newsfirstkannada.com

23 ವರ್ಷಗಳ ಸೆರೆವಾಸ.. ಪಾಕಿಸ್ತಾನದಲ್ಲಿ ಸರಬ್ಜಿತ್ ಸಿಂಗ್ ಹಂತಕನ ಗುಂಡಿಕ್ಕಿ ಕೊಲೆ; ಯಾರಿವರು?

Share :

Published April 14, 2024 at 10:38pm

Update April 14, 2024 at 10:43pm

    23 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಸೆರೆವಾಸ ಅನುಭವಿಸಿದ್ದ ಸರಬ್ಜಿತ್ ಸಿಂಗ್

    ಬೈಕ್‌ನಲ್ಲಿ ಬಂದ ಅಪರಿಚಿತನಿಂದ ಅಮೀರ್ ಸರ್ಫರಾಜ್ ಮೇಲೆ ದಾಳಿ

    ಸರಬ್ಜಿತ್ ಸಿಂಗ್ ಬಿಡುಗಡೆಗೆ ಸಹೋದರಿ ದಲ್ಬೀರ್ ಕೌರ್ ನಿರಂತರ ಹೋರಾಟ

ಲಾಹೋರ್‌ನಲ್ಲಿ ಪಾಕಿಸ್ತಾನದ ಅಂಡರ್‌ವರ್ಲ್ಡ್‌ ಡಾನ್‌ ಅಮೀರ್ ಸರ್ಫರಾಜ್ ಅನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತನೊಬ್ಬ ಅಮೀರ್ ಸರ್ಫರಾಜ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಡಾನ್ ಅಮೀರ್ ಸರ್ಫರಾಜ್, ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಹತ್ಯೆ ಪ್ರಮುಖ ಆರೋಪಿ.

ಪಾಕಿಸ್ತಾನದ ಡಾನ್ ಸಾವನ್ನಪ್ಪಿದ್ದಾನೆ ಅನ್ನೋದಕ್ಕಿಂತ ಸರಬ್ಜಿತ್ ಸಿಂಗ್ ಹಂತಕನ ಸಂಹಾರ ಮಾಡಿರೋದು ಭಾರತೀಯರಿಗೆ ವಿಶೇಷವಾಗಿದೆ. ಡಾನ್‌ ಅಮೀರ್ ಸರ್ಫರಾಜ್ ಲಷ್ಕರ್-ಎ-ತೈಬಾ ಸಂಸ್ಥಾಪಕರ ಅತ್ಯಾಪ್ತನಾಗಿದ್ದ. ಈ ಭೂಗತ ಪಾತಕಿ ಅಮೀರ್ ಸರ್ಫರಾಜ್ ಅವರನ್ನು ಲಾಹೋರ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

ಸರಬ್ಜಿತ್ ಸಿಂಗ್ ಸಿಕ್ಕಿಬಿದ್ದಿದ್ದು ಹೇಗೆ?
1990ರಲ್ಲಿ ಪಂಜಾಬ್ ನಿವಾಸಿ ಸರಬ್ಜಿತ್ ಸಿಂಗ್‌ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಪಾಕಿಸ್ತಾನದ ಗಡಿ ದಾಟಿದ್ದರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಪ್ರವೇಶಿಸಿದ ಹಿನ್ನೆಲೆ ಸರಬ್ಜಿತ್ ಸಿಂಗ್‌ ಅನ್ನು ವಶಕ್ಕೆ ಪಡೆಯಲಾಗಿತ್ತು. ಪಾಕ್‌ ಪಂಜಾಬ್ ಪ್ರಾಂತ್ಯದ ಬಾಂಬ್ ಸ್ಫೋಟದಲ್ಲಿ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಸರಬ್ಜಿತ್ ಸಿಂಗ್ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.

ಇದನ್ನೂ ಓದಿ: ಕಹಿ ಘಟನೆ ನೆನೆದು ಕಣ್ಣೀರಿಟ್ಟ ನಟಿ ಬೇಬಿ ಇಂದಿರಾ; ಆ ದಿನಗಳ ಬಗ್ಗೆ ಹೇಳಿದ್ದೇನು?

2013ರಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಜೈಲಿನಲ್ಲಿರುವಾಗ ಪಾತಕಿ ಅಮೀರ್ ಸರ್ಫರಾಜ್ ಹಾಗೂ ಕೈದಿಗಳು ಕೊಲೆ ಮಾಡಿದ್ದರು. ಸರಬ್ಜಿತ್ ಸಿಂಗ್ ಮೇಲೆ ದಾಳಿ ಮಾಡಿದ್ದಕ್ಕೆ ಅಮೀರ್ ಸರ್ಫರಾಜ್‌ ಜೈಲು ಪಾಲಾಗಿದ್ದ. 2018ರಲ್ಲಿ ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಅಮೀರ್ ಸರ್ಫರಾಜ್‌ರನ್ನು ಕೋರ್ಟ್ ಖುಲಾಸೆಗೊಳಿಸಿತ್ತು.

49 ವರ್ಷದ ಸರಬ್ಜಿತ್ ಸಿಂಗ್ ಸುಮಾರು 23 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಸೆರೆವಾಸ ಅನುಭವಿಸಿದ್ದ. ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಅವರು ತನ್ನ ಸಹೋದರನ ಬಿಡುಗಡೆಗೆ ಸಾಕಷ್ಟು ಶ್ರಮಿಸಿದ್ದರು. ಆದರೆ ದಲ್ಬೀರ್ ಕೌರ್ ಅವರ ಹೋರಾಟ ವ್ಯರ್ಥವಾಯಿತು. ಈ ದಲ್ಬೀರ್ ಕೌರ್ ಅವರ ದಿಟ್ಟ ಹೋರಾಟದ ಬಗ್ಗೆ 2016ರಲ್ಲಿ ರಣದೀಪ್ ಹೂಡಾ ಮತ್ತು ಐಶ್ವರ್ಯ ರೈ ಬಚ್ಚನ್ ಅಭಿನಯದ ಸರಬ್ಜಿತ್ ಸಿನಿಮಾ ಬಿಡುಗಡೆಯಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

23 ವರ್ಷಗಳ ಸೆರೆವಾಸ.. ಪಾಕಿಸ್ತಾನದಲ್ಲಿ ಸರಬ್ಜಿತ್ ಸಿಂಗ್ ಹಂತಕನ ಗುಂಡಿಕ್ಕಿ ಕೊಲೆ; ಯಾರಿವರು?

https://newsfirstlive.com/wp-content/uploads/2024/04/Sarabjit-Singh.jpg

Load More