ಭಾರತದ ಯಾವ ರಾಜ್ಯದಲ್ಲಿ ಅತಿ ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ? ಅದು ಕರ್ನಾಟಕದ ಪಕ್ಕದಲ್ಲೇ ಇದೆ!

author-image
Gopal Kulkarni
Updated On
₹1 ಲಕ್ಷ ದಾಟಿದ ಚಿನ್ನದ ಬೆಲೆ.. ಅಕ್ಷಯ ತೃತೀಯಗೆ ಬಂಗಾರ ಮತ್ತಷ್ಟು ದುಬಾರಿ; ಕಾರಣವೇನು?
Advertisment
  • ಭಾರತದ ಈ ಏಕೈಕ ರಾಜ್ಯದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಚಿನ್ನ ಸಿಗುತ್ತದೆ
  • ಕರ್ನಾಟಕದ ಪಕ್ಕದಲ್ಲಿರುವ ರಾಜ್ಯದಲ್ಲಿಯೇ ಕಡಿಮೆ ದರಕ್ಕೆ ಚಿನ್ನ ದೊರಕುತ್ತೆ
  • ದೇಶದ ಉಳಿದ ರಾಜ್ಯಗಳಿಗಿಂತ ಚಿನ್ನದ ದರ ಇಲ್ಲಿ ಕಡಿಮೆ ಇರಲು ಕಾರಣವೇನು?

ಚಿನ್ನದ ದರ, ವಿಶ್ವದಲ್ಲಿ ಎಲ್ಲಾ ಕಡೆ ಒಂದು ದೇಶಕ್ಕಿಂತ ಮತ್ತೊಂದು ದೇಶದಲ್ಲಿ ಭಿನ್ನವಾಗಿರುತ್ತದೆ. ನೀವು ಹೊರದೇಶದಿಂದ ನೀವು ಅಂದುಕೊಂಡಷ್ಟು ಚಿನ್ನವನ್ನು ಭಾರತಕ್ಕೆ ತರಲು ಸಾಧ್ಯವಿಲ್ಲ. ಒಂದಿಷ್ಟು ನಿಯಮಿತ ಪ್ರಮಾಣದ ಬಂಗಾರವನ್ನು ಮಾತ್ರ ನೀವು ವಿದೇಶಗಳಿಂದ ಭಾರತಕ್ಕೆ ತರಲು ಸಾಧ್ಯ. ಭಾರತದಲ್ಲಿಯೂ ಕೂಡ ಚಿನ್ನದ ದರದಲ್ಲಿ ಆಯಾ ಆಯಾ ರಾಜ್ಯಗಳು ಹಾಗೂ ಆಯಾ ಆಯಾ ನಗರಗಳಲ್ಲಿ ವ್ಯತ್ಯಾಸಗಳಿರುತ್ತವೆ

ಹೀಗೆ ರಾಜ್ಯ ರಾಜ್ಯಗಳ ನಡುವೆ ಚಿನ್ನದ ದರದಲ್ಲಿ ಬದಲಾವಣೆಗೆ ಅನೇಕ ಕಾರಣಗಳು ಇವೆ. ತೆರಿಗೆ, ಆಮದು ಸುಂಕ, ಟ್ರಾನ್ಸ್​​​ಪೋರ್ಟ್​ ಕಾಸ್ಟ್​ ಮತ್ತು ಸ್ಥಳೀಯ ಬೇಡಿಕೆಯ ಮೇಲೆ ದರಗಳು ನಿರ್ಧಾರವಾಗುತ್ತವೆ. ಆದ್ರೆ ನಿಮಗೆ ಗೊತ್ತಾ ಭಾರತದ ಈ ಒಂದು ರಾಜ್ಯದಲ್ಲಿ ಉಳಿದ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ನಮಗೆ ಚಿನ್ನ ಸಿಗುತ್ತದೆ. ಯಾವುದು ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಚಿನ್ನವನ್ನು ಮಾರುವ ರಾಜ್ಯ ಅಂತ ನೋಡುವುದಾದ್ರೆ ಅದು ನಮ್ಮ ನೆರೆಯ ರಾಜ್ಯವಾದ ಕೇರಳ.

publive-image

ಕೇರಳದಲ್ಲಿ ನಮಗೆ ಅತ್ಯಂತ ಕಡಿಮೆ ದರಕ್ಕೆ ಚಿನ್ನ ಸಿಗುತ್ತದೆ. ಇಲ್ಲಿರುವಷ್ಟು ಕಡಿಮೆ ದರ ದೇಶದ ಯಾವ ರಾಜ್ಯಗಳಲ್ಲೂ ಇಲ್ಲ. ಅದಕ್ಕೆ ಹಲವಾರು ಕಾರಣಗಳು ಕೂಡ ಇವೆ. ಕೇರಳ ಸಮೀಪದ ಬಂದರುಗಳಿಂದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಅದರ ಸಾರಿಗೆ ವೆಚ್ಚ ತುಂಬಾ ಕಡಿಮೆ. ಅದು ಅಲ್ಲದೇ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಕೇರಳದಲ್ಲಿ ಚಿನ್ನದ ಮಾರಾಟಗಾರರು ವಿಪರೀತ ಟ್ಯಾಕ್ಸ್​ಗಳಲ್ಲಿದೆ ನಿರಾಳರಾಗಿದ್ದಾರೆ ಇಂತಹ ಹಲವು ಕಾರಣಗಳಿಂದ ಕೇರಳದಲ್ಲಿ ಚಿನ್ನದ ಬೆಲೆ ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿ ನೋಡಿದರೆ ಕಡಿಮೆ ಇದೆ.

ಇದನ್ನೂ ಓದಿ: ತನಿಷ್ಕಾ ಶೋರೂಂನಲ್ಲಿ ಸಿನಿಮಿಯ ರೀತಿ ದರೋಡೆ! ಗ್ರಾಹಕರನ್ನು ಗನ್​ ಪಾಯಿಂಟ್​ನಲ್ಲಿಟ್ಟು ಚಿನ್ನಾಭರಣ ದೋಚಿದರು!

ತೆರಿಗೆಯಿಂದ ಬಚಾವಾಗುವ ಚಿನ್ನಾಭರಣದ ಮಾರಾಟಗಾರರು ಗ್ರಾಹಕರಿಗೆ ವಿವಿಧ ರೀತಿಯ ರಿಯಾತಿಗಳನ್ನು ಕೊಡುತ್ತಾರೆ. ಕಡಿಮೆ ದರದಲ್ಲಿ ಅವರಿಗೆ ಚಿನ್ನ ಸಿಗುವಂತೆ ಆಗುತ್ತದೆ. ಇಂದಿಗೂ ಕೂಡ ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದರೆ ಕೇರಳದಲ್ಲಿ ಚಿನ್ನದ ದರ ಕಡಿಮೆಯೇ

publive-image

ಇನ್ನು ಭಾರತದಲ್ಲಿ ಅತಿಹೆಚ್ಚು ಬಂಗಾರವನ್ನು ಬಳಕೆ ಮಾಡುವ ರಾಜ್ಯವು ಕೂಡ ಕೇರಳವೇ. ವರ್ಲ್ಡ್ ಗೋಲ್ಡ್ ಕೌನ್ಸಿಲ್​ ಹೇಳುವ ಪ್ರಕಾರ ಕೇರಳದಲ್ಲಿ ಪ್ರತಿ ವರ್ಷ ಸುಮಾರು 200 ರಿಂದ 225 ಟನ್​ ಬಂಗಾರದ ಮಾರಾಟವಾಗುತ್ತದೆಯಂತೆ. ಇದು ಕೇರಳದ ಜನರಿಗೆ ಚಿನ್ನಾಭರಣದ ಮೇಲೆ ಇರುವ ತೀವ್ರ ಆಕರ್ಷಣೆಯ ಬಗ್ಗೆ ನಮಗೆ ತಿಳಿಸುತ್ತದೆ.

ಇದನ್ನೂ ಓದಿ:ಅಕ್ರಮ ಚಿನ್ನ ಸಾಗಾಣಿಕೆ ಕೇಸ್; ನಟಿ ರನ್ಯಾ ರಾವ್​​ಗೆ 15 ದಿನ ನ್ಯಾಯಾಂಗ ಬಂಧನ

ಕೇರಳ ಬಿಟ್ಟರೆ ನಮ್ಮ ಕರ್ನಾಟಕ, ಪಕ್ಕದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಬೇರೆ ರಾಜ್ಯಗಳಿಗೆ ಹೋಲಿಸಿದರ ಕೊಂಚ ಕಡಿಮೆ ದರವಿದೆ. ಆದರೆ ಅತ್ಯಂತ ಕಡಿಮೆ ದರದಲ್ಲಿ ಚಿನ್ನ ಮಾರುವ ನಂಬರ್ ಒನ್ ಸ್ಥಾನದಲ್ಲಿ ಇಂದಿಗೂ ಕೂಡ ಕೇರಳವೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment