/newsfirstlive-kannada/media/post_attachments/wp-content/uploads/2025/07/LOVE-STORY.jpg)
ಕ್ರಿಕೆಟರ್ಸ್ ಅಂದ್ರೆನೇ ಒಂದು ಕ್ಯೂರಿಯಾಸಿಟಿ. ಆಟಗಾರರ ಲೈಫ್ ಹೇಗಿರುತ್ತೆ. ಆತ ಸಕ್ಸಸ್ ಆಗಿದ್ಹೇಗೆ? ಒಬ್ಬ ಕ್ರಿಕೆಟರ್ ಹಿಂದಿನ ಕಷ್ಟದ ಜೀವನ ಹೇಗಿತ್ತು? ಅವರ ಲವ್ ಸ್ಟೋರಿ ಹೇಗೆ ಶುರುವಾಯ್ತು? ಸ್ಟಾರ್ ಕ್ರಿಕೆಟರ್ಗಳ ಕ್ಯೂಟ್ ಲವ್ ಸ್ಟೋರಿಗಳು ಇಲ್ಲಿವೆ..
ಕ್ರಿಕೆಟರ್ಸ್.. ಇವರ ಆಟವೇ ಅಲ್ಲ. ಲೈಫ್ ಸ್ಟ್ರೈಲ್, ಇವರ ಸಕ್ಸಸ್ಫುಲ್ ಸ್ಟೋರಿಗಳ ಕುರಿತು ಕೇಳುವುದೇ ಸಖತ್ ಇಂಟ್ರೆಸ್ಟಿಂಗ್ ಕಥೆ. ಈ ಸಕ್ಸಸ್ಫುಲ್ ಕ್ರಿಕೆಟರ್ಗಳ ಪರ್ಸನಲ್ ಲೈಫ್ನಲ್ಲಿ ಎಲ್ಲರಿಗೂ ಕ್ಯೂರಿಯಾಸಿಟಿ ಹುಟ್ಟಿಸುತ್ತೆ. ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ.. WHO IS THE BOSS ಶೋ ನಡೆಸಿಕೊಡ್ತಿದ್ದಾರೆ. ಈ ಕಾರ್ಯಕ್ರಮ ಕ್ರಿಕೆಟರ್ಗಳ ಜೀವನದ ಕಥೆಗಳು ಎಲ್ಲರ ಮನ ಗೆಲ್ತಿದೆ. ಈ ಪೈಕಿ ಸೂರ್ಯಕುಮಾರ್ ಯಾದವ್, ದೈವಿಶಾ ಶೆಟ್ಟಿಯ ಲವ್ ಸ್ಟೋರಿ ಸಖತ್ ಟ್ರೆಂಡಿಂಗ್ನಲ್ಲಿದೆ..
ಇತ್ತಿಚೆಗಷ್ಟೇ ಸೂರ್ಯಕುಮಾರ್, ದೇವಿಶಾ ಶೆಟ್ಟಿ WHO IS THE BOSS ಶೋನಲ್ಲಿ ಭಾಗಿಯಾಗಿದ್ರು. ಈ ಕಾರ್ಯಕ್ರಮದಲ್ಲಿ ಮುಂಬೈನ ಸೂರ್ಯಕುಮಾರ್, ಕರ್ನಾಟಕದ ದೇವಿಶಾ ಶೆಟ್ಟಿ ನಡುವಿನ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಮಕ್ಕಳಿಗಾಗಿ ಗಿಫ್ಟ್ ಬಾಕ್ಸ್ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್
ಇವ್ರದ್ದು ಮಾತ್ರವಲ್ಲ, ಟೀಮ್ ಇಂಡಿಯಾದ ಬಹುತೇಕ ಆಟಗಾರರದ್ದು ಲವ್ ಮ್ಯಾರೇಜ್. ಧೋನಿ, ಕೊಹ್ಲಿ, ರೋಹಿತ್ ಶರ್ಮಾರಿಂದ ಹಿಡಿದು ಬೂಮ್ರಾ ತನಕ ಲವ್ ಮ್ಯಾರೇಜ್ ಆಗಿದ್ದಾರೆ. ಆದ್ರೆ, ಒಬ್ಬೊಬ್ಬರದ್ದು ಒಂದು ವಿಭಿನ್ನ ಕಥೆ.
ಕ್ಯೂಟ್ ಕಪಲ್ಸ್ ವಿರುಷ್ಕಾ, ರೋಹಿತ್, ರಿತಿಕಾ ಜೋಡಿ..!
ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ, ಟೀಮ್ ಇಂಡಿಯಾದ ಸ್ಟಾರ್ ಆ್ಯಂಡ್ ಕ್ಯೂಟ್ ಕಪಲ್ಸ್. ಇವರಿಬ್ಬರ ಲವ್ಗೆ ವೇದಿಕೆ ಆಗಿದ್ದೇ 2013ರ ಶಾಂಪೂ ಜಾಹೀರಾತು. ಮೊದಲ ಬಾರಿಗೆ ಜಾಹೀರಾತಿನ ಶೂಟ್ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಭೇಟಿಯಾಗಿದ್ದರು. ಅನುಷ್ಕಾಳನ್ನ ಮೊದಲ ಸಲ ಭೇಟಿಯಾಗಿದ್ದ ವಿರಾಟ್ ನರ್ವಸ್ ಆಗಿದ್ದರು. ನರ್ವಸ್ ಆಗಿದ್ದ ವಿರಾಟ್ನ ಕೂಲ್ ಮಾಡಲು ಅನುಷ್ಕಾ ಜೋಕ್ ಹೇಳಿದ್ರು. ಆ ಜೋಕ್ನಿಂದ ಉತ್ತಮ ಸ್ನೇಹಿತರಾದವರು, ಇವತ್ತು ಕ್ಯೂಟ್ ಕಪಲ್ಸ್ ಆಗಿದ್ದಾರೆ.
ಕೊಹ್ಲಿ ಅನುಷ್ಕಾಗಿಂತ ರೋಹಿತ್, ರಿತಿಕಾ ಲವ್ ಸ್ಟೋರಿ ಮತ್ತಷ್ಟು ಇಂಟ್ರೆಸ್ಟಿಂಗ್, 2008ರಲ್ಲಿ ಮೊದಲು ಬೇಟಿಯಾಗಿದ್ದರು. ಆರಂಭದಲ್ಲಿ ರೋಹಿತ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ರಿತಿಕಾ, ದಿನಗಳು ಕಳೆದಂತೆ ರೋಹಿತ್ ಶರ್ಮಾಗೆ ಉತ್ತಮ ಸ್ನೇಹಿತರಾದ್ರು. ಇಂಟ್ರೆಸ್ಟಿಂಗ್ ಲವ್ನಲ್ಲಿದ್ದರು, ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ವರ್ಷಗಳೇ ಉರುಳಿತ್ತು. ಕೊನೆಗೆ ರೋಹಿತ್ ಶರ್ಮಾನೇ ಲವ್ ಪ್ರಪೋಸ್ ಮಾಡಿದ್ರು, ಇದಕ್ಕೆ ರಿತಿಕಾನೂ ಗ್ರೀನ್ ಸಿಗ್ನಲ್ ನೀಡಿದ್ರು.
ಧೋನಿ ಸಾಕ್ಷಿಯ ಕ್ಯೂಟ್ ಲವ್ ಸ್ಟೋರಿಯೇ ಪ್ರತ್ಯೇಕ..!
ಇತರೆ ಕ್ರಿಕೆಟರ್ಗಳ ಲವ್ ಸ್ಟೋರಿಯೇ ಒಂದಾದ್ರೆ, ಧೋನಿ, ಸಾಕ್ಷಿ ಸಿಂಗ್ ಲವ್ ಸ್ಟೋರಿಯೇ ವಿಭಿನ್ನ ಕಥೆ. ಆಗಷ್ಟೇ ಹೋಟೆಲ್ ಮ್ಯಾನೇಜ್‌ಮೆಂಟ್ ಮುಗಿಸಿದ್ದ ಸಾಕ್ಷಿ, ಕೋಲ್ಕತ್ತಾದ ತಾಜ್ ಬೆಂಗಾಲ್ ಹೋಟೆಲ್‌ನಲ್ಲಿ ರಿಸಪ್ಷೆನ್ ಆಗಿ ಕೆಲಸಕ್ಕೆ ಸೇರಿದ್ರು. ಇದೇ ಹೋಟೆಲ್‌ನಲ್ಲಿ ಧೋನಿಯನ್ನ ಮೊದಲು ಭೇಟಿಯಾಗಿ ಆಟೋಗ್ರಾಫ್ ಪಡೆದಿದ್ರು. ಸಾಕ್ಷಿ ಸೌಂದರ್ಯ ಕ್ಲೀನ್ ಬೋಲ್ಡ್ ಆಗಿದ್ದ ಮಾಹಿ, ಹೋಟೆಲ್ ಮ್ಯಾನೇಜರ್ರಿಂದ ಸಾಕ್ಷಿ ನಂಬರ್ ಪಡೆದು ಮಸೇಜ್ ಮಾಡಿದ್ರು.
ಇದನ್ನೂ ಓದಿ: ರಾಮಾಚಾರಿ ಬೆನ್ನಲ್ಲೇ ವೀಕ್ಷಕರ ನೆಚ್ಚಿನ ಮತ್ತೊಂದು ಸೀರಿಯಲ್ ಅಂತ್ಯ.. ಯಾವುದು..?
ಕೆಲ ದಿನಗಳ ಬಳಿಕ ಪ್ರೇಮ ನಿವೇದನೆ ಮಾಡಿದ ಧೋನಿಗೆ ಆರಂಭದಲ್ಲಿ ಸಾಕ್ಷಿ ನೋ ಎಂದಿದ್ರು. ಆದ್ರೆ, ಕೊನೆಗೆ ಯೆಸ್ ಎಂದ ಸಾಕ್ಷಿಯನ್ನ ಜುಲೈ 4, 2010ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟುರು. ಗುರು ಧೋನಿಯಂತೆಯೇ ದೀಪಕ್ ಚಹರ್ ಫಾಲೋ ಮಾಡಿದ್ದಾರೆ. ಆದ್ರೆ, ಇವರಿಬ್ಬರ ಭೇಟಿಗೆ ವೇದಿಕೆಯಾಗಿದ್ದು ಸಹೋದರಿ ಮಾಲ್ತಿ ಚಹರ್. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರಿಬ್ಬರು. ನಂತರ ಲವ್ ಬರ್ಡ್ಸ್ ಆಗಿಬಿಟ್ರು. ಈ ಕದ್ದು ಮುಚ್ಚಿ ಭೇಟಿಯಾಗುವಿಕೆಗೆ 2021ರ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದ ವೇಳೆ ಬ್ರೇಕ್ ಹಾಕಿದ್ರು. ದುಬೈ ಸ್ಟೇಡಿಯಂನಲ್ಲಿ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ರು. ಇದಕ್ಕೆ ಜಯ ಕೂಡ ಒಕೆ ಅಂದಿದ್ರು.
ರಹಾನೆ.. ಬೂಮ್ರಾ ಕಥೆ ಮತ್ತಷ್ಟು ಭಿನ್ನ..!
ಅಜಿಂಕ್ಯ ರಹಾನೆ, ರಾಧಿಕಾ ಧೋಪವ್ಕರ್ ಲವ್ ಸ್ಟೋರಿ ನಿಜಕ್ಕೂ ಸಖತ್ ಕ್ಯೂರಿಯಾಸಿಟಿ ಹುಟ್ಟಿಹಾಕುತ್ತೆ. ರಹಾನೆ ಸಹೋದರಿಯ ಸ್ನೇಹಿತೆಯೇ ಈ ರಾಧಿಕಾ ಧೋಪವ್ಕರ್.. ಬಾಲ್ಯದಿಂದಲೂ ಒಬ್ಬರನ್ನೊಬ್ಬರು ಅರಿತಿದ್ದ ಇವರ ಲವ್ ಶುರುವಾಗಿದ್ದು 2007ರಲ್ಲಿ. 7 ವರ್ಷ ಡೇಟಿಂಗ್, ಮೀಟಿಂಗ್ನಲ್ಲಿ ಸುತ್ತಾಡ್ತಿದ್ದರು.
ಬೂಮ್ರಾ, ಸಂಜನಾ ಗಣೇಶನ್ ಅವರದ್ದು ಕ್ರಿಕೆಟ್ ಮೈದಾನದಲ್ಲೇ ಹುಟ್ಟಿಕೊಂಡ ಲವ್. 2019ರಲ್ಲಿ ಏಕದಿನ ವಿಶ್ವಕಪ್ನಲ್ಲಿ ಮೈದಾನದಲ್ಲೇ ನಿರೂಪಕಿ ಸಂಜನಾರನ್ನ ಬೇಟಿಯಾಗಿದ್ದರು. ಈ ಭೇಟಿಯೇ ಪ್ರೀತಿಯಾಗಿ ಮುಂದೆ ತಿರುಗಿತ್ತು. ಇಂಟ್ರೆಸ್ಟಿಂಗ್ ಅಂದ್ರೆ 2020 ಐಪಿಎಲ್ ವೇಳೆ ಕೊಲ್ಕತ್ತಾ ತಂಡದ ನಿರೂಪಕಿಯೂ ಆಗಿದ್ದ ಸಂಜನಾಗಾಗಿ ಬಬಲ್ ಟು ಬಬಲ್ ಅನುಮತಿ ಪಡೆದುಕೊಂಡು ಬೂಮ್ರಾ ಭೇಟಿಯಾಗಿದ್ದರು. ಯಾರಿಗೂ ತಿಳಿಯದಂತೆ ಲವ್ ಪ್ರಪೋಸ್ ಮಾಡಿದ್ರು. ಇವರು ಮದುವೆಯಾಗುವ ತನಕ ಇದು ಸೀಕ್ರೆಟ್ ಆಗಿಯೇ ಉಳಿದಿತ್ತು.
ಇದನ್ನೂ ಓದಿ: ಇಂಗ್ಲೆಂಡ್ನಲ್ಲಿ RCB ಸ್ಟಾರ್ ಜಿತೇಶ್ ಶರ್ಮಾಗೆ ಅವಮಾನ; ಗುರು ಕಾರ್ತಿಕ್ ಬಂದು ಸಮಸ್ಯೆ ಇತ್ಯರ್ಥ -VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ