/newsfirstlive-kannada/media/post_attachments/wp-content/uploads/2025/07/crime-story1.jpg)
ಅಮೆರಿಕಾದಲ್ಲಿ ಭಾರತ ಮೂಲದ ಮಕ್ಕಳ ತಜ್ಞ ವೈದ್ಯೆ ಡಾಕ್ಟರ್ ನೇಹಾ ಗುಪ್ತಾ ವಿರುದ್ಧ ತನ್ನ 4 ವರ್ಷದ ಮಗಳನ್ನೇ ಉಸಿರುಗಟ್ಟಿಸಿ ಕೊಂದ ಆರೋಪ ಕೇಳಿ ಬಂದಿದೆ. ಬಳಿಕ 4 ವರ್ಷದ ಮಗಳು ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ವೈದ್ಯೆ ಯತ್ನಿಸಿದ್ದಾಳೆ. ಆದರೇ, ವೈದ್ಯೆಯ ಹೇಳಿಕೆಯನ್ನು ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಸುಳ್ಳಾಗಿಸಿದೆ.
ಹೀಗೆ ತಾನು ಹೆತ್ತ ಮಗುವನ್ನು ತಾಯಿಯೇ ಕೊಲ್ಲಲು ಕಾರಣವಾಗಿದ್ದು ಪತಿಯ ಜೊತೆಗಿನ ಜಗಳ, ಡಿವೋರ್ಸ್ ಹಾಗೂ ಕೋರ್ಟ್ ಆದೇಶ. ಹೌದು, ಅಮೆರಿಕಾದ ಒಕ್ಲಹೋಮಾದ 36 ವರ್ಷದ ಮಕ್ಕಳ ತಜ್ಞ ವೈದ್ಯೆ ಡಾಕ್ಟರ್ ನೇಹಾ ಗುಪ್ತಾ, ತನ್ನ 4 ವರ್ಷದ ಮಗಳು ಅರಿಯಾ ತಲಥಿಯನ್ನು ಪ್ಲೋರಿಡಾಗೆ ಕರೆದೊಯ್ದಿದ್ದಾಳೆ. ಅಲ್ಲಿ ಬಾಡಿಗೆ ರೂಂ ಪಡೆದು ವಾಸಿಸುವಾಗ, ಹೋಟೇಲ್‌ನ ಸ್ವಿಮ್ಮಿಂಗ್ ಫೂಲ್​ನಲ್ಲಿ ಮಗಳು ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಬಳಿಕ ಮಗುವನ್ನು ಪ್ಲೋರಿಡಾದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/07/crime-story.jpg)
ಆದರೆ ಬಳಿಕ ಮಗುವಿನ ಮರಣೋತ್ತರ ಪರೀಕ್ಷೆಯನ್ನು ವೈದ್ಯರು ನಡೆಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಶ್ವಾಸಕೋಶ, ಹೊಟ್ಟೆಯಲ್ಲಿ ನೀರು ಪತ್ತೆಯಾಗಿಲ್ಲ. ಇದರಿಂದಾಗಿ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂಬ ವಾದಕ್ಕೆ ಯಾವುದೇ ಪುಷ್ಟಿ, ಸಾಕ್ಷ್ಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಿಕ್ಕಿಲ್ಲ. ಆದರೇ, ಮಗುವಿನ ಬಾಯಿಯೊಳಗೆ ಗಾಯಗಳು ಪತ್ತೆಯಾಗಿವೆ. ಜೊತೆಗೆ ಕೆನ್ನೆಯ ಮೇಲೆ ಏಟಿನ ಗುರುತು ಕಂಡು ಬಂದಿವೆ. ದೇಹದ ಮೇಲೆ ಕಂಡು ಬಂದಿರುವ ಈ ಗಾಯಗಳು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಕ್ಕೆ ಪೂರಕವಾಗಿ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಮಗುವನ್ನು ಸ್ವಿಮ್ಮಿಂಗ್ ಫೂಲ್‌ಗೆ ಹಾಕುವ ಮುನ್ನ ಉಸಿರುಗಟ್ಟಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಗುವನ್ನು ಸ್ವಿಮ್ಮಿಂಗ್ ಫೂಲ್​ನಲ್ಲಿ ಮುಳುಗುವುದನ್ನು ಪ್ರದರ್ಶಿಸುವ ಮೂಲಕ ನೇಹಾ ಗುಪ್ತಾ, ಕೊಲೆಯನ್ನು ಮರೆ ಮಾಚಲು ಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ನೇಹಾ ಗುಪ್ತಾ ಹಾಗೂ ಪತಿ ಡಾಕ್ಟರ್ ಸೌರಭ್ ತಲಥಿ ಡಿವೋರ್ಸ್ ಪಡೆದಿದ್ದಾರೆ. ಮಗಳ ಕಸ್ಟಡಿಗೆ ಸಂಬಂಧಿಸಿದಂತೆ ಇಬ್ಬರು ಕೋರ್ಟ್ ನಲ್ಲಿ ಹೋರಾಟ ನಡೆಸಿದ್ದಾರೆ. ಮಗಳ ಕಸ್ಟಡಿಯನ್ನು ಪತಿ ಡಾಕ್ಟರ್ ಸೌರಭ್ ತಲಥಿಗೆ ನೀಡಬೇಕೆಂದು ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶವನ್ನು ಒಪ್ಪಿಕೊಂಡು ಪಾಲಿಸಲಾಗದೇ, ಮಗಳನ್ನು ಪತಿಯ ವಶಕ್ಕೆ ನೀಡಲಾಗದೇ, ತಾಯಿಯೇ ಮಗಳನ್ನು ಈ ರೀತಿ ಹತ್ಯೆಗೈದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪತಿ ಸೌರಭ್ ತಲಥಿಗೆ, ನೇಹಾ ಗುಪ್ತಾ, ಪ್ಲೋರಿಡಾಗೆ ಭೇಟಿ ನೀಡುವ ವಿಷಯ ತಿಳಿದಿರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ನೇಹಾ ಗುಪ್ತಾ ಪರ ವಕೀಲ ರಿಚರ್ಡ್ ಕೂಪರ್, ನೇಹಾಗೆ ಪರಾರಿಯಾಗುವ ಸಾಕಷ್ಟು ಅವಕಾಶಗಳಿದ್ದವು. ಆದರೇ, ನೇಹಾ ಪೊಲೀಸರ ತನಿಖೆಗೆ ಸಹಕರಿಸಿದ್ದಾರೆ. ಎಲ್ಲ ಪ್ರಶ್ನೆಗೂ ಉತ್ತರಿಸಿದ್ದಾರೆ. ಪೊಲೀಸರಿಂದ ನೇಹಾಗೆ ದ್ರೋಹವಾಗಿದೆ. ಪೊಲೀಸರು ಒತ್ತಡಕ್ಕೊಳಗಾಗಿ ನೇಹಾ ಗುಪ್ತಾರನ್ನು ಆರೋಪಿಯನ್ನಾಗಿ ಮಾಡಿದ್ದಾರೆ. ತನ್ನ ಮಗಳನ್ನು ತಾನೇ ಕೊಲ್ಲುತ್ತಾಳೆ ಎಂಬುದನ್ನು ಊಹಿಸಲಾಗಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us