ವಿಶ್ವದ ಅತಿ‌ ಎತ್ತರದ ಬ್ರಿಡ್ಜ್‌ನಲ್ಲಿ ಭಾರತೀಯ ರೈಲ್ವೆ ಮೊಟ್ಟ ಮೊದಲ ಸಂಚಾರ.. ಏನಿದರ ವಿಶೇಷ?- ವಿಡಿಯೋ

author-image
admin
Updated On
ವಿಶ್ವದ ಅತಿ‌ ಎತ್ತರದ ಬ್ರಿಡ್ಜ್‌ನಲ್ಲಿ ಭಾರತೀಯ ರೈಲ್ವೆ ಮೊಟ್ಟ ಮೊದಲ ಸಂಚಾರ.. ಏನಿದರ ವಿಶೇಷ?- ವಿಡಿಯೋ
Advertisment
  • ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್‌ ಹೆಚ್ಚು ಎತ್ತರ
  • ಚಿನಾಬ್ ನದಿಯಿಂದ ಬರೋಬ್ಬರಿ 1,178 ಅಡಿ ಎತ್ತರದಲ್ಲಿದೆ
  • ಭೂಕಂಪ ಸಂಭವಿಸಿದರೂ ಈ ರೈಲ್ವೆ ಬ್ರಿಡ್ಜ್‌ಗೆ ತೊಂದರೆಯೇ ಇಲ್ಲ!

ಶ್ರೀನಗರ: ಜಮ್ಮು‌ ಕಾಶ್ಮೀರದ ಚಿನಾಬ್ ನದಿಯ ಮೇಲ್ಭಾಗದಲ್ಲಿ ವಿಶ್ವದ ಅತಿ‌ ಎತ್ತರದ ರೈಲ್ವೆ ಬ್ರಿಡ್ಜ್ ನಿರ್ಮಾಣವಾಗಿದೆ. ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್‌ ಎತ್ತರದಲ್ಲಿರುವ ರೈಲ್ವೆ ಬ್ರಿಡ್ಜ್ ಇದು. ಜಮ್ಮು‌ ಕಾಶ್ಮೀರದ ರಾಮಬಾನ್ - ರೀಸಯ್ ನಡುವೆ ಸಂಪರ್ಕಿಸಲು ಈ ರೈಲ್ವೆ ಮಾರ್ಗ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: ದೀಪಿಕಾ ಕಪ್ಪು ಬಣ್ಣದ ಗೌನ್​ ಧರಿಸಿದ್ದೇಕೆ? ಏನಿದರ ಸ್ಪೆಷಲ್‌? ಬೆಲೆ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ! 

ಅತಿ‌ ಎತ್ತರದ ರೈಲ್ವೆ ಬ್ರಿಡ್ಜ್ ಚಿನಾಬ್ ನದಿಯಿಂದ ಬರೋಬ್ಬರಿ 1,178 ಅಡಿ ಎತ್ತರದಲ್ಲಿದೆ. ಸದ್ಯ ಈ ರೈಲ್ವೆ ಬ್ರಿಡ್ಜ್ ಕಾಮಗಾರಿ ಪೂರ್ಣವಾಗಿದ್ದು, ಬ್ರಿಡ್ಜ್ ಮೇಲೆ ರೈಲಿನ ಮೊದಲ ಸಂಚಾರ ಮಾಡಲಾಗಿದೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ಭಾರತೀಯ ರೈಲ್ವೆ ಇಲಾಖೆ ವಿಡಿಯೋವನ್ನು ಹಂಚಿಕೊಂಡಿದೆ.

publive-image

ಚಿನಾಬ್ ನದಿಯ ಮೇಲ್ಭಾಗದಲ್ಲಿ ಮೊಟ್ಟ ಮೊದಲಿಗೆ ರೈಲು ಸಂಚಾರ ಮಾಡಿದ್ದು, ಇದು ಭಾರತದ ಇಂಜಿನಿಯರಿಂಗ್ ಚಮತ್ಕಾರ ಎಂದು ರೈಲ್ವೆ ಇಲಾಖೆ ಬಣ್ಣಿಸಿದೆ. ಜಮ್ಮು ಕಾಶ್ಮೀರ ಸದಾ ಭೂಕಂಪ ಪೀಡಿತ ಪ್ರದೇಶವಾಗಿದೆ. ಆದರೆ ಪ್ರಬಲ ಭೂಕಂಪ ಸಂಭವಿಸಿದರೂ ಈ ರೈಲ್ವೆ ಬ್ರಿಡ್ಜ್‌ಗೆ ಯಾವುದೇ ತೊಂದರೆ ಆಗಲ್ಲ ಅನ್ನೋದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ.


">June 20, 2024

ಮೊದಲ ಪ್ರಾಯೋಗಿಕ ಸಂಚಾರದಿಂದ ಭಾರತೀಯ ರೈಲ್ವೆ ಸಿಬ್ಬಂದಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಶೀಘ್ರದಲ್ಲೇ ಜಮ್ಮು‌ ಕಾಶ್ಮೀರದ ರಾಮಬಾನ್ - ರೀಸಯ್ ನಡುವೆ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment