ಅಮೆರಿಕದಲ್ಲಿ ಭಾರತ ಮೂಲದ ತಂದೆ-ಮಗಳ ಹತ್ಯೆ.. ಯಾಕೆ ಭಾರತೀಯರೇ ಟಾರ್ಗೆಟ್​..?

author-image
Ganesh
Updated On
ಅಮೆರಿಕದಲ್ಲಿ ಭಾರತ ಮೂಲದ ತಂದೆ-ಮಗಳ ಹತ್ಯೆ.. ಯಾಕೆ ಭಾರತೀಯರೇ ಟಾರ್ಗೆಟ್​..?
Advertisment
  • ಅಮೆರಿಕದಲ್ಲಿ ಬಂದೂಕುದಾರಿಯ ಅಟ್ಟಹಾಸ
  • ಭಾರತ ಮೂಲದ ತಂದೆ-ಮಗಳು ಗುಂಡಿಗೆ ಸಾವು
  • ಅಮೆರಿಕದ ಡಿಪಾರ್ಟ್‌ಮೆಂಟಲ್ ಸ್ಟೋರ್‌ನಲ್ಲಿ ಶೂಟೌಟ್‌

ಅಮೆರಿಕದಲ್ಲಿ ಆಡೋ ಮಕ್ಕಳ ಕೈಯ್ಯಲ್ಲೂ ಮದ್ದು-ಗುಂಡು, ಬಂದೂಕುಗಳು ರಾರಾಜಿಸುತ್ತಿರುತ್ತವೆ. ಇದಕ್ಕೆ ಸಾಕ್ಷಿಯಾಗಿ ಆಗಾಗ ಶೂಟೌಟ್ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೆ ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಅಮೆರಿಕದಲ್ಲಿ ಗನ್ ಸದ್ದು ಮಾಡಿದೆ. ಆಗಂತುಕನ ಅಟ್ಟಹಾಸಕ್ಕೆ ಭಾರತೀಯ ಮೂಲದವರು ಅಸುನೀಗಿದ್ದಾರೆ.

ಬಂದೂಕುದಾರಿಯ ಅಟ್ಟಹಾಸ

ಅಮೆರಿಕಾದಲ್ಲಿ ಶೂಟೌಟ್‌ಗಲು ಸರ್ವೆಸಾಮಾನ್ಯ ಎನ್ನುವಂತಾಗಿದೆ. ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದ್ರೂ ಗನ್‌ಗಳ ಸದ್ದು ಕಮ್ಮಿಯಾಗದಾಗಿದೆ. ಇದೀಗ ಮತ್ತೆ ಆಗಂತುಕನ ಅಟ್ಟಹಾಸಕ್ಕೆ ಅಮಾಯಕರ ಪ್ರಾಣಪಕ್ಷಿ ಹಾರಿಹೋಗಿದೆ. ವರ್ಜಿನಿಯಾದಲ್ಲಿ ಬಂದೂಕುದಾರಿಯ ದುರುಳತನಕ್ಕೆ ಭಾರತೀಯ ಮೂಲದ ತಂದೆ-ಮಗಳು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಜಾಕ್‌ಪಾಟ್‌: ಒಂದಲ್ಲ.. ಎರಡಲ್ಲ.. 7 ಕಡೆ KGF ಮಾದರಿಯ ಚಿನ್ನದ ನಿಕ್ಷೇಪ ಪತ್ತೆ; ಗುಡ್‌ನ್ಯೂಸ್‌!

ಭಾರತೀಯರು ಬಲಿ!

ಅಮೆರಿಕದ ಡಿಪಾರ್ಟ್‌ಮೆಂಟಲ್ ಸ್ಟೋರ್‌ನಲ್ಲಿ ಶೂಟೌಟ್‌ ನಡೆದಿದ್ದು, ಭಾರತ ಮೂಲದ ಪ್ರದೀಪ್ ಕುಮಾರ್ ಪಟೇಲ್‌ ಗುಂಡೇಟಿಗೆ ಬಲಿಯಾಗಿದ್ದಾರೆ. ಪ್ರದೀಪ್ ಪುತ್ರಿ 24 ವರ್ಷದ ಉರ್ಮಿ ಕೂಡಾ ಗುಂಡೇಟಿಗೆ ಅಸುನೀಗಿದ್ದಾರೆ. ಆಗಂತುಕನ ಗುಂಡಿಗೆ ಸ್ಥಳದಲ್ಲೇ ಪ್ರದೀಪ್‌ ಸಾವನ್ನಪ್ಪಿದ್ರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಪುತ್ರಿ ಉರ್ಮಿ ದುರಂತ ಅಂತ್ಯ ಕಂಡಿದ್ದಾರೆ. ಅಂದ್ಹಾಗೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರಾಗಿರೋ ಪ್ರದೀಪ್ ಪಟೇಲ್, ಪತ್ನಿ ಹಂಸಬೆನ್, ಪುತ್ರಿ ಉರ್ಮಿ ಜೊತೆ ಅಮೆರಿಕದಲ್ಲಿ ವಾಸ ಮಾಡ್ತಿದ್ರು. ಕಳೆದ ಆರು ವರ್ಷಗಳಿಂದ ತಮ್ಮ ಸಂಬಂಧಿಯ ಶಾಪ್‌ನಲ್ಲಿ ಕಾರ್ಯ ನಿರ್ವಹಿಸ್ತಿದ್ರು. ಹೀಗೆ ತಮ್ಮ ಕಾರ್ಯದಲ್ಲಿ ತೊಡಗಿದ್ದಾಗ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಅಂದ್ಹಾಗೆ ಶಾಪ್‌ನ ಓಪನ್ ಮಾಡ್ತಿದ್ದಂತೆ ಮದ್ಯ ಖರೀದಿಸುವ ನೆಪದಲ್ಲಿ ಫ್ರೇಜಿಯರ್ ಡೆವೋನ್ ವಾರ್ಟನ್ ಎಂಬ ದುಷ್ಕರ್ಮಿ ಎಂಟ್ರಿ ಕೊಟ್ಟಿದ್ದ. ರಾತ್ರಿ ಯಾಕೆ ಶಾಪ್ ಕ್ಲೋಸ್ ಮಾಡಿದ್ರಿ ಅಂತ ಪ್ರಶ್ನಿಸಿ ಶೂಟ್ ಮಾಡಿದ್ದಾನೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: ‘ನಾನು ವೀಲ್‌ಚೇರ್‌ನಲ್ಲಿದ್ರೂ CSK ಎಳೆದು ತಂದು ಕ್ರಿಕೆಟ್​ ಆಡಿಸುತ್ತೆ’.. MS ಧೋನಿ ಹೀಗೆ ಅಂದಿದ್ಯಾಕೆ?

ಕೊಲೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವರ್ಜಿನಿಯಾದ ಪೊಲೀಸರು ಆರೋಪಿ ಫ್ರೇಜಿಯರ್ ಡೆವೋನ್ ವಾರ್ಟನ್ ಎಂಬ ದುಷ್ಕರ್ಮಿಯನ್ನ ಬಂಧಿಸಿದ್ದಾರೆ. ಇವನ ವಿರುದ್ಧ ಕೊಲೆ, ಶಸ್ತ್ರಾಸ್ತ ಕಾನೂನುಗಳ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಶೂಟೌಟ್‌ ಬಗ್ಗೆ ವಿಚಾರಣೆ ಮುಂದುವರಿದಿದೆ. ಅಮೆರಿಕದಲ್ಲಿ ಶಸ್ತ್ರಾಗಳ ಬಗ್ಗೆ ಕಠಿಣ ಕಾನೂನು ತರುವ ಅವಶ್ಯಕತೆ ಇದೆ. ಇಲ್ಲದಿದ್ರೆ ದುರುಳ ಜನರ ದರ್ಪ, ದುಷ್ಕೃತ್ಯಗಳಿಗೆ ಅಮಾಯಕರು ಬಲಿಯಾಗಬೇಕಾಗುತ್ತದೆ. ಇದೀಗ ಬಂಧಿತನಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಬೇಕಿದೆ.

ಇದನ್ನೂ ಓದಿ: ರನ್​ ಬಾರಿಸೋದ್ರಲ್ಲಿ ದಾಖಲೆಗಳ ಸರದಾರ SRH; ಎಷ್ಟು ಬಾರಿ 280ಕ್ಕೂ ಹೆಚ್ಚು ರನ್​​ ಬಾರಿಸಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment