ಹುದ್ದೆಗಳ ಭರ್ತಿಗೆ ಮುಂದಾದ ಭಾರತೀಯ ನೌಕಾಪಡೆ.. ಈ ಕೆಲಸಗಳಿಗೆ ನೀವೂ ಅರ್ಜಿ ಸಲ್ಲಿಸಬಹುದಾ?

author-image
Bheemappa
Updated On
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ನಡೆಸಬೇಕು.. ಉದ್ಯೋಗಾಕಾಂಕ್ಷಿಗಳು ಏನೇನು ಮಾಡಬೇಕು?
Advertisment
  • ಅರ್ಜಿ ಶುಲ್ಕ, ವೇತನ ಶ್ರೇಣಿ, ವಿದ್ಯಾರ್ಹತೆ ಇತರೆ ಮಾಹಿತಿ ಇದೆ
  • ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಒಂದು ಅವಕಾಶ
  • ಯಾವ್ಯಾವ ಉದ್ಯೋಗಗಳನ್ನು ನೌಕಾಪಡೆ ಭರ್ತಿ ಮಾಡುತ್ತಿದೆ?

ಭಾರತೀಯ ನೌಕಾಪಡೆಯು ಎಸ್‌ಎಸ್‌ಆರ್‌ ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತರು ಈ ಕೆಲಸಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಂಡು ಅರ್ಜಿ ಸಲ್ಲಿಕೆಗೆ ಮುಂದಾಗಬಹುದು. ಕೊನೆ ದಿನಾಂಕದ ಮಾಹಿತಿ ಸೇರಿ ಹುದ್ದೆಗಳ ವಿವರವಾದ ಮಾಹಿತಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಎತ್ತರ ಕನಿಷ್ಠ 157 ಸೆ.ಮೀ. ಇರಲೇಬೇಕು.

ಎಸ್​ಎಸ್​ಆರ್​ ವೈದ್ಯಕೀಯ ಸಹಾಯಕ ಹುದ್ದೆಗೆ ಅಧಿಸೂಚನೆಯನ್ನು ಭಾರತೀಯ ನೌಕಾಪಡೆ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಷ್ಟು ಉದ್ಯೋಗಗಳು, ಅರ್ಜಿ ಶುಲ್ಕ, ವೇತನ ಶ್ರೇಣಿ, ಆರಂಭ, ಕೊನೆಯ ದಿನಾಂಕ, ಉದ್ಯೋಗದ ಹೆಸರು ಸೇರಿ ಎಲ್ಲ ಮಾಹಿತಿ ನೀಡಲಾಗಿರುತ್ತದೆ. ಗಂಭೀರತೆಯಿಂದ ಇದನ್ನು ಮನನ ಮಾಡಿಕೊಳ್ಳಿ. ಜೀವನಕ್ಕೆ ಒಂದು ಹುದ್ದೆ ಪಡೆದುಕೊಳ್ಳಲು ಪ್ರಯತ್ನಿಸಿ, ಸಕ್ಸಸ್ ಆಗಿ.

ಹುದ್ದೆ ಹೆಸರು: ಎಸ್‌ಎಸ್‌ಆರ್ ಮೆಡಿಕಲ್ ಅಸಿಸ್ಟೆಂಟ್

ಎಷ್ಟು ಉದ್ಯೋಗಗಳು- ಮಾಹಿತಿ ಇಲ್ಲ

ವಿದ್ಯಾರ್ಹತೆ: ದ್ವಿತೀಯ ಪಿಯುಸಿ (ಪಿಯುಸಿ ಅಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಬಯೋಲಜಿ ವಿಷಯಗಳಲ್ಲಿ, ಶೇಕಡ 50 ರಷ್ಟು ಅಂಕಗಳೊಂದಿಗೆ ಪಾಸ್‌)

ಇದನ್ನೂ ಓದಿ:ಉದ್ಯೋಗ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಿದ ಕರ್ನಾಟಕ ಬ್ಯಾಂಕ್.. ಯಾರಿಗೆ ಅವಕಾಶ?

publive-image

ವೇತನ ಶ್ರೇಣಿ- ತರಬೇತಿಯಲ್ಲಿ 14,600 ರೂಪಾಯಿ
ತರಬೇತಿ ಮುಗಿದ ನಂತರ- 21,700 ದಿಂದ 68,100 ರೂಪಾಯಿ

ಅರ್ಜಿ ಶುಲ್ಕ- 550 ರೂಪಾಯಿ ಇದೆ

ವಯೋಮಿತಿ ಹೇಗಿದೆ- 17.5 ವರ್ಷಗಳಿಂದ 23 ವರ್ಷಗಳು

ಆಯ್ಕೆ ಪ್ರಕ್ರಿಯೆ-

  • ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌
  • ಫಿಸಿಕಲ್ ಫಿಟ್‌ನೆಸ್‌ ಟೆಸ್ಟ್‌,
  • ಲಿಖಿತ ಪರೀಕ್ಷೆ,
  • ವೈದ್ಯಕೀಯ ಪರೀಕ್ಷೆ

ಉದ್ಯೋಕ್ಕೆ ಸಂಬಂಧಿಸಿದ ದಿನಾಂಕಗಳಿ ಈ ಕೆಳಗಿನಂತೆ ಇವೆ

ನೋಟಿಫಿಕೇಶನ್ ರಿಲೀಸ್ ಮಾಡಲಾದ ದಿನಾಂಕ- 20 ಮಾರ್ಚ್​
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 29 ಮಾರ್ಚ್
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 10 ಏಪ್ರಿಲ್

ಉದ್ಯೋಗದ ಸಂಪೂರ್ಣ ಮಾಹಿತಿ-
https://www.joinindiannavy.gov.in/files/SSR_Med_English.pdf

ಮಾಹಿತಿಗಾಗಿ-https://www.joinindiannavy.gov.in/en/page/ssr-medical-asst.html

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment