/newsfirstlive-kannada/media/post_attachments/wp-content/uploads/2024/08/SUNITA-3.jpg)
ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಭೂಮಿಗೆ ವಾಪಸ್ಗೆ NASA ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಈ ಮಧ್ಯೆ ಸುನಿತಾ ವಿಲಿಯಮ್ಸ್ ಡೇಂಜರ್ ಝೋನ್ನಲ್ಲಿದ್ದು, ಮುಂದಿನ 14 ದಿನದೊಳಗೆ ಭೂಮಿಗೆ ವಾಪಸ್ ಕರೆತರಲೇಬೇಕಿದೆ.
ಸಂದಿಗ್ಧತೆ, ಒತ್ತಡಕ್ಕೆ ಸಿಲುಕಿರುವ ನಾಸಾ ಸತತ ಪ್ರಯತ್ನ ಮಾಡುತ್ತಿದ್ದು, ಆಗಸ್ಟ್ 19-20 ರೊಳಗೆ ಭೂಮಿಗೆ ವಾಪಸ್ ಕರೆತರಲೇಬೇಕಾಗಿದೆ. ಒಂದು ದಿನ ಹೆಚ್ಚಾದ್ರೂ ಗಗನಯಾನಿಗಳ ಪ್ರಾಣಕ್ಕೆ ಕಂಟಕವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:Good News.. ಸುನಿತಾ ವಿಲಿಯಮ್ಸ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ NASA
ನಾಸಾ ಮುಂದಿರುವ ಆಯ್ಕೆಗಳೇನು?
- ಹೆಚ್ಚಿನ ಸಂಖ್ಯೆಯಲ್ಲಿ ಹಿಲಿಯಂ ಸಿಸ್ಟಮ್ನಲ್ಲಿ ಸೋರಿಕೆಯಾಗಿದ್ರಿಂದ ಸ್ಟಾರ್ ಲೈನರ್ ಸ್ಯಾಟ್ಲೈನ್ನಲ್ಲಿ ವಾಪಸ್ ಬರಕ್ಕಾಗಲ್ಲ
- ಆಗಸ್ಟ್ 19 ಮತ್ತು 20ರೊಳಗೆ ಸುನಿತಾಳರನ್ನ ಕರೆತರಲು ಬೇರೆ ರಾಕೆಟ್ ಉಡಾವಣೆ ಮಾಡಲು ನಾಸಾ ಮುಂದಾಗಿದೆ
- ಆಗಸ್ಟ್ 19 ರಂದು SPACE Xನಿಂದ ಬೇರೆ ರಾಕೆಟ್ ಉಡಾವಣೆ ಮಾಡಲು ನಾಸಾ ಪ್ಲ್ಯಾನ್- ಅನಿವಾರ್ಯ ಕೂಡ
- ರಾಕೆಟ್ ಉಡಾವಣೆಯಾದ ಐದರಿಂದ-ಆರು ಗಂಟೆಯೊಳಗೆ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ ರೀಚ್ ಆಗಲಿದೆ/ಆಗಲೇಬೇಕು
- ನಂತರ ಈ ಸ್ಯಾಟ್ ಮೂಲಕ ಸುನಿತಾರನ್ನ ಕರೆತರುವ ಲೆಕ್ಕಾಚಾರಲ್ಲಿ ನಾಸಾ ಇದೆ
- ರಾಕೆಟ್ ಉಡಾವಣೆಯಲ್ಲಿ ಒಂದು ದಿನ ತಡವಾದ್ರೂ ಸುನಿತಾ ವಿಲಿಯಮ್ಸ್ ಪ್ರಾಣಕ್ಕೆ ಕಂಟಕ
- ವೆದರ್ ಕಂಡೀಷನ್, ಟೆಕ್ನಿಕಲ್ ಸಮಸ್ಯೆಯಿಂದ ಕೆಲವೊಮ್ಮೆ ಸ್ಯಾಟ್ಲೈಟ್ ಲಾಂಚ್ ಮಾಡೋಕ್ಕಾಗಲ್ಲ
- ಈ ರೀತಿಯಲ್ಲಿ ತೊಂದ್ರೆಯಾಗದಂತೆ ನೋಡಿಕೊಳ್ಳಬೇಕಾದ ಒತ್ತಡ ನಾಸಾ ಮೇಲಿದೆ
- ಇದೀಗ ಡೆಡ್ ಲೈನ್ ಇಟ್ಟು ಕೆಲಸ ಮಾಡಲೇಬೇಕಾದ ಒತ್ತಡದಲ್ಲಿ ನಾಸಾ ಇದೆ
ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6 ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. 5 ಥ್ರಸ್ಟರ್‌ಗಳಲ್ಲಿ ದೋಷ ಕಂಡುಬಂದಿದೆ. ಬಟ್ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ. ನೌಕೆಯಲ್ಲಿ 45 ದಿನಕ್ಕಾಗುವಷ್ಟು ಇಂಧನ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಇಂಧನ ಸೋರಿಕೆಯಾದ್ರೆ ಮುಂದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಯಾವಾಗ ಬರುತ್ತಾರೆ..? ಅಪ್ಡೇಟ್ ಕೊಟ್ಟ NASA
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ