/newsfirstlive-kannada/media/post_attachments/wp-content/uploads/2025/05/BSF-Jawan-Purnam-Kumar-Shaw.jpg)
ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಗಡಿಯಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ಕದನ ವಿರಾಮಕ್ಕೆ ಶರಣಾದ ಪಾಕಿಸ್ತಾನ, BSF ಯೋಧ ಪಿ.ಕೆ ಶಾ ಅವರನ್ನು ಇಂದು ಬೆಳಗ್ಗೆ 10.30ಕ್ಕೆ ಸರಿಯಾಗಿ ಬಿಡುಗಡೆ ಮಾಡಿದೆ.
10 ದಿನಗಳ ಹಿಂದೆ ಪಂಜಾಬ್ನ ಫಿರೋಜ್ಪುರ ಗಡಿಯಲ್ಲಿ ಪಾಕಿಸ್ತಾನ, ಭಾರತೀಯ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ವಶಕ್ಕೆ ಪಡೆದಿತ್ತು.
ಕಳೆದ ಏಪ್ರಿಲ್ 23ರಂದು ಭೂ ಸೇನೆಯ 182ನೇ ಬೆಟಾಲಿಯನ್ ಯೋಧ ಪಿ.ಕೆ ಶಾ ಅವರು ಆಕಸ್ಮಿಕವಾಗಿ ಭಾರತದ ಗಡಿಯನ್ನು ದಾಟಿ, ಪಾಕಿಸ್ತಾನದ ಗಡಿ ರೇಖೆಯನ್ನು ಪ್ರವೇಶ ಮಾಡಿದ್ದರು. ಗಡಿ ದಾಟಿದ್ದ ತಪ್ಪಿಗೆ BSF ಯೋಧ ಪಿ.ಕೆ ಶಾ ಅವರನ್ನು ಪಾಕಿಸ್ತಾನದ ರೇಂಜರ್ಸ್ ಬಂಧಿಸಿದ್ದರು.
ಬಿಎಸ್‌ಎಫ್ ಯೋಧ ಪಿ.ಕೆ ಶಾ ಅವರು ಒಟ್ಟು 1030 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದರು. ಭಾರತ, ಪಾಕ್ ಗಡಿ ಸಂಘರ್ಷ ನಡೆದು ಕದನ ವಿರಾಮದ ಬಳಿಕ ಪಾಕಿಸ್ತಾನ ಭಾರತದ ಷರತ್ತುಗಳಿಗೆ ಒಪ್ಪಿಕೊಂಡಿದೆ. ಹೀಗಾಗಿ ಅಟ್ಟಾರಿ ವಾಘಾ ಗಡಿ ಮೂಲಕ ಯೋಧ ಪಿ.ಕೆ. ಶಾ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಸೂಪರ್ ಪವರ್ ಆದ ‘ಬ್ರಹ್ಮೋಸ್’.. ಭಾರತದ ಕ್ಷಿಪಣಿಗೆ 17 ದೇಶಗಳ ಬೇಡಿಕೆ; ವಿಶೇಷ ಮಾಹಿತಿ ಇಲ್ಲಿದೆ!
ಯೋಧ ಪಿ.ಕೆ. ಶಾ ಅವರನ್ನು ಪ್ರೋಟೋಕಾಲ್ ಪ್ರಕಾರ ಭಾರತೀಯ ಸೇನೆಗೆ ಹಸ್ತಾಂತರ ಮಾಡಲಾಗಿದೆ. 10 ದಿನಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಪಿ.ಕೆ. ಶಾ ಅವರು ಸದ್ಯ ಸೇನಾ ಕಣ್ಗಾವಲಿನಲ್ಲಿದ್ದಾರೆ. ಭಾರತೀಯ ಯೋಧ ವೈರಿ ರಾಷ್ಟ್ರದಿಂದ ಸುರಕ್ಷಿತವಾಗಿ ಬಿಡುಗಡೆಯಾಗಿರೋದು ಹೆಮ್ಮೆಯ ವಿಚಾರವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ