newsfirstkannada.com

ಬೆಂಗಳೂರಲ್ಲಿ ಬ್ರಿಟನ್ ಲೇಖಕಿ ನಿತಾಶಾ ಕೌಲ್ ಹೊಸ ವಿವಾದ.. ಸರ್ಕಾರದ ಕಾರ್ಯಕ್ರಮಕ್ಕೆ ಆಹ್ವಾನ ಗೊಂಡಿದ್ದ ಈಕೆ ಯಾರು?

Share :

Published February 26, 2024 at 2:31pm

  ವಿಮಾನ ನಿಲ್ದಾಣದಲ್ಲೇ ತಡೆದು ಬ್ರಿಟನ್​​ಗೆ ವಾಪಸ್ ಕಳುಹಿಸಿದ್ರಂತೆ ಅಧಿಕಾರಿಗಳು

  ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ ವಿವಾದಾತ್ಮಕ ಲೇಖಕಿ ನಿತಾಶಾ

  UP ಮೂಲದ ಈ ಲೇಖಕಿ ಅಂದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು

ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಪ್ರೊಫೆಸರ್ ನಿತಾಶಾ ಕೌಲ್ ಹೆಡ್​ಲೈನ್ ಆಗಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ತಮ್ಮನ್ನು ವಶಕ್ಕೆ ಪಡೆದು ನಂತರ ಗಡಿಪಾರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ಸರ್ಕಾರದ ಕಾರ್ಯಕ್ರಮ ಒಂದರಲ್ಲಿ ನಿತಾಶಾ ಬೆಂಗಳೂರಿಗೆ ಬರುತ್ತಿದ್ದರು. ವಿಶೇಷ ಅಂದರೆ ಪ್ರೊಫೆಸರ್ ನಿತಾಶಾ ಕೌಲ್ ರಾಜ್ಯದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿದ್ದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನನಗೆ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಯಾವುದೇ ಕಾರಣವನ್ನು ನೀಡದೆ ವಾಪಸ್ ಕಳುಹಿಸಿದ್ದಾರೆ ಎಂದು ಟ್ವಿಟರ್​​ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಆದರೆ ವಿಮಾನ ನಿಲ್ದಾಣದ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಿತಾಶಾ ಕೌಲ್ ಆಗಾಗ ತಮ್ಮ ಲೇಖನಗಳು ಮತ್ತು ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಇವರನ್ನು ಬಿಜೆಪಿ ಭಾರತ ವಿರೋಧಿ ಎಂದು ಕರೆದಿದೆ.

ನಿತಾಶಾ ಕೌಲ್ ಯಾರು..?
ನಿತಾಶಾ ಕೌಲ್, ಮೂಲತಃ ಉತ್ತರ ಪ್ರದೇಶದ ಗೋರಖ್‌ಪುರದವರು. ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಬಿಎ ಪದವಿ ಪಡೆದುಕೊಂಡಿದ್ದಾರೆ. 1997ರಲ್ಲಿ ನಿತಾಶಾ ಲಂಡನ್‌ಗೆ ಹೋಗಿದ್ದರು. ಅಲ್ಲಿ ಅಂದರೆ 2003 ರಲ್ಲಿ ಬ್ರಿಟನ್‌ನ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಇವರು ವೆಸ್ಟ್‌ಮಿನಿಸ್ಟರ್ ವಿವಿಯ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕರಾಗಿದ್ದಾರೆ. ಕಾದಂಬರಿಗಾರ್ತಿ, ಬರಹಗಾರ್ತಿ ಮತ್ತು ಕವಿಯೂ ಆಗಿದ್ದಾರೆ.

ವಿಷಯ ಏನು..?
ಕರ್ನಾಟಕ ಸರ್ಕಾರ ಫೆಬ್ರವರಿ 24 ಮತ್ತು 25 ರಂದು ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮ್ಮೇಳನ 2024’ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಪ್ರೊಫೆಸರ್ ನಿತಾಶಾ ಕೌಲ್ ಅವರನ್ನು ಆಹ್ವಾನಿಸಲಾಗಿತ್ತು. ಕರ್ನಾಟಕ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿತಾಶಾ ಕೌಲ್ ರಾಜ್ಯ ಸರ್ಕಾರ ಕಳುಹಿಸಿರುವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮತ್ತು ಇತರೆ ಪತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕರ್ನಾಟಕ ಬಿಜೆಪಿಯ ಸೋಶಿಯಲ್ ಮೀಡಿಯಾದಲ್ಲಿ ‘ನಿತಾಶಾ ಅವರ ಹಿಂದಿನ ಲೇಖನಗಳನ್ನು ಪೋಸ್ಟ್ ಮಾಡಿ, ಇಂಥವರನ್ನು ಕರ್ನಾಟಕ ಸರ್ಕಾರ ಆಹ್ವಾನ ಮಾಡಿದೆ ಎಂದು ಟೀಕೆ ಮಾಡಿತ್ತು. ಅಂದ್ಹಾಗೆ ಪ್ರೊಫೆಸರ್ ನಿತಾಶಾ ಕೌಲ್ ಕಾಶ್ಮೀರದ ವಿಷಯದ ಬಗ್ಗೆ ಬರೆಯುತ್ತಿದ್ದಾರೆ ಮತ್ತು ಮಾತನಾಡುತ್ತಿದ್ದಾರೆ. 2019 ರಲ್ಲಿ ಆರ್ಟಿಕಲ್ 370 ವಿಧಿಯನ್ನು ತೆಗೆದು ಹಾಕಿದಾಗ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ವಿಶ್ವಸಂಸ್ಥೆಯ ಸಮಿತಿ ಮುಂದೆ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಬ್ರಿಟನ್ ಲೇಖಕಿ ನಿತಾಶಾ ಕೌಲ್ ಹೊಸ ವಿವಾದ.. ಸರ್ಕಾರದ ಕಾರ್ಯಕ್ರಮಕ್ಕೆ ಆಹ್ವಾನ ಗೊಂಡಿದ್ದ ಈಕೆ ಯಾರು?

https://newsfirstlive.com/wp-content/uploads/2024/02/NITASHA.jpg

Load More