newsfirstkannada.com

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನಿಗೂಢ ಸಾವು.. ಒಂದೇ ತಿಂಗಳಲ್ಲಿ ನಾಲ್ವರ ಶವ ಪತ್ತೆ!

Share :

Published February 2, 2024 at 2:25pm

Update February 2, 2024 at 2:33pm

  ಓಹಿಯೋದ ಲಿಂಡ್‌ನರ್ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ಓದುತ್ತಿದ್ದ

  ನಾಲ್ವರು ಸಾವನ್ನಪ್ಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ

  ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದ ಶ್ರೇಯಸ್ ಬೇನಿಗೇರಿ

ವಾಷಿಂಗ್ಟನ್: ಹೈದರಾಬಾದ್​ ಮೂಲದ ವಿದ್ಯಾರ್ಥಿಯೋರ್ವ ಅಮೆರಿಕದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ಒಂದು ತಿಂಗಳಿನಿಂದ ಭಾರತ ಮೂಲದ ನಾಲ್ವರು ವಿದ್ಯಾರ್ಥಿಗಳು ಅಮೆರಿಕದಲ್ಲಿ ಸಾವನ್ನಪ್ಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಹೈದರಾಬಾದ್ ಮೂಲದ ಶ್ರೇಯಸ್ ರೆಡ್ಡಿ ಬೇನಿಗೇರಿ (19) ಮೃತ ದುರ್ದೈವಿ. ಅಮೆರಿಕದ ಪಾಸ್‌ಪೋರ್ಟ್ ಹೊಂದಿರುವ ಶ್ರೇಯಸ್ ಓಹಿಯೋದ ಲಿಂಡ್‌ನರ್ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರ ಪೋಷಕರು ಹೈದರಾಬಾದ್‌ನಲ್ಲಿದ್ದು ಮಗ ಸಾವಿನಿಂದ ದುಃಖತಪ್ತರಾಗಿದ್ದಾರೆ ಎಂದು ಹೇಳಲಾಗಿದೆ.

ಶ್ರೇಯಸ್ ರೆಡ್ಡಿ ಬೇನಿಗೇರಿ

ಇದನ್ನೂ ಓದಿ: ಮನೆ ಇಲ್ಲದವನಿಗೆ ಸಹಾಯ ಮಾಡಿದ್ದಕ್ಕೆ ಸುತ್ತಿಗೆಯಲ್ಲಿ ತಲೆ ಚಚ್ಚಿದ; ಅಮೆರಿಕಾದಲ್ಲಿ ಭಯಾನಕ ಘಟನೆ

ನ್ಯೂಯಾರ್ಕ್‌ನಲ್ಲಿನ ಭಾರತದ ರಾಯಭಾರ ಕಚೇರಿ, ಶ್ರೇಯಸ್ ಸಾವಿನ ಹಿಂದಿನ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ. ವಿದ್ಯಾರ್ಥಿ ಶ್ರೇಯಸ್​ನ ದುರದೃಷ್ಟಕರ ಸಾವಿನಿಂದ ದುಃಖವಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯ ಕುಟುಂಬದ ಜತೆ ಕಾನ್ಸುಲೇಟ್ ಸಂಪರ್ಕದಲ್ಲಿದ್ದು ಎಲ್ಲಾ ನೆರವು ನೀಡಲಾಗುವುದು ಎಂದು ಎಕ್ಸ್ ಅಕೌಂಟ್​​ನಲ್ಲಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನಿಗೂಢ ಸಾವು.. ಒಂದೇ ತಿಂಗಳಲ್ಲಿ ನಾಲ್ವರ ಶವ ಪತ್ತೆ!

https://newsfirstlive.com/wp-content/uploads/2024/02/US_DEATH.jpg

Load More