newsfirstkannada.com

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ..?

Share :

Published August 3, 2024 at 9:26am

    ನಿನ್ನೆ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ ಭಾರತ

    ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಭಾರೀ ಮುಖಭಂಗ

    47.5 ಓವರ್​ಗಳಲ್ಲಿ ಭಾರತ ಆಲೌಟ್​, ಮ್ಯಾಚ್​ ಟೈ ಆಗಿದೆ

ಭಾರತ ಮತ್ತು ಶ್ರೀಲಂಕಾ ನಡುವಿನ ODI ಸರಣಿಯ ಮೊದಲ ಪಂದ್ಯ ನಿನ್ನೆ ಕೊಲಂಬೊದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದ್ದಾರೆ.

ಜುಲೈ 31, ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಕ್ಯಾನ್ಸರ್​ನಿಂದ ನಿಧನರಾದರು. ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು, ತುಂಬಾ ದಿನಗಳಿಂದ ಹೋರಾಟ ನಡೆಸಿ ಸಾವನ್ನಪ್ಪಿದ್ದಾರೆ. ಗಾಯಕ್ವಾಡ್ ಗೌರವಾರ್ಥವಾಗಿ ಭಾರತ ತಂಡವು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದೆ.

ಇದನ್ನೂ ಓದಿ:ಕಾರು ಮರಕ್ಕೆ ಡಿಕ್ಕಿ.. ಸ್ನೇಹಿತನ ಮನೆಗೆ ಬಂದಿದ್ದ ಮೂವರು ವಿದ್ಯಾರ್ಥಿಗಳು ದಾರುಣ ಸಾವು

ಅಂಶುಮಾನ್ ಗಾಯಕ್ವಾಡ್ ಅವರು ದೀರ್ಘಕಾಲದವರೆಗೆ ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಲಂಡನ್‌ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಮಧ್ಯೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಮನವಿಯ ಮೇರೆಗೆ ಬಿಸಿಸಿಐ ಮತ್ತು ಇತರ ಅನೇಕ ಕ್ರಿಕೆಟಿಗರು ಗಾಯಕ್ವಾಡ್ ಚಿಕಿತ್ಸೆಗೆ ಹಣವನ್ನು ನೀಡಿದ್ದರು. ಜುಲೈ 31 ರಂದು ಅಂಶುಮಾನ್ ಗಾಯಕ್ವಾಡ್ ವಡೋದರಾದಲ್ಲಿ ಕೊನೆಯುಸಿರೆಳೆದರು. ಅವರ ನಿಧನಕ್ಕೆ ಇಡೀ ಕ್ರಿಕೆಟ್ ಜಗತ್ತು ಸಂತಾಪ ಸೂಚಿಸಿತು.

ಅಂಶುಮಾನ್ ಗಾಯಕ್ವಾಡ್ 1970 ಮತ್ತು 1980 ರ ದಶಕಗಳಲ್ಲಿ ಭಾರತಕ್ಕಾಗಿ ಆಡಿದ್ದರು. ಟೀಂ ಇಂಡಿಯಾ ಪರ 40 ಟೆಸ್ಟ್ ಪಂದ್ಯಗಳಲ್ಲಿ 30 ಸರಾಸರಿಯಲ್ಲಿ 1,985 ರನ್ ಗಳಿಸಿದ್ದರು. ಇದರಲ್ಲಿ 2 ಶತಕ ಮತ್ತು 10 ಅರ್ಧಶತಕಗಳು ಸೇರಿವೆ. 15 ಏಕದಿನ ಪಂದ್ಯಗಳಲ್ಲಿ 269 ರನ್ ಗಳಿಸಿದ್ದರು. ಫಸ್ಟ್​ ಕ್ಲಾಸ್ ಕ್ರಿಕೆಟ್​ನಲ್ಲಿ 206 ಪಂದ್ಯಗಳನ್ನು ಆಡಿದ್ದಾರೆ. 12,136 ರನ್ ಗಳಿಸಿರುವ ಅವರು, 34 ಶತಕಗಳು ಮತ್ತು 47 ಅರ್ಧ ಶತಕ ಬಾರಿಸಿದ್ದರು.

ಇದನ್ನೂ ಓದಿ:‘ಮಗು ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನ್ ಹೇಳಲಿ..’ ಪಿಎಸ್​ಐ ಪರಶುರಾಮ್ ಪತ್ನಿ ಕಣ್ಣೀರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ..?

https://newsfirstlive.com/wp-content/uploads/2024/08/TEAM-INDIA-3.jpg

Load More