗೂ ಹಾಕಿಯಲ್ಲಿ ಪದಕವಿಲ್ಲದ ಕೊರತೆಯನ್ನು ನೀಗಿಸಿತ್ತು ಭಾರತದ ಪುರುಷರ ಹಾಕಿ ತಂಡ.

1968 ಮತ್ತು 1972ರಲ್ಲಿ ನಿರಂತರವಾಗಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿತ್ತು ಇದೇ ನಮ್ಮ ಭಾರತೀಯ ಪುರಷರ ಹಾಕಿ ತಂಡ. 52 ವರ್ಷಗಳಿಂದಲೂ ಮತ್ತೆ ಚಿನ್ನದ ಪದಕ ಗೆಲ್ಲಲಾಗಿಲ್ಲ ಎಂಬ ಕೊರಗೊಂದು ಇನ್ನೂ ಇದೆ. ಅದು ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುವ ಭರವಸೆಯೂ ಇದೆ. ಇಂದು ನಡೆದ ಪಂದ್ಯದಲ್ಲಿ ಹರ್ಮನ್​​ಪ್ರೀತ್ ಸಿಂಗ್ ಎರಡು ಪೆನಾಲ್ಟಿ ಕಾರ್ನರ್​ಗಳನ್ನು ಗೋಲಾಗಿ ಪರಿವರ್ತಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದು ಎಲ್ಲರ ಖುಷಿಯನ್ನು ಇಮ್ಮಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Congratulations: ಸತತ 2ನೇ ಬಾರಿ ಕಂಚಿನ ಪದಕಕ್ಕೆ ಮುತ್ತಿಟ್ಟ ಹಾಕಿ ತಂಡ; ಐತಿಹಾಸಿಕ ಜಯ

https://newsfirstlive.com/wp-content/uploads/2024/08/MENS-HOCKEY-TEAM-WON-BRONZE-1.jpg

Load More