/newsfirstlive-kannada/media/post_attachments/wp-content/uploads/2024/11/LUCKY-DRAW-SINGAPORE.jpg)
ಲಕ್ ಅನ್ನೋದು ಒಮ್ಮೆ ಹೊಡೆದ್ರೆ ಅದೃಷ್ಟ ಲಕ್ಷ್ಮೀಯೇ ಕಾಲು ಮುರಿದುಕೊಂಡು ಮನೆಯೊಳಗೆ ಬೀಳಬೇಕು ಹಾಗೆ ಹೊಡೆಯುತ್ತೆ. ಅದೃಷ್ಟವೇ ಹಾಗೆ ಯಾವುದೇ ಸೂಚನೆ ಕೊಡದೆ ನುಸುಳಿಕೊಂಡು ಬದುಕಿನೊಳಕ್ಕೆ ಬಂದು ನಮಗೆ ಸರ್ಪ್ರೈಸ್ ಕೊಡುತ್ತೆ. ಹೀಗೆ ಅದೃಷ್ಟ ದೇವತೆ ಏಕಾಏಕಿ ಮನೆಗೆ ಬಂದ ಪರಿಣಾಮ ಭಾರತೀಯ ಮೂಲದ ಸಿಂಗಾಪೂರ್ ನಿವಾಸಿ ರಾತ್ರೋ ರಾತ್ರಿ ಕರೋಡಪತಿಯಾಗಿದ್ದಾರೆ.
ಲಕ್ಕಿ ಡ್ರಾನಲ್ಲಿ ವಿಜಯಗೊಳ್ಳುವ ಮೂಲಕ ಭಾರತೀಯ ಮೂಲದ ಸಿಂಗಪೂರ್ ನಿವಾಸಿ ಬಾಲಸುಬ್ರಮಣ್ಯಂ ಚಿದಂಬರಂ ಅವರು ದಿನ ಬೆಳಗಾಗುವದರೊಳಗೆ ಕರೋಡ್ಪತಿ ಯಾಗಿದ್ದಾರೆ. ಲಕ್ಕಿ ಡ್ರಾವೊಂದರಲ್ಲಿ ಸುಮಾರು ಹತ್ತು ಲಕ್ಷ ಯುಎಸ್ ಡಾಲರ್ ಅಂದ್ರೆ ಬಾರತೀಯರ ರೂಪಾಯಿಯಲ್ಲಿ 8 ಕೋಟಿ ರೂಪಾಯಿ ಹಣವನ್ನು ಗೆದ್ದು ಬೀಗಿದ್ದಾರೆ. ಈ ಸಂಭ್ರಮಕ್ಕೆ ಕಾರಣ ಅಂದ್ರೆ ಅವರ ಪತ್ನಿಗಾಗಿ ಮೂರು ತಿಂಗಳ ಹಿಂದೆ ಅವರು ಖರೀದಿಸಿದ್ದ ಚಿನ್ನದ ಸರ.
ಇದನ್ನೂ ಓದಿ: 2007ರ ಘಟನೆಗೆ ಮತ್ತೆ ಕ್ಷಮೆ ಕೇಳಿದ ರಷ್ಯಾದ ಅಧ್ಯಕ್ಷ! ಅಂದು ನಡೆದ ಸಭೆಯಲ್ಲಿ ವಿವಾದ ಹುಟ್ಟಿಸಿತ್ತು ಒಂದು ಶ್ವಾನ!
ಬಾಲಸುಬ್ರಮಣ್ಯಂ ಚಿದಂಬರಂ ಅವರು ಕಳೆದ 21 ವರ್ಷಗಳಿಂದ ಸಿಂಗಾಪೂರ್ನಲ್ಲಿ ಪ್ರಾಜೆಕ್ಟ್ ಇಂಜನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನವೆಂಬರ್ 24 ರಂದು ಮುಸ್ತಫಾ ಜ್ಯುವೆಲರ್ಸ್ ಏರ್ಪಡಿಸಿದ್ದ ಲಕ್ಕಿ ಡ್ರಾ ಕಂಟೆಸ್ಟಂಟ್ನಲ್ಲಿ ಬಾಲಸುಬ್ರಮಣ್ಯಂ ಚಿದಂಬರಂ ಅವರಿಗೆ 8 ಕೋಟಿ ರೂಪಾಯಿ ಒಲಿದು ಬಂದಿದೆ.
ಇದನ್ನೂ ಓದಿ:ಈ ಪಟ್ಟಣದಲ್ಲಿ ಇಂಟರ್ನೆಟ್ ಇಲ್ಲ… ಫೋನ್ ಇಲ್ಲ.. ವೈಫೈ ಇಲ್ಲ.. ಮೈಕ್ರೋವೇವ್ ಕೂಡ ಇಲ್ಲ!ಕಾರಣವೇನು?
ಲಕ್ಕಿ ಡ್ರಾ ಇದು ಮುಸ್ತಾಫಾ ಜ್ಯುವೆಲ್ಸರ್ಸ್ನ ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಂದು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಿವಿಲ್ ಸರ್ವಿಸ್ ಕ್ಲಬ್ನಲ್ಲಿ ಲಕ್ಕಿ ಡ್ರಾ ವಿಜೇತರನ್ನು ಆರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅವರ ಜ್ಯುವೆಲರ್ಸ್ನಲ್ಲಿ ಯಾರು 250 ಯುಎಸ್ ಡಾಲರ್ ಮೌಲ್ಯದ ಚಿನ್ನಾಭರಣಗಳನ್ನು ಕೊಂಡಿರುತ್ತಾರೋ ಅವರು ಲಕ್ಕಿ ಡ್ರಾದಲ್ಲಿ ಬಹುಮಾನ ಪಡೆಯುವ ಅರ್ಹತೆಯನ್ನು ಪಡೆಯುತ್ತಾರೆ. ಮೂರು ತಿಂಗಳ ಹಿಂದೆ ಚಿದಂಬರಂ ತಮ್ಮ ಪತ್ನಿಗಾಗಿ 600 ಯುಎಸ್ ಡಾಲರ್ ಖರ್ಚು ಮಾಡಿ ಒಂದು ಚಿನ್ನದ ಸರ ಖರೀದಿ ಮಾಡಿದ್ದರು.
View this post on Instagram
ಇನ್ನು ಲಕ್ಕಿ ಡ್ರಾನಲ್ಲಿ 8 ಕೋಟಿ ರೂಪಾಯಿ ವಿಜೇತರಾಗಿ ಹೊರಹೊಮ್ಮಿದ ಚಿದಂಬರಂಗೆ ಮುಕಸ್ತಾಫಾ ಜ್ಯುವೆಲರ್ಸ್ ವಿಡಿಯೋ ಕಾಲ್ ಮಾಡಿ ಶುಭಾಶಯ ತಿಳಿಸಿದಾಗ ಅವರು ಭಾವುಕರಾಗಿ ಹೋಗಿದ್ದರು. ಇಂದು ನನ್ನ ತಂದೆಯ ನಾಲ್ಕನೇಯ ಪುಣ್ಯಾರಾಧನೆ ಇಂದೇ ನನಗೆ ಈ ಪ್ರೈಜ್ ಬಂದಿದ್ದ ಸಾಕಷ್ಟು ಖುಷಿಯನ್ನು ತಂದಿದೆ. ಇದು ನನ್ನ ತಂದೆಯ ಆಶೀರ್ವಾದ ಎಂದು ನಾನು ತಿಳಿದಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ