/newsfirstlive-kannada/media/post_attachments/wp-content/uploads/2025/02/KASH_PATEL-1.jpg)
ಅಮೆರಿಕದ ಫೆಡರಲ್ ಬ್ಯೂರೋ ಆಫ್ ತನಿಖಾ ಸಂಸ್ಥೆ (ಎಫ್‌ಬಿಐ)ಗೆ ಭಾರತದ ಗುಜರಾತ್ ಮೂಲದ ಕಾಶ್ ಪಟೇಲ್ ಅವರು 9ನೇ ನಿರ್ದೇಶಕರಾಗಿ ನೇಮಕಗೊಂಡ ಬೆನ್ನಲ್ಲೇ ಇಂದು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಐಸೆನ್‌ಹೋವರ್ ಕಾರ್ಯನಿರ್ವಾಹಕ ಕಚೇರಿ ಕಟ್ಟಡದಲ್ಲಿ ಯುಎಸ್ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರಿಂದ ಕಾಶ್ ಪಟೇಲ್ ಪ್ರಮಾಣ ವಚನ ತೆಗೆದುಕೊಂಡರು.
ಯುಎಸ್ ಸೆನೆಟ್ ಒಂಬತ್ತನೇ ಎಫ್‌ಬಿಐ ನಿರ್ದೇಶಕರಾಗಿ ಕಾಶ್ ಪಟೇಲ್ ಅವರು 51 ಮತಗಳಿಂದ ಆಯ್ಕೆ ಆಗಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಅಟಾರ್ನಿ ಜನರಲ್ ಅವರು ಇವತ್ತು ಪ್ರಮಾಣ ವಚನ ಬೋಧಿಸಿದರು. ಮೂಲತಹ ಗುಜರಾತ್ ಮೂಲದವರು ಆದ ಕಾಶ್ ಪಟೇಲ್ ಪ್ರಮಾಣ ವಚನ ತೆಗೆದುಕೊಳ್ಳುವಾಗ ಭಾರತ ಸಂಸ್ಕೃತಿಯ ಪವಿತ್ರ ಗ್ರಂಥ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಬಳಿಕ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಗೆಳತಿ ಹಾಗೂ ಕುಟುಂಬಸ್ಥರು, ಕೆಲ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.
ಇದನ್ನೂ ಓದಿ: ಕರ್ನಾಟಕದ ಈ ಜಲಾಶಯದ ನೀರಿನ ಮೇಲೆ ನೆರೆ ರಾಜ್ಯದ ಕಣ್ಣು.. ಎಷ್ಟು TMC ನೀರು ಕೇಳಿದೆ ಗೊತ್ತಾ?
ಕಾಶ್ ಪಟೇಲ್ ಮಾತನಾಡಿ, ಎಫ್‌ಬಿಐ ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಮುಖ ತನಿಖಾ ಸಂಸ್ಥೆ ಆಗಿದೆ. ಅಮೆರಿಕನ್ನರ ಕನಸು ಜೀವಂತಗೊಳಿಸಲಾಗುವುದು. ಅಮೆರಿಕದವರ ಕನಸು ಸತ್ತಿದೆ ಎಂದು ಯಾರಾದರೂ ಭಾವಿಸಿದರೆ ಅದು ಸುಳ್ಳು. ಈ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಲಾಗುವುದು. ಈ ಭೂಮಿಯ ಮೇಲಿನ ಬಲಿಷ್ಠ ಹಾಗೂ ಶ್ರೇಷ್ಠ ರಾಷ್ಟ್ರದ ಕಾನೂನು ಸಂಸ್ಥೆಯನ್ನು ಇನ್ಮುಂದೆ ಭಾರತೀಯ ಮುನ್ನಡೆಸುತ್ತಾನೆ. ಎಫ್‌ಬಿಐ ಹೊರಗೆ ಮತ್ತು ಒಳಗೆ ಹೊಣೆಗಾರಿಕೆ ಇರುತ್ತದೆ ಎಂದು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ಎಫ್‌ಬಿಐ ಹುದ್ದೆಗೆ ಕಾಶ್ ಪಟೇಲ್ರನ್ನು ಶ್ಲಾಘಿಸಿದರು. ಕಾಶ್ ಕಠಿಣ ಮತ್ತು ಬಲವಾದ ವ್ಯಕ್ತಿ. ಸಂಸ್ಥೆಯ ಕುರಿತು ತಮ್ಮದೇ ಆದ ಉತ್ತಮ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅವರು ಎಫ್‌ಬಿಐ ಮುಖ್ಯಸ್ಥರಾಗಿ ಸಮರ್ಥವಾಗಿ ಕೆಲಸ ಮಾಡುತ್ತಾರೆ. ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
BREAKING
We did it!!!!!! @Kash_Patel is President @realDonaldTrump’s Director of the FBI. @PamBondipic.twitter.com/grVqDRlsnP
— Sebastian Gorka DrG (@SebGorka)
BREAKING
We did it!!!!!! @Kash_Patel is President @realDonaldTrump’s Director of the FBI. @PamBondipic.twitter.com/grVqDRlsnP— Sebastian Gorka DrG (@SebGorka) February 21, 2025
">February 21, 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ