ರೈಲು ಪ್ರಯಾಣಿಕರ ಗಮನಕ್ಕೆ.. ಟಿಕೆಟ್ ರೇಟ್​ ಹೆಚ್ಚಿಸಿ ಬಿಗ್​ ಶಾಕ್​ ಕೊಟ್ಟ ಸರ್ಕಾರ!

author-image
Veena Gangani
Updated On
ರೈಲು ಪ್ರಯಾಣಿಕರ ಗಮನಕ್ಕೆ.. ಟಿಕೆಟ್ ರೇಟ್​ ಹೆಚ್ಚಿಸಿ ಬಿಗ್​ ಶಾಕ್​ ಕೊಟ್ಟ ಸರ್ಕಾರ!
Advertisment
  • ದೇಶದಲ್ಲಿ ಜುಲೈ 1ರಿಂದ ರೈಲ್ವೆ ಟಿಕೆಟ್ ದರ ಏರಿಕೆ ಜಾರಿ
  • ಪ್ರತಿ ಕೀ.ಮಿ.ಗೆ 2 ಪೈಸೆ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದೆ
  • ಪ್ರತಿ ತಿಂಗಳ ಸೀಸನ್ ಟಿಕೆಟ್ ದರದಲ್ಲೂ ಏರಿಕೆ ಆಗಿದೇಯಾ?

ಬಹಳ ವರ್ಷಗಳ ಬಳಿಕ ದೇಶದಲ್ಲಿ ರೈಲ್ವೆ ಟಿಕೆಟ್ ದರ ಏರಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ. ದೇಶದಲ್ಲಿ ನಿತ್ಯ 2 ಕೋಟಿಗೂ ಅಧಿಕ ಜನರು ರೈಲ್ವೆಯಲ್ಲಿ ಪ್ರಯಾಣ ಮಾಡ್ತಾರೆ. ಇಂದಿಗೂ ಭಾರತದಲ್ಲಿ ಬಡವರು, ಮಧ್ಯಮ ವರ್ಗದ ಜನರು ಸಂಚಾರಕ್ಕೆ ರೈಲುಗಳನ್ನೇ ಅವಲಂಬಿಸಿದ್ದಾರೆ.

ಇದನ್ನೂ ಓದಿ: ಕಾರು ಓವರ್​ ಟೇಕ್ ಗಲಾಟೆ.. ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್​ಐಆರ್..!

publive-image

ದೇಶದಲ್ಲಿ ಜುಲೈ 1, 2025ರಿಂದ  ಟಿಕೆಟ್ ದರ ಏರಿಕೆ ಜಾರಿಯಾಗಲಿದೆ. ಸ್ಪಲ್ಪ ಪ್ರಮಾಣದಲ್ಲಿ ಮಾತ್ರವೇ ರೈಲ್ವೆ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ರೈಲ್ವೆ ಬಜೆಟ್, ಸಾಮಾನ್ಯ ಬಜೆಟ್​ನಲ್ಲಿ ರೈಲ್ವೆ ಟಿಕೆಟ್ ದರ ಏರಿಕೆ ತೀರ್ಮಾನವನ್ನು ಪ್ರಕಟಿಸಲಾಗುತ್ತಿತ್ತು. ಆದ್ರೆ, ಈಗ ಕೇಂದ್ರದ ಸಾಮಾನ್ಯ ಬಜೆಟ್ ಬಳಿಕ ಜುಲೈ ತಿಂಗಳ ಒಂದರಿಂದ ರೈಲ್ವೆ ಟಿಕೆಟ್ ದರವನ್ನು ಕಡಿಮೆ ಪ್ರಮಾಣದಲ್ಲಿ ಏರಿಕೆ ಮಾಡುತ್ತಿರುವುದು ವಿಶೇಷ.

publive-image

ನಾನ್ ಎಸಿ ಮೇಲ್, ಎಕ್ಸಪ್ರೆಸ್ ಟ್ರೇನ್​ಗಳಲ್ಲಿ 1 ಕಿಮೀಗೆ 1 ಪೈಸೆ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ. ಎಸಿ ಕ್ಲಾಸ್​ಗಳಿಗೆ ಪ್ರತಿ ಕೀ.ಮಿ.ಗೆ 2 ಪೈಸೆ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದೆ. ಸಬ್ ಅರ್ಬನ್ ರೈಲ್ವೆಗಳಲ್ಲಿ ಟಿಕೆಟ್ ದರ ಏರಿಕೆ ಇಲ್ಲ. 500 ಕಿ.ಮೀ.ವರೆಗೂ ಸೆಕೆಂಡ್ ಕ್ಲಾಸ್ ಟ್ರೇನ್ ಬೋಗಿಗಳಲ್ಲೂ ಟಿಕೆಟ್ ದರ ಏರಿಕೆ ಇಲ್ಲ. 500 ಕಿ.ಮೀ.ಗಿಂತ ಹೆಚ್ಚಿನ ದೂರ ಪ್ರಯಾಣಕ್ಕೆ ಪ್ರತಿ ಕಿಮೀಗೆ ಅರ್ಧ ಪೈಸೆ ದರ ಏರಿಕೆ ಮಾಡಲಾಗುತ್ತಿದೆ. ಪ್ರತಿ ತಿಂಗಳ ಸೀಸನ್ ಟಿಕೆಟ್ ದರದಲ್ಲೂ ಏರಿಕೆ ಇಲ್ಲ. ರೈಲ್ವೆ ಇಲಾಖೆಯಿಂದ ದರ ಏರಿಕೆಗೆ ತೀರ್ಮಾನ ಕೈಗೊಂಡಿದೆ. ಇದನ್ನು ಒಂದೆರೆಡು ದಿನದಲ್ಲಿ ಅಧಿಕೃತವಾಗಿ ಪ್ರಕಟಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment