/newsfirstlive-kannada/media/post_attachments/wp-content/uploads/2025/06/Swiss-Banks.jpg)
2024ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಠೇವಣಿ ಹಣ (Indian Money In Swiss Banks) ಬರೋಬ್ಬರಿ ಮೂರು ಪಟ್ಟು ಹೆಚ್ಚಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಸ್ವಿಟ್ಜರ್ಲೆಂಡ್ (ಸ್ವಿಸ್ ನ್ಯಾಷನಲ್ ಬ್ಯಾಂಕ್-SNB) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಕಿ-ಅಂಶ ಬೆಳಕಿಗೆ ಬಂದಿದೆ.
ಸ್ವಿಸ್ ಬ್ಯಾಂಕ್ (Swiss Banks) ನೀಡಿದ ಮಾಹಿತಿ ಪ್ರಕಾರ, 3.5 ಬಿಲಿಯನ್ ಅಷ್ಟು ಅಂದರೆ (ಸುಮಾರು 37,600 ಕೋಟಿ ರೂಪಾಯಿ) ಠೇವಣಿ ಇಟ್ಟಿದ್ದಾರೆ. ಮುಖ್ಯವಾಗಿ ಭಾರತೀಯ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲಕ ದೊಡ್ಡ ಮೊತ್ತದ ಠೇವಣಿ ಇಡಲಾಗಿದೆ. ಅಲ್ಲದೇ ಗ್ರಾಹಕರ ಖಾತೆಗೆ ನೇರವಾಗಿ ಠೇವಣಿ ಇಡುವ ಮೊತ್ತದಲ್ಲೂ ಅಲ್ಪ ಏರಿಕೆ ಆಗಿದೆ. 2023ರಲ್ಲಿ ಸ್ವಿಸ್ ಬ್ಯಾಂಕ್ನಲ್ಲಿ ಠೇವಣಿ ಇಡುವ ಸಂಖ್ಯೆ ಶೇಕಡಾ 70 ರಷ್ಟು ಕುಸಿತವಾಗಿತ್ತು..
ಇದನ್ನೂ ಓದಿ: ಕೊಂಚ ರಿಲ್ಯಾಕ್ಸ್ ಕೊಟ್ಟ ಮಳೆರಾಯ.. ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ..
ಭಾರತೀಯ ಗ್ರಾಹಕರ ವೈಯಕ್ತಿಕ ಖಾತೆಗಳಲ್ಲಿ ಠೇವಣಿ ಇಟ್ಟ ಮೊತ್ತವು 11 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಠೇವಣಿಯ ಒಟ್ಟು ಮೌಲ್ಯ ಸುಮಾರು 3,675 ಕೋಟಿ ರೂಪಾಯಿ ಆಗಿದೆ. ಅಂದರೆ ಒಟ್ಟು ಠೇವಣಿಯ ಹತ್ತನೇ ಒಂದು ಭಾಗ ಗ್ರಾಹಕರ ಖಾತೆಗಳಲ್ಲಿದೆ.
- ಗ್ರಾಹಕರ ಇಟ್ಟಿರುವ ಒಟ್ಟು ಠೇವಣಿ: 3,675 ಕೋಟಿ ರೂಪಾಯಿ
- ಇತರ ಬ್ಯಾಂಕುಗಳ ಮೂಲಕ ಇಟ್ಟಿರುವ ಠೇವಣಿ: 32,000 ಕೋಟಿ ರೂಪಾಯಿ
- ಟ್ರಸ್ಟ್‌ಗಳ ಮೂಲಕ ಹೊಂದಿರುವ ಮೊತ್ತ: 450 ಕೋಟಿ ರೂಪಾಯಿ
- ಬಾಂಡ್‌ಗಳು ಮತ್ತು ಇತರ ಹೂಡಿಕೆ ಉತ್ಪನ್ನಗಳ ಠೇವಣಿ: 1,450 ಕೋಟಿ ರೂಪಾಯಿ
ಕಪ್ಪು ಹಣ ಅಲ್ಲ, ಅಧಿಕೃತ ಅಂಕಿ-ಅಂಶಗಳು
ಸ್ವಿಸ್ ಸೆಂಟ್ರಲ್ ಬ್ಯಾಂಕಿನ ವರದಿಯು ಕಪ್ಪು ಹಣದ ಅಂಕಿ-ಅಂಶ ಅಲ್ಲ. ಕಪ್ಪು ಹಣದ ಬಗ್ಗೆ ತನ್ನ ವರದಿಯಲ್ಲಿ ಸೇರಿಸಿಲ್ಲ. ವ್ಯಕ್ತಿಯ ಹೆಸರಿನಲ್ಲಿ ತೆರೆಯಲಾದ ಖಾತೆಗಳು ಮತ್ತು ಭಾರತೀಯ ಹಣವನ್ನು ಒಳಗೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಭಾರತ ಸರ್ಕಾರ ಮಾಹಿತಿ ಪಡೆಯುತ್ತಿದೆ..
2018ರಿಂದ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ಸ್ವಯಂಚಾಲಿತ ತೆರಿಗೆ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆ ಜಾರಿಯಲ್ಲಿದೆ. ಅದರ ಪ್ರಕಾರ, 2019 ರಿಂದ ಪ್ರತಿ ವರ್ಷ ಭಾರತೀಯ ಖಾತೆದಾರರ ಮಾಹಿತಿಯನ್ನು ಭಾರತ ಸರ್ಕಾರ ಪಡೆಯುತ್ತದೆ. ವ್ಯಕ್ತಿಯ ವಿರುದ್ಧ ತೆರಿಗೆ ವಂಚನೆ ಅಥವಾ ಪುರಾವೆಗಳನ್ನು ಭಾರತ ಒದಗಿಸಿದ್ದರೆ ಸ್ವಿಸ್ ಸರ್ಕಾರ, ಅವರ ಖಾತೆಯ ಬಗ್ಗೆ ಮಾಹಿತಿ ನೀಡುತ್ತದೆ. ಇಂತಹ ನೂರಾರು ವ್ಯಕ್ತಿಯ ಹಣಕಾಸು ವ್ಯವಹಾರದ ಬಗ್ಗೆ ಈಗಾಗಲೇ ಭಾರತ ಸರ್ಕಾರ ಮಾಹಿತಿ ಪಡೆದುಕೊಂಡಿದೆ.
ಇದನ್ನೂ ಓದಿ: ಸಿಎಂ ತವರಿನಲ್ಲಿ ಅಮಾನವೀಯ ಕೃತ್ಯ.. 1280 ರೂ ಕಟ್ಟಿಲ್ಲ ಅಂತಾ 7 ವರ್ಷದ ಹೆಣ್ಣು ಮಗಳ ಹೊತ್ತೊಯ್ದ ಫೈನಾನ್ಸ್ ಸಿಬ್ಬಂದಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ