Advertisment

ಅಮೆರಿಕಾದಲ್ಲಿ ಘೋರ ದುರಂತ.. ಸಾವು-ಬದುಕಿನ ಮಧ್ಯೆ ಭಾರತೀಯ ವಿದ್ಯಾರ್ಥಿನಿ ಹೋರಾಟ; ಆಗಿದ್ದೇನು?

author-image
admin
Updated On
ಅಮೆರಿಕಾದಲ್ಲಿ ಘೋರ ದುರಂತ.. ಸಾವು-ಬದುಕಿನ ಮಧ್ಯೆ ಭಾರತೀಯ ವಿದ್ಯಾರ್ಥಿನಿ ಹೋರಾಟ; ಆಗಿದ್ದೇನು?
Advertisment
  • ಅಮೆರಿಕಾದ ರಸ್ತೆ ಅಪಘಾತದಲ್ಲಿ ನೀಲಂ ತಲೆಗೆ ತೀವ್ರ ಪೆಟ್ಟು
  • ಕೋಮಾ ಸ್ಥಿತಿಯಲ್ಲಿರುವ ನೀಲಂ ಶಿಂಧೆ ಬದುಕಿಸಲು ಹೋರಾಟ
  • ತಕ್ಷಣವೇ ಆಮೆರಿಕಾಗೆ ಹೋಗಲು ಸಹಾಯ ಮಾಡಲು ಮನವಿ

ನವದೆಹಲಿ: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಭಾರತೀಯ ಮೂಲದ ವಿದ್ಯಾರ್ಥಿನಿ ನೀಲಂ ಶಿಂಧೆ ಅವರು ಗಂಭೀರವಾಗಿ ಗಾಯಗೊಂಡಿದ್ದು, ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Advertisment

ನೀಲಂ ಶಿಂಧೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯವರು. ಕಳೆದ ಫೆಬ್ರವರಿ 14 ರಂದು ರಸ್ತೆ ಅಪಘಾತದಲ್ಲಿ ನೀಲಂ ತಲೆಗೆ ತೀವ್ರ ಪೆಟ್ಟಾಗಿದೆ. ಕೋಮಾ ಸ್ಥಿತಿಯಲ್ಲಿರುವ ನೀಲಂ ಶಿಂಧೆ ಅವರನ್ನು ಅಮೆರಿಕಾದಲ್ಲಿರುವ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ನೀಲಂ ಶಿಂಧೆ ಅವರ ಪರಿಸ್ಥಿತಿಯನ್ನು ಸ್ನೇಹಿತರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆದಷ್ಟು ಬೇಗ ಅಮೆರಿಕಾಗೆ ಬಂದು ನೀಲಂ ಶಿಂಧೆ ಚಿಕಿತ್ಸೆಗೆ ನೆರವಾಗುವಂತೆ ಕೋರಿಕೊಂಡಿದ್ದಾರೆ.

publive-image

ನೀಲಂ ಶಿಂಧೆ ಕೋಮಾ ಸ್ಥಿತಿಯಲ್ಲಿರುವುದನ್ನ ಕೇಳಿದ ಕುಟುಂಬಸ್ಥರು ಗಾಬರಿಯಾಗಿದ್ದಾರೆ. ಇತ್ತೀಚೆಗೆ ನೀಲಂ ಶಿಂಧೆ ಅವರ ತಾಯಿ ಕೂಡ ನಿಧನರಾಗಿದ್ದರು. ಇದೀಗ ಈ ಆಘಾತದ ಸುದ್ದಿ ಕೇಳಿ ನೀಲಂ ಶಿಂಧೆ ತಂದೆ ತಾನಾಜಿ ಶಿಂಧೆ ಅವರು ತಕ್ಷಣವೇ ಆಮೆರಿಕಾಗೆ ಹೋಗಲು ಸಹಾಯ ಮಾಡಲು ಮನವಿ ಮಾಡಿದ್ದಾರೆ.

Advertisment

ಇದನ್ನೂ ಓದಿ: ಇವು ವಿಶ್ವದ ಟಾಪ್ 5 ಪುಟ್ಟ ಹಾಗೂ ಸುಂದರ ದೇಶಗಳು; ಪುಟಾಣಿ ದೇಶಗಳ ವಿಶೇಷತೆಗಳು ಏನು?  

ಈ ಕುರಿತು ಮಾತನಾಡಿರುವ ಕುಟುಂಬಸ್ಥರು ನಾವು ಪಾಸ್‌ಪೋರ್ಟ್ ಆಫೀಸ್‌ಗೆ ತೆರಳಿದ್ದು, ಆದರೆ ಸೂಕ್ತವಾದ ಸ್ಪಂದನೆ ಸಿಗಲಿಲ್ಲ. ಕೇಂದ್ರ ಸರ್ಕಾರದಿಂದ ತಕ್ಷಣವೇ ವೀಸಾ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ಎನ್‌ಸಿಪಿ ನಾಯಕಿ, ಸಂಸದೆ ಸುಪ್ರಿಯಾ ಸುಳೆ ಅವರು ತಾನಾಜಿ ಶಿಂಧೆ ಅವರ ನೆರವಿಗೆ ಧಾವಿಸಿದ್ದಾರೆ. ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್‌ಗೆ ಮನವಿ ಮಾಡಿರುವ ಸಂಸದೆ ಸುಪ್ರಿಯಾ ಸುಳೆ, ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಜೈಶಂಕರ್ ಯಾವಾಗಲೂ ಸಹಾಯ‌ ಮಾಡುತ್ತಾರೆ. ನೀಲಂ ಶಿಂಧೆ ಅವರ ತಂದೆಗೆ ಆಮೆರಿಕಾದ ವೀಸಾ ಪಡೆಯಲು ನೆರವು ನೀಡುವಂತೆ ಮನವಿ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment