ಹುಟ್ಟೂರಲ್ಲಿ ಚಿತಾಭಸ್ಮ ಬಿಡು ಎಂದಿದ್ದ ಪತ್ನಿ.. ಕೊನೆ ಆಸೆ ಈಡೇರಿಸಲು ಲಂಡನ್​​ನಿಂದ ಬಂದ ಗಂಡ ದುರಂತ ಅಂತ್ಯ

author-image
Bheemappa
Updated On
ಹುಟ್ಟೂರಲ್ಲಿ ಚಿತಾಭಸ್ಮ ಬಿಡು ಎಂದಿದ್ದ ಪತ್ನಿ.. ಕೊನೆ ಆಸೆ ಈಡೇರಿಸಲು ಲಂಡನ್​​ನಿಂದ ಬಂದ ಗಂಡ ದುರಂತ ಅಂತ್ಯ
Advertisment
  • ತಂದೆ, ತಾಯಿನ ಕಳೆದುಕೊಂಡ ಇಬ್ಬರು ಬಾಲಕಿಯರು ಅನಾಥ
  • ಹೆಂಡತಿ ಕೊನೆ ಆಸೆ ಪೂರೈಸಿದ್ದ ಗಂಡ ವಿಮಾನದಲ್ಲಿ ಉಳಿಯಲಿಲ್ಲ
  • ತಾಯಿ ಕಾಲವಾದ ವಾರದ ಅಂತರದಲ್ಲೇ ತಂದೆ ದುರಂತ ಅಂತ್ಯ

ಗಾಂಧಿನಗರ: ಅಹಮದಾಬಾದ್​ನಿಂದ ಲಂಡನ್​ಗೆ ಹೊರಟ್ಟಿದ್ದ ವಿಮಾನದಲ್ಲಿ 240ಕ್ಕೂ ಹೆಚ್ಚು ಪ್ರಯಾಣಿಕರು ಕೊನೆಯುಸಿರೆಳೆದಿದ್ದಾರೆ. ಇದರಲ್ಲಿ ಕರುಳು ಹಿಂಡುವ ಸಂಗತಿ ಎಂದರೆ ಹೆಂಡತಿ ಆಸೆಯಂತೆ ಹುಟ್ಟೂರಲ್ಲಿ ಅಸ್ತಿ ಬಿಡಲು ಬಂದಿದ್ದ ವ್ಯಕ್ತಿಯೊಬ್ಬರು ವಿಮಾನದಲ್ಲಿ ಸಜೀವ ದಹನಗೊಂಡಿದ್ದಾರೆ.

ಅರ್ಜುನ್ ಮನುಭಾಯ್ ಪಟೋಲಿಯಾ (36) ಯುನೈಟೆಡ್​ ಕಿಂಗ್​​ಡಮ್ (ಯುಕೆ) ಮೂಲದ ಭಾರತೀಯ ವ್ಯಕ್ತಿ. ಒಂದು ವಾರದ ಹಿಂದೆ ಇವರ ಹೆಂಡತಿ ಭಾರತಿಬೆನ್ ಅವರು ಪ್ರಾಣ ಬಿಟ್ಟಿದ್ದರು. ಸಾಯುವುದಕ್ಕೂ ಮೊದಲು ನನ್ನ ಚಿತಾಭಸ್ಮವನ್ನು ನನ್ನ ಹುಟ್ಟೂರಿನಲ್ಲಿ ಬಿಡುವಂತೆ ಗಂಡನಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ಹೆಲಿಕಾಪ್ಟರ್, ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ದೇಶದ ಹಾಲಿ, ಮಾಜಿ ಸಿಎಂಗಳ ಪಟ್ಟಿ ಇಲ್ಲಿದೆ..

publive-image

ಹೀಗಾಗಿ ಹೆಂಡತಿ ಕೊನೆಯ ಆಸೆಯಂತೆ ಅರ್ಜುನ್, ಯುಕೆ ಇಂದ ಭಾರತಕ್ಕೆ ಬಂದಿದ್ದರು. ಗುಜರಾತ್​ನ ಅಮ್ರೇಲಿಯ ವಾಡಿಯಾ ಎಂಬ ಹೆಂಡತಿಯ ಪೂರ್ವಜ ಗ್ರಾಮಕ್ಕೆ ಬಂದು ಅಲ್ಲಿದ್ದ ಸಂಬಂಧಿಗಳೊಂದಿಗೆ ಅಂತಿಮ ವಿಧಾನಗಳನ್ನು ಪೂರೈಸಿದ್ದರು. ನರ್ಮದಾ ನದಿಯಲ್ಲಿ ಹೆಂಡತಿಯ ಚಿತಾಭಸ್ಮ ಬಿಟ್ಟು ಲಂಡನ್​ನಲ್ಲಿದ್ದ 4 ಮತ್ತು 8 ವರ್ಷದ ತನ್ನ ಹೆಣ್ಣು ಮಕ್ಕಳ ಬಳಿಗೆ ಮರಳುತ್ತಿದ್ದರು.

ಎರಡು ಮಕ್ಕಳ ತಂದೆಯಾದ ಪಟೋಲಿಯಾ, ಏರ್ ಇಂಡಿಯಾ ವಿಮಾನ AI171 ನಲ್ಲಿ ಲಂಡನ್​​ಗೆ ಹಿಂತಿರುಗುತ್ತಿದ್ದರು. ಆದರೆ ಭಾರತದ ಗಡಿ ದಾಟುವ ಮೊದಲೇ ಅಹಮದಾಬಾದ್​ನ ಬಳಿ ವಿಮಾನ ದೊಡ್ಡ ದುರಂತಕ್ಕೆ ಒಳಗಾಗಿದೆ. ಇದರಲ್ಲಿ ಅವರು ಜೀವ ಕಳೆದುಕೊಂಡಿದ್ದು ಯಾರು ಎಂಬುದೇ ಗುರುತಿಸಲು ಆಗುತ್ತಿಲ್ಲ. ತಾಯಿಯನ್ನ ಕಳೆದುಕೊಂಡು ನೋವಿನಲ್ಲಿದ್ದ ಆ ಹೆಣ್ಣುಮಕ್ಕಳ್ಳಿಗೆ ಈಗ ತಂದೆಯೂ ಇಲ್ಲ ಎನ್ನುವ ಮತ್ತೊಂದು ಆಘಾತವಾಗಿದೆ ಎಂದು ಅರ್ಜುನ್ ಅವರ ಅಳಿಯ ಕ್ರಿಶ್​ ಜಗದೀಶ್​ ಎನ್ನುವರು ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment