newsfirstkannada.com

ಭಾರತೀಯ ನೌಕಾಪಡೆಯಿಂದ ಮಾನವೀಯತೆ.. ಕಡಲ್ಗಳ್ಳರಿಂದ ಪಾಕ್​ನ 23 ಜನರ ರಕ್ಷಣೆ

Share :

Published March 30, 2024 at 9:09am

    2 ಭಾರತೀಯ ನೌಕಾಪಡೆ ಹಡಗುಗಳಿಂದ ನಿರಂತರ ಕಾರ್ಯಾಚರಣೆ

    ಇಸ್ರೇಲ್-ಹಮಾಸ್ ಯುದ್ಧದ ನಂತರ ಸೊಮಾಲಿ ಕಡಲ್ಗಳ್ಳರ ಉಪಟಳ

    ಕಾರ್ಯಾಚರಣೆಯ ಮೂಲಕ ಕಡಲ್ಗಳ್ಳರನ್ನು ವಶಕ್ಕೆ ಪಡೆದ ನೌಕಾಪಡೆ

ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮೇಧಾ, ಇರಾನ್ ಮೀನುಗಾರಿಕಾ ಹಡಗಿನ ಅಲ್-ಕಂಬಾರ್‌ನಿಂದ 23 ಪಾಕಿಸ್ತಾನದ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ ಮಾಡಿದೆ.

ಹಡಗಿನಲ್ಲಿ ಸೊಮಾಲಿಯಾದ 9 ಕಡಲ್ಗಳ್ಳರಿದ್ದರು. ಹಡಗು ಯೆಮನ್‌ನ ಸೊಕೊಟ್ರಾ ದ್ವೀಪದ ನೈಋತ್ಯಕ್ಕೆ ಸುಮಾರು 166 ಕಿ.ಮೀ ದೂರಲ್ಲಿ ಪ್ರಯಾಣಿಸುವಾಗ ಹೈಜಾಕ್ ಮುನ್ಸೂಚನೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಎಚ್ಚರಗೊಂಡ ಭಾರತೀಯ ನೌಕಾಪಡೆಯು INS ಸುಮೇಧಾ ಮೂಲಕ ಇರಾನ್ ಹಡಗನ್ನು ನಿಲ್ಲಿಸಿದೆ. ನೌಕಾಪಡೆ ತಂಡ 12 ಗಂಟೆ ಬಿರುಸಿನ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಶರಣಾಗುವಂತೆ ಒತ್ತಡ ಹಾಕಿದೆ. ಬಳಿಕ ಐಎನ್‌ಎಸ್ ತ್ರಿಶೂಲ್ ಸಹಾಯದಿಂದ ಅವರ ಹಡಗನ್ನು ದರೋಡೆಕೋರರಿಂದ ರಕ್ಷಣೆ ಮಾಡಿ 9 ಕಡಲ್ಗಳ್ಳರನ್ನ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಭಾರತೀಯ ನೌಕಪಡೆಯು ಸೋಮಾಲಿಯಾದ ಕಡಲ್ಗಳರನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದೆ. ಕಡಲ್ಗಳ್ಳರಿಂದ 23 ಪಾಕಿಸ್ತಾನದ ಪ್ರಜೆಗಳನ್ನು ರಕ್ಷಣೆ ಮಾಡಿದೆ. ಅರೇಬಿಯನ್ ಸಮುದ್ರದಲ್ಲಿ ಭದ್ರತಾ ಕಾರ್ಯಾಚರಣೆಗಾಗಿ ನಿಯೋಜಿಸಲಾದ 2 ಭಾರತೀಯ ನೌಕಾಪಡೆ ಹಡಗುಗಳು ನಿರಂತರ ಕಾರ್ಯಚರಣೆ ಮಾಡಿ ಅಪಹರಣಕ್ಕೊಳಗಾವರನ್ನು ರಕ್ಷಣೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಲಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭ ಆಗಿದ್ದಾಗಿನಿಂದ, ಸೊಮಾಲಿ ಕಡಲ್ಗಳ್ಳರು ಅರೇಬಿಯನ್ ಸಮುದ್ರದಲ್ಲಿ ಹಡಗುಗಳನ್ನು ಅಪಹರಿಸುವುದನ್ನು ಹೆಚ್ಚು ಮಾಡಿದ್ದಾರೆ. ಹೀಗಾಗಿ ಇಂತಹ ಕೇಸ್​ಗಳನ್ನ ತಡೆಯಲು ಅರಬ್ಬಿ ಸಮುದ್ರದಲ್ಲಿ ಯುದ್ಧನೌಕೆಗಳನ್ನ ಭಾರತೀಯ ನೌಕಾಪಡೆ ನಿಯೋಜನೆ ಮಾಡಿ ಹದ್ದಿನ ಕಣ್ಣು ನೆಟ್ಟಿದೆ ಎಂದು ಹೇಳಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತೀಯ ನೌಕಾಪಡೆಯಿಂದ ಮಾನವೀಯತೆ.. ಕಡಲ್ಗಳ್ಳರಿಂದ ಪಾಕ್​ನ 23 ಜನರ ರಕ್ಷಣೆ

https://newsfirstlive.com/wp-content/uploads/2024/03/INDIAN_NAVY_2.jpg

Load More